16 ತಿಂಗಳ ಮಗುವಿನೊಂದಿಗೆ ನಾಪತ್ತೆಯಾಗಿದ್ದ ತಂದೆ ಯುಪಿಯಲ್ಲಿ ಪತ್ತೆ; ಕೋರ್ಟ್​ನಲ್ಲಿ ಹೋರಾಟ ಮಾಡಿ ಮಗು ಪಡೆದ ತಾಯಿ

ಹರಿಹರದಲ್ಲಿ 16 ತಿಂಗಳ ಮಗುವಿನೊಂದಿಗೆ ನಾಪತ್ತೆ ಆಗಿದ್ದ ತಂದೆ ಯುಪಿಯಲ್ಲಿ ಪತ್ತೆಯಾಗಿದ್ದಾನೆ. ಈ ವೇಳೆ ಡೈವೋರ್ಸ್ ಕೊಟ್ಟರೇ ಮಾತ್ರ ಮಗು ಕೊಡುವೆ ಎಂದು ಪತ್ನಿಗೆ ಕಿರುಕಳ ನೀಡಿದ್ದು, ಈ ಹಿನ್ನಲೆ ಮಹಿಳೆ ಕೋರ್ಟ್​ ಮೊರೆ ಹೋಗಿ ಮಗು ಪಡೆದುಕೊಂಡಿದ್ದಾಳೆ.

16 ತಿಂಗಳ ಮಗುವಿನೊಂದಿಗೆ ನಾಪತ್ತೆಯಾಗಿದ್ದ ತಂದೆ ಯುಪಿಯಲ್ಲಿ ಪತ್ತೆ; ಕೋರ್ಟ್​ನಲ್ಲಿ ಹೋರಾಟ ಮಾಡಿ ಮಗು ಪಡೆದ ತಾಯಿ
ಹರಿಹರದಲ್ಲಿ ತಾಯಿ ಮಡಿಲು ಸೇರಿದ 16 ತಿಂಗಳ ಮಗು
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 21, 2023 | 7:14 AM

ದಾವಣಗೆರೆ, ಜು.21: ಅದು ಕೇವಲ16 ತಿಂಗಳ ಮಗು, ತಾಯಿ ಮಡಿಲಲ್ಲೇ ತನ್ನ ಜಗತ್ತು ಕಾಣುವ ವಯಸ್ಸು, ಎದೆಹಾಲು ಉಂಡು ಬೆಳೆಯಬೇಕಿದ್ದ 16 ತಿಂಗಳ ಮಗುವನ್ನ ತಂದೆಯೇ ಅಪಹರಿಸಿದ್ದ ಘಟನೆ ದಾವಣಗೆರೆ(Davanagere) ಜಿಲ್ಲೆಯ ಹರಿಹರ ನಗರದಲ್ಲಿ ನಡೆದಿತ್ತು. ಇದೇ 2023 ಜನವರಿ 27 ರಂದು ಹರಿಹರ ನಗರದ ಒಂದು ಮುಸ್ಲಿಂ ಕುಟುಂಬಕ್ಕೆ ಶಾಕ್ ಆಗಿತ್ತು. ನೂರ್ ಜಾನ್ ಎಂಬ ಖಾಸಗಿ ಶಾಲೆಯ ಶಿಕ್ಷಕಿ ಮದುವೆಯಾದರೂ ಪತಿಯೊಂದಿಗೆ ತನ್ನ ತಂದೆ ಮನೆಯಲ್ಲಿಯೇ ವಾಶವಾಗಿದ್ದಳು. ಪತಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ. ಜೀವನ ಸುಗಮವಾಗಿ ಸಾಗಿತ್ತು. ಇಬ್ಬರು ದಂಪತಿಗಳಿಗೆ 16 ತಿಂಗಳ ಹಿಂದೆ ಒಂದು ಗಂಡು ಮಗು ಜನಿಸಿತ್ತು. ಆದರೆ, ನೂರಜಾನ್ ಪತಿಯ ತಲೆಯಲ್ಲಿ ಅದ್ಯಾವ ಭೂತ ಹೊಕ್ಕಿತ್ತು ಗೊತ್ತಿಲ್ಲ, ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ತನ್ನ ಸ್ವಂತ ಮಗುವನ್ನೆ ಅಪಹರಿಸಿಕೊಂಡು ಎಸ್ಕೇಪ್ ಆಗಿದ್ದ.

ಮಗು ಜೊತೆ ಉತ್ತರ ಪ್ರದೇಶಕ್ಕೆ ಎಸ್ಕೇಪ್​

ಅಂದು ನಮಾಜ್ ಮುಗಿಸಿ ಮನೆಗೆ ಬಂದ ನೂರಜಾನ್ ಅವರ ತಂದೆಗೆ ಶಾಕ್ ಕಾದಿತ್ತು. ಮನೆಯಲ್ಲಿ ಮಗು ಇಲ್ಲದಿರುವುದನ್ನು ಗಮನಿಸಿ ತಕ್ಷಣ ತಮ್ಮ ಮಗಳು ನೂರಜಾನ್​ಗೆ ವಿಷಯ ತಿಳಿಸಿದ್ದರು. ಪತಿಗೆ ಫೋನ್ ಮಾಡಿ ಕೇಳಿದರೆ ಇಲ್ಲೆ ಕಟಿಂಗ್ ಮಾಡಿಸಲು ಮಗು ಕರೆದುಕೊಂಡು ಬಂದಿದ್ದೆನೆ ಎಂದಿದ್ದ. ಸಂಶಯಗೊಂಡ ನೂರಜಾನ್ ಮತ್ತು ಅವಳ ತಂದೆ ಹರಿಹರ ನಗರದ ಕಟಿಂಗ್ ಶಾಪಗಳಿಗೆಲ್ಲ ಹೋಗಿ ನೋಡಿದ್ದಾರೆ. ನಂತರ ಹರಿಹರ ನಗರ ಪೊಲೀಸ್ ಠಾಣೆಗೆ ಬಂದು ವಿಷಯ ತಿಳಿಸಿದ್ದಾರೆ. ನೂರಜಾನ್ ಕಡೆಯಿಂದ ಪತಿಗೆ ಪೋನ್ ಮಾಡಲು ಹೇಳಿ ಟ್ರ್ಯಾಪ್ ಮಾಡಿದಾಗ, ಮಗುವಿನ ಜೊತೆ ಆತ ಉತ್ತರ ಪ್ರದೇಶಕ್ಕೆ ಹೋಗುತ್ತಿರುವುದು ಗೊತ್ತಾಗಿದೆ.

ಇದನ್ನೂ ಓದಿ:ಉಡುಪಿ: ಮಧ್ಯರಾತ್ರಿ ನಿದ್ದೆಗಣ್ಣಲ್ಲಿ ಕೊರಗಜ್ಜನ ದೈವಸ್ಥಾನಕ್ಕೆ ಹೋಗಿ ಸೇಫ್ ಆಗಿ ಮನೆಗೆ ಬಂದ ಮಗು, ಕೊರಗಜ್ಜ ಪವಾಡ ಎಂದ ಭಕ್ತರು

