ಸಮಂತಾ ಬಳಿಕ ಪೂನಂ​ ಕೌರ್​ಗೆ ಅಂಟಿತು ವಿಚಿತ್ರ ಕಾಯಿಲೆ; ಮೆದುಳಿನ ಮೇಲೂ ಬೀರುತ್ತೆ ಪರಿಣಾಮ  

ನವೆಂಬರ್ 18ರಂದು ನಟಿಗೆ ಫೈಬ್ರೋಮಯಾಲ್ಜಿಯಾ ಸಮಸ್ಯೆ ಇರುವುದು ತಿಳಿದು ಬಂದಿದೆ. ಆಯುರ್ವೇದ ಚಿಕಿತ್ಸೆ ಬಳಿಕ ನಟಿಯ ಆರೋಗ್ಯ ಸುಧಾರಣೆ ಕಂಡಿದೆ ಎನ್ನಲಾಗಿದೆ.

ಸಮಂತಾ ಬಳಿಕ ಪೂನಂ​ ಕೌರ್​ಗೆ ಅಂಟಿತು ವಿಚಿತ್ರ ಕಾಯಿಲೆ; ಮೆದುಳಿನ ಮೇಲೂ ಬೀರುತ್ತೆ ಪರಿಣಾಮ  
ಸಮಂತಾ-ಪೂನಂ
Follow us
| Updated By: ರಾಜೇಶ್ ದುಗ್ಗುಮನೆ

Updated on:Dec 02, 2022 | 8:27 AM

ನಟಿ ಸಮಂತಾ (Samantha) ಅವರು myositis ಹೆಸರಿನ ಕಾಯಿಲೆಗೆ ತುತ್ತಾಗಿದ್ದಾರೆ. ಈ ಸಮಸ್ಯೆ ಎದುರಾದರೆ ಸ್ನಾಯುಗಳಲ್ಲಿ ಸಾಕಷ್ಟು ನೋವು ಕಾಣಿಸಿಕೊಳ್ಳುತ್ತದೆ. ಈ ಕಾರಣಕ್ಕೆ ಸಮಂತಾ ಒಪ್ಪಿಕೊಂಡ ಸಿನಿಮಾ ಕೆಲಸಗಳು ಹಿಂದಿ ಬಿದ್ದಿವೆ. ಈ ಕಾಯಿಲೆಗೆ ಚಿಕಿತ್ಸೆ ಪಡೆಯಲು ಸಮಂತಾ ಹರಸಹಾಸ ಪಡುತ್ತಿದ್ದಾರೆ. ಸದ್ಯ ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆಯಲು ಅವರು ನಿರ್ಧರಿಸಿದ್ದಾರೆ. ಈಗ ಪೂನಂ ಕೌರ್​ಗೆ (Poonam Kaur) ಇದೇ ಮಾದರಿಯ ಸಮಸ್ಯೆ ಕಾಣಿಸಿಕೊಂಡಿದೆ.

ಪೂನಂ​ ಕೌರ್​ಗೆ ಕಾಣಿಸಿಕೊಂಡಿರುವ ರೋಗದ ಹೆಸರು ಫೈಬ್ರೋಮಯಾಲ್ಜಿಯಾ. ಇದು ಕೂಡ ಅಪರೂಪದ ಕಾಯಿಲೆ. ನವೆಂಬರ್ 12ರಂದು ಪೂನಂ ಅವರು ದೆಹಲಿಯಲ್ಲಿ ಬ್ರಹ್ಮಕುಮಾರಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿ ಆಗಲು ಹೊರಟಿದ್ದರು. ಆಗ ತೀವ್ರವಾಗಿ ಬೆನ್ನು ನೋವು ಕಾಣಿಸಿಕೊಂಡಿದೆ. ನಂತರ ಅವರು ಕೇರಳಕ್ಕೆ ತೆರಳಿ ಆಯುರ್ವೇದ ಚಿಕಿತ್ಸೆ ಪಡೆದಿದ್ದಾರೆ. ನವೆಂಬರ್ 18ರಂದು ನಟಿಗೆ ಫೈಬ್ರೋಮಯಾಲ್ಜಿಯಾ ಸಮಸ್ಯೆ ಇರುವುದು ತಿಳಿದು ಬಂದಿದೆ. ಆಯುರ್ವೇದ ಚಿಕಿತ್ಸೆ ಬಳಿಕ ನಟಿಯ ಆರೋಗ್ಯ ಸುಧಾರಣೆ ಕಂಡಿದೆ ಎನ್ನಲಾಗಿದೆ. ಸದ್ಯ ಅವರು ಮುಂಬೈನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

