Davanagere News: ವಿವಾಹಿತೆಯೊಂದಿಗೆ ಪತಿ ನಾಪತ್ತೆ ಶಂಕೆ, ದೂರು ನೀಡಿದ ಪತ್ನಿ: ಮೌನಕ್ಕೆ ಶರಣಾದ ಪೋಲಿಸ್​​

ನಾಲ್ಕು ಮಕ್ಕಳು ಹಾಗೂ ಪತ್ನಿಯನ್ನ ಬಿಟ್ಟು ಪತಿ ನಾಪತ್ತೆ ಆಗಿರುವಂತಹ ಘಟನೆ ದಾವಣಗೆರೆಯ ಭಗರತ್ ಸಿಂಗ್ ನಗರದಲ್ಲಿ ನಡೆದಿದೆ. ಈ ಕುರಿತಾಗಿ ಪತ್ನಿ ದೂರು ನೀಡಿದ್ದು, ಆದರೆ ಕೇಸ್ ದಾಖಲಿಸಿಕೊಂಡಿರುವ ಕೆಟಿಜೆ ನಗರ ಪೊಲೀಸರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.

Davanagere News: ವಿವಾಹಿತೆಯೊಂದಿಗೆ ಪತಿ ನಾಪತ್ತೆ ಶಂಕೆ, ದೂರು ನೀಡಿದ ಪತ್ನಿ: ಮೌನಕ್ಕೆ ಶರಣಾದ ಪೋಲಿಸ್​​
ನಾಪತ್ತೆಯಾದ ಪತಿ ಶಫೀ
Edited By:

Updated on: Jul 21, 2023 | 3:08 PM

ದಾವಣಗೆರೆ, ಜುಲೈ 21: ನಾಲ್ಕು ಮಕ್ಕಳು ಹಾಗೂ ಪತ್ನಿಯನ್ನ ಬಿಟ್ಟು ವಿವಾಹಿತೆಯೊಬ್ಬಳ ಜೊತೆ ಪತಿ (husband) ನಾಪತ್ತೆ ಆಗಿರುವಂತಹ ಶಂಕೆ ವ್ಯಕ್ತಪಡಿಸಲಾಗಿದೆ. ಜಿಲ್ಲೆಯ ಭಗರತ್ ಸಿಂಗ್ ನಗರದಲ್ಲಿ ಘಟನೆ ನಡೆದಿದ್ದು, ಶಫೀ (40) ನಾಪತ್ತೆಯಾದ ಪತಿ‌. ಪತ್ನಿ ಫಾತೀಮಾ ಭಾನುಳಿಂದ ಕೆಟಿಜೆ ನಗರ ಪೊಲೀಸ್ ಠಾಣೆಗೆ ಈ ಕುರಿತಾಗಿ ದೂರು ನೀಡಲಾಗಿದೆ.

ಸಣ್ಣ ವಯಸ್ಸಿನ ಮೂರು ಗಂಡು ಹಾಗೂ ಒಂದು ಹೆಣ್ಣು ಮಗುವಿನೊಂದಿಗೆ ಫಾತೀಮಾ ಭಾನು ದಿನ‌ಕಳೆಯುತ್ತಿದ್ದು, ಮನೆ ಬಾಡಿಗೆ ಹಾಗೂ ರೇಷನ್​ಗಾಗಿ ಪರದಾಡುವಂತಾಗಿದೆ. ನಾಪತ್ತೆಯಾದ ಪತಿಯನ್ನ ಹುಡುಕಿಕೊಡಿ ಎಂದು ಪತ್ನಿ ವಿನಂತಿ ಮಾಡಿದ್ದಾಳೆ.

ಇದನ್ನೂ ಓದಿ: ಪ್ರೀತಿಸಿ, ಗರ್ಭಿಣಿಯಾಗಿಸಿ ಕೈಕೊಟ್ಟ ಮಹಾಶಯ: ವರನಿಗೆ ಥಳಿಸಿ ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ಸಿನಿಮೀಯ ರೀತಿಯಲ್ಲಿ ಮದುವೆ!

ಚಿನ್ನ ಕಳ್ಳತನ ದಂಧೆ

ನಾಪತ್ತೆಯಾದ ಪತಿ ಶಫೀ ಹಾಗೂ ಅವರ ಸಂಬಂಧಿಕರು ಸೇರಿ ಅಂಗಡಿಗಳಿಗೆ ತೆರಳಿ ಚಿನ್ನ ಕಳ್ಳನ ದಂಧೆ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಇಂತಹ ಕೆಲಸ ತಾನು‌ ನಿರಾಕರಿಸಿದ್ದರಿಂದ ಪತಿಯಿಂದ ಹಿಂಸೆ ಹಾಗೂ ನನ್ನನ್ನು ಬಿಟ್ಟು ಬಿಡುವಂತೆ ಬೇದರಿಕೆ ಹಾಕುತ್ತಿದ್ದ ಎಂದು ಪತಿ ವಿರುದ್ಧ ಪತ್ನಿ ಆರೋಪಿಸಿದ್ದಾಳೆ.

ಇದನ್ನೂ ಓದಿ: 16 ತಿಂಗಳ ಮಗುವಿನೊಂದಿಗೆ ನಾಪತ್ತೆಯಾಗಿದ್ದ ತಂದೆ ಯುಪಿಯಲ್ಲಿ ಪತ್ತೆ; ಕೋರ್ಟ್​ನಲ್ಲಿ ಹೋರಾಟ ಮಾಡಿ ಮಗು ಪಡೆದ ತಾಯಿ

ಇಷ್ಟಾದರೂ ಕಳೆದು ಹೋದ ಪತಿಗಾಗಿ ಪತ್ನಿ ಹಗಲು ರಾತ್ರಿ ಹುಡುಕಾಟ ನಡೆಸುತ್ತಿದ್ದಾಳೆ. ಮನೆಗೆ ಮರಳುವಂತೆ ಪತಿಗೆ ವಿನಂತಿ ಮಾಡಿದ್ದಾಳೆ. ಆದರೆ ಕೇಸ್ ದಾಖಲಿಸಿಕೊಂಡಿರುವ ಕೆಟಿಜೆ ನಗರ ಪೊಲೀಸರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:07 pm, Fri, 21 July 23

ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
Loading...
Unable to load recommendations.
Follow Us