ಯುಪಿಯಿಂದ ಸೌದಿ ಅರೇಬಿಯಾಗೆ ಹೋಗಿದ್ದ ತಂದೆ

ಉತ್ತರ ಪ್ರದೇಶದಿಂದ ತಂದೆ ಸೌದಿ ಅರೇಬಿಯಾಗೆ ಹೋಗಿದ್ದ ಎಂದು ತಿಳಿದು ಬಂದಿದೆ. ತಂದೆಯೇ ತನ್ನ ಮಗನನ್ನು ಕರೆದುಕೊಂಡು ಹೋಗಿದ್ದರಿಂದ ಕೇಸ್ ಮಾಡಲು ಬರುವುದಿಲ್ಲ. ನೀವು ಕೋರ್ಟ್​ಗೆ ಹೋಗಿ ಎಂದು ಹರಿಹರ ಪೊಲೀಸ್ ಹೇಳಿದ್ದಾರೆ. ಇತ್ತ ನೂರಜಾನ್ ಪತಿ ತಾನು ಎರಡ್ಮೂರು ದಿನ ಬಿಟ್ಟು ಬರುತ್ತೇನೆ ಎಂದು ಹೇಳಿ ಕಾಲ ದೂಡುತ್ತಿದ್ದ. ಇತ್ತ ಮಗುವಿಗೆ ಎದೆ ಹಾಲುಣಿಸದೆ ಎದೆಯಲ್ಲಿ ಹಾಲು ಹೆಚ್ಚಾಗಿ ನೂರಜಾನ್ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಮಗುವಿನ ನೆನಪಲ್ಲಿ ಮಾನಸಿಕವಾಗಿ ನೊಂದು ಕೆಲಸವನ್ನು ಬಿಟ್ಟಿದ್ದಳು.

ಮಗು ಬೇಕಿದ್ರೆ, ಡೈವೋರ್ಸ್ ಕೊಟ್ಟು ಮಗು ತೆಗೆದುಕೊಂಡು ಹೋಗೆಂದ ಪಾಪಿ ಪತಿ

ಿಇನ್ನು ಇದೆ ವೇಳೆ ನಿನಗೆ ಮಗು ಬೇಕಿದ್ದರೆ, ಡೈವೋರ್ಸ್ ಕೊಟ್ಟು ಮಗು ತೆಗೆದುಕೊಂಡು ಹೋಗು ಎಂದು ಪತಿ ಹೇಳಿದ್ದಾನೆ. ಇದರಿಂದ ತೀವ್ರ ಆತಂಕಗೊಂಡ ನೂರಜಾನ್ ತನ್ನ ಮಗು ಕೊಡಿಸುವಂತೆ ಹರಿಹರ ಕೋರ್ಟ್​ ಮೊರೆ ಹೋಗಿದ್ದಳು. ಹರಿಹರದ ಸಿದ್ದಲಿಂಗಸ್ವಾಮೀ ಎಂಬ ನ್ಯಾಯವಾದಿಗಳು ಮಹಿಳೆ ಪರ ವಾದ ಮಾಡುತ್ತಾರೆ. ಇದು ವಿಶೇಷ ಪ್ರಕರಣ ಎಂದು ಕೋರ್ಟ್​ಗೆ ನ್ಯಾಯವಾದಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ. ತಾಯಿಗೆ ಮಗುವನ್ನು ಕೊಡಿಸುವಂತೆ ಕೋರ್ಟ್ ತೀರ್ಪು ನೀಡಿ, ಪೊಲೀಸ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚನೆ ನೀಡಿದೆ.

ಇದನ್ನೂ ಓದಿ:11 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ 2 ವರ್ಷದ ಮಗುವಿನ ತಲೆಬುರುಡೆ ಮರು ಜೋಡಣೆ

ತಾಯಿ ಮಡಿಲು ಸೇರಿದ ಮಗು

ತಕ್ಷಣ ಹರಿಹರ ಪೊಲೀಸ್ ಉತ್ತರ ಪ್ರದೇಶದ ಕಾಕೋರಿಯ ಪೊಲೀಸರ ಸಹಾಯದೊಂದಿಗೆ ತಾಯಿಗೆ ಆಕೆಯ ಮಗುವನ್ನು ಒಪ್ಪಿಸಿದ್ದಾರೆ. ಮಗು ಸಿಕ್ಕ ಸಂತೋಷಕ್ಕೆ ತಾಯಿ ಹರಿಹರದಲ್ಲಿನ ತನ್ನ ಮನೆಯ ಅಕ್ಕಪಕ್ಕದ ಜನರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾಳೆ. ಒಟ್ಟಾರೆ ನ್ಯಾಯಾಲಯ ಮತ್ತು ಪೊಲೀಸ್ ಸಹಾಯದಿಂದ ಮರಳಿ ಆ ಮಗು ತಾಯಿ ಮಡಿಲು ಸೇರಿಸಿದ್ದು ಶ್ಲಾಘನೀಯ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