Myositis ರೀತಿಯೇ ಫೈಬ್ರೋಮಯಾಲ್ಜಿಯಾವನ್ನು ಗುಣಪಡಿಸಲು ಸಾಧ್ಯವಿಲ್ಲ. ಇದು Myositis ಕಾಯಿಲೆಯಷ್ಟು ಅಪಾಯಕಾರಿ ಅಲ್ಲ ಎನ್ನಲಾಗಿದೆ. ಫೈಬ್ರೋಮಯಾಲ್ಜಿಯಾ ಬಂದರೆ ಸ್ನಾಯುಗಳಲ್ಲಿ ನೋವು ಹೆಚ್ಚಾಗುತ್ತದೆ. ಮಿದುಳಿನ ಕಾರ್ಯನಿರ್ವಹಣೆಯ ಮೇಲೆ ಇದು ಪರಿಣಾಮ ಬೀರುತ್ತವೆ. ಆದರೆ, ಪೂನಂ ಪರಿಸ್ಥಿತಿ ಅಷ್ಟು ಅಪಾಯದಲ್ಲಿ ಇಲ್ಲ ಎನ್ನಲಾಗಿದೆ.

ಪೂನಂ ಅವರು ಇತ್ತೀಚೆಗೆ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿ ಆಗಿದ್ದರು. ರಾಹುಲ್ ಗಾಂಧಿ ಅವರ ಜತೆ ಕೈ ಕೈ ಹಿಡಿದು ಸಾಗಿದ್ದರು. ಈ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಪೂನಂ ಅವರಿಗೆ ಮಿಸ್ ಆಂಧ್ರ ಪ್ರದೇಶ ಅವಾರ್ಡ್ ಸಿಕ್ಕ ನಂತರದಲ್ಲಿ ಜನಪ್ರಿಯತೆ ಪಡೆದರು. ಅವರು 2006ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು.  2008ರಲ್ಲಿ ತೆರೆಗೆ ಬಂದ ಕನ್ನಡದ ‘ಬಂಧು ಬಳಗ’ ಚಿತ್ರದಲ್ಲಿ ಪೂನಂ ಬಣ್ಣ ಹಚ್ಚಿದ್ದರು. ಇದು ಅವರು ಕನ್ನಡದಲ್ಲಿ ನಟಿಸಿದ ಮೊದಲ ಹಾಗೂ ಕೊನೆಯ ಸಿನಿಮಾ. ಇತ್ತೀಚೆಗೆ ಅವರು ಅಷ್ಟಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ.

ಇದನ್ನೂ ಓದಿ: ಸಮಂತಾ ನಟನೆಯ‘ಯಶೋದಾ’ ಚಿತ್ರಕ್ಕೆ ಕೋರ್ಟ್​​ನಿಂದ ತಡೆ; ಒಟಿಟಿ ರಿಲೀಸ್​​ಗೆ ಸಂಕಷ್ಟ

ಸಮಂತಾಗೆ ದಕ್ಷಿಣ ಕೊರಿಯಾದಲ್ಲಿ ಚಿಕಿತ್ಸೆ?

ನಟಿ ಸಮಂತಾ ರುತ್​ ಪ್ರಭು ಅವರಿಗೆ ಆರೋಗ್ಯ ಕೈ ಕೊಟ್ಟಿದೆ. ಈ ವಿಚಾರವನ್ನು ಅವರು ಬಾಯ್ಬಿಟ್ಟು ಹೇಳುವುದಕ್ಕೂ ಮುನ್ನವೇ ಅನೇಕ ಮಾಧ್ಯಮಗಳಲ್ಲಿ ಜಗಜ್ಜಾಹೀರು ಆಗಿತ್ತು. ನಂತರ ತಮಗೆ Myositis ಎಂಬ ಕಾಯಿಲೆ ಇದೆ ಎಂದು ಸ್ವತಃ ಸಮಂತಾ ಒಪ್ಪಿಕೊಂಡರು ಆಯುರ್ವೇದ ಔಷದಿ ಪ್ರಯತ್ನಿಸಿದ್ದ ಸಮಂತಾ ಅವರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಆದ್ದರಿಂದ ಅವರು ದಕ್ಷಿಣ ಕೊರಿಯಾದಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲಿದ್ದಾರೆ ಎಂಬ ಮಾಹಿತಿ ಹರಡಿದೆ. ಈ ಬಗ್ಗೆ ಸಮಂತಾ ಕಡೆಯಿಂದ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.

Published On - 8:27 am, Fri, 2 December 22

ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