AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

11 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ 2 ವರ್ಷದ ಮಗುವಿನ ತಲೆಬುರುಡೆ ಮರು ಜೋಡಣೆ

ಕ್ರೇನಿಯೊಸಿನೊಸ್ಟೊಸಿಸ್ ಅಪರೂಪದ ಕಾಯಿಲೆಯಾಗಿದ್ದು, ಇದು ಬೆಳವಣೆಗೆ ಹೊಂದುತ್ತಿರುವ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ. ಇದಕ್ಕೆ ಚಿಕಿತ್ಸೆ ನೀಡದೆ ಬಿಟ್ಟರೆ ಕಣ್ಣಿನ ಸಮಸ್ಯೆ ಅಥವಾ ಸಾವಿಗೆ ಕಾರಣವಾಗಬಹುದು.

11 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ 2 ವರ್ಷದ ಮಗುವಿನ ತಲೆಬುರುಡೆ ಮರು ಜೋಡಣೆ
ತಲೆಬುರುಡೆಯ ಶಸ್ತ್ರಚಿಕಿತ್ಸೆImage Credit source: SWNS
ಅಕ್ಷತಾ ವರ್ಕಾಡಿ
|

Updated on: Jul 19, 2023 | 3:39 PM

Share

ಇತ್ತೀಚೆಗಷ್ಟೇ ವರದಿಯಾದ ಪವಾಡ ಸದೃಶ ಪ್ರಕರಣವೊಂದರಲ್ಲಿ ಎರಡು ವರ್ಷದ ಬಾಲಕನ ತಲೆಬುರುಡೆಯನ್ನು ಶಸ್ತ್ರಚಿಕಿತ್ಸೆಗಾಗಿ ಹೋಳು ಮಾಡಿ 11 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಮತ್ತೆ ಮರು ಜೋಡಣೆ ಮಾಡಲಾಗಿದೆ. ಬ್ಯೂ ಹ್ಯಾರಿಸನ್ ಎಂಬ ಬಾಲಕ ಕ್ರೇನಿಯೊಸಿನೊಸ್ಟೊಸಿಸ್ ಎಂಬ ಅಪರೂಪದ ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದ. ಈ ಕಾಯಿಲೆ ನೇರವಾಗಿ ಮೆದುಳಿನ ಮೇಲೆ ಹಾನಿಕಾರಕ ಪರಿಣಾಮವನ್ನು ಉಂಟು ಮಾಡುವುದರಿಂದ ವೈದ್ಯರು ಆತನ ತಲೆ ಬರುಡೆಯನ್ನು 11 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ ಮಗುವಿನ ತಲೆಬುರುಡೆಯನ್ನು ಮತ್ತೆ ಜೋಡಿಸಿದ್ದಾರೆ.

ಕ್ರೇನಿಯೊಸಿನೊಸ್ಟೊಸಿಸ್ ಅಪರೂಪದ ಕಾಯಿಲೆಯಾಗಿದ್ದು, ಇದು ಬೆಳವಣೆಗೆ ಹೊಂದುತ್ತಿರುವ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ. ಇದಕ್ಕೆ ಚಿಕಿತ್ಸೆ ನೀಡದೆ ಬಿಟ್ಟರೆ ಕಣ್ಣಿನ ಸಮಸ್ಯೆ ಅಥವಾ ಸಾವಿಗೆ ಕಾರಣವಾಗಬಹುದು. ವೈದ್ಯರು 11-ಗಂಟೆಗಳ ಅವಧಿಯ ತೀವ್ರವಾದ ಶಸ್ತ್ರಚಿಕಿತ್ಸೆಯನ್ನು ನಡೆಸಿ, ಪುಟ್ಟ ಬಾಲಕನ ತಲೆ ಬುರುಡೆಯನ್ನು ಹೊರಗಡೆಯಿಂದ ಹೋಳು ಮಾಡಿ ಮತ್ತೆ ಜೋಡಿಸಿ ಶಸ್ತ್ರ ಚಿಕಿತ್ಸೆಯಲ್ಲಿ ಯಶಸ್ಸು ಕಂಡಿದ್ದಾರೆ.

ಇದನ್ನೂ ಓದಿ: ಕಛೇರಿಯಲ್ಲಿ ಇಡೀ ದಿನ ಕುಳಿತುಕೊಂಡೆ ಇರುತ್ತೀರಾ? ಹಾಗಿದ್ದರೆ ಅಪಾಯವನ್ನು ತಿಳಿದುಕೊಳ್ಳಿ

ಈ ಶಸ್ತ್ರಚಿಕಿತ್ಸೆಯು ಮೆದುಳು ಸರಿಯಾಗಿ ಬೆಳೆಯಲು ತಲೆಬುರುಡೆಯಲ್ಲಿ ಅಂತರವನ್ನು ಸೃಷ್ಟಿಸುವ ಪ್ರಕ್ರಿಯೆಯಾಗಿದ್ದು, ಇಂತಹ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ. ಆದರೆ ಶಸ್ತ್ರ ಚಿಕಿತ್ಸೆಯ ನಂತರದ ಕೆಲವೇ ಗಂಟೆಗಳಲ್ಲಿ ಮಗುವಿಗೆ ಪ್ರಜ್ಞೆ ಬಂದಿದ್ದು, ಮಗು ಚೇತರಿಕೆ ಕಂಡಿದೆ ಎಂದು ವರದಿಯಾಗಿದೆ. ಈ  ಪ್ರಕರಣ ಅಚ್ಚರಿಯನ್ನುಂಟು ಮಾಡುವುದಂತೂ ಖಂಡಿತಾ.

ಮತ್ತಷ್ಟು ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: