ಸಮಂತಾ ನಟನೆಯ‘ಯಶೋದಾ’ ಚಿತ್ರಕ್ಕೆ ಕೋರ್ಟ್​​ನಿಂದ ತಡೆ; ಒಟಿಟಿ ರಿಲೀಸ್​​ಗೆ ಸಂಕಷ್ಟ

‘ಯಶೋದಾ’ ಚಿತ್ರದಲ್ಲಿ ಸಮಂತಾ ಅವರು ಎರಡು ಶೇಡ್​ನಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಡಿಗೆ ತಾಯ್ತನದ ವಿಚರವೂ ಸಿನಿಮಾದಲ್ಲಿ ಇದೆ. ಈ ಚಿತ್ರ ಈಗ ವಿವಾದದ ಕೇಂದ್ರ ಬಿಂದು ಆಗಿದೆ. ‘

ಸಮಂತಾ ನಟನೆಯ‘ಯಶೋದಾ’ ಚಿತ್ರಕ್ಕೆ  ಕೋರ್ಟ್​​ನಿಂದ ತಡೆ; ಒಟಿಟಿ ರಿಲೀಸ್​​ಗೆ ಸಂಕಷ್ಟ
ಸಮಂತಾ
TV9kannada Web Team

| Edited By: Rajesh Duggumane

Nov 25, 2022 | 8:02 AM

ನಟಿ ಸಮಂತಾ (Samantha) ನಟನೆಯ ‘ಯಶೋದಾ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿದೆ. ಕಡಿಮೆ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 30 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರದಿಂದ ಸಮಂತಾ ದೊಡ್ಡ ಗೆಲುವು ಕಂಡಿದ್ದಾರೆ. ಅನಾರೋಗ್ಯದ ನಡುವೆಯೂ ಸಮಂತಾ ಈ ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದರು. ಅದು ಫಲ ಕೊಟ್ಟಿದೆ. ಈ ಮಧ್ಯೆ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ.

‘ಯಶೋದಾ’ ಚಿತ್ರದಲ್ಲಿ ಸಮಂತಾ ಅವರು ಎರಡು ಶೇಡ್​ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಡಿಗೆ ತಾಯ್ತನದ ವಿಚಾರವೂ ಸಿನಿಮಾದಲ್ಲಿ ಇದೆ. ಈ ಚಿತ್ರ ಈಗ ವಿವಾದದ ಕೇಂದ್ರ ಬಿಂದು ಆಗಿದೆ. ‘ಯಶೋದಾ’ ಸಿನಿಮಾದಲ್ಲಿ ‘ಇವಾ​’ ಆಸ್ಪತ್ರೆಯನ್ನು ಕೆಟ್ಟ ರೀತಿಯಲ್ಲಿ ತೋರಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಕಾರಣಕ್ಕ ಆಸ್ಪತ್ರೆಯ ಮ್ಯಾನೇಜ್​ಮೆಂಟ್ ಈ ಪ್ರಕರಣದಲ್ಲಿ ಕೋರ್ಟ್ ಮೆಟ್ಟಿಲೇರಿತ್ತು. ಸದ್ಯ, ಈ ಪ್ರಕರಣದಲ್ಲಿ ಆಸ್ಪತ್ರೆಯ ಪರವಾಗಿ ಕೋರ್ಟ್ ಆದೇಶ ನೀಡಿದೆ. ಒಟಿಟಿ ರಿಲೀಸ್​ ಅನ್ನು ಸದ್ಯಕ್ಕೆ ತಡೆದು ಕೋರ್ಟ್ ಆದೇಶ ಹೊರಡಿಸಿದೆ.

‘ಯಶೋದಾ’ ಚಿತ್ರದಲ್ಲಿ ನಮ್ಮ ಆಸ್ಪತ್ರೆಯ ಹೆಸರು ಬಳಕೆ ಆಗಿದೆ. ಆಸ್ಪತ್ರೆಯನ್ನು ಕೆಟ್ಟ ರೀತಿಯಲ್ಲಿ ತೋರಿಸಲಾಗಿದೆ. ಇದು ನಮ್ಮ ಆಸ್ಪತ್ರೆಯ ಘನತೆಗೆ ಧಕ್ಕೆ ತಂದಿದೆ’ ಎಂದು ಇವಾ ಆಸ್ಪತ್ರೆಯವರು ಆರೋಪಿಸಿದ್ದಾರೆ. ಸದ್ಯ ಒಟಿಟಿ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಇದನ್ನೂ ಓದಿ: ‘ಯಶೋದಾ ಚಿತ್ರಕ್ಕೆ ತೋರಿದ ಪ್ರೀತಿ, ಅಭಿಮಾನ ನನಗೆ ಸಿಕ್ಕ ಉತ್ತಮ ಉಡುಗೊರೆ’; ಸಮಂತಾ ಭಾವುಕ ಪತ್ರ

ಸದ್ಯ ಸಮಂತಾ ಕೈಯಲ್ಲಿ ಹಲವು ಆಫರ್​ಗಳಿವೆ. ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಅವರು ಮತ್ತೆ ಸಿನಿಮಾ ಕೆಲಸಗಳತ್ತ ಮುಖ ಮಾಡಲಿದ್ದಾರೆ. ‘ಶಾಕುಂತಲಂ’, ‘ಖುಷಿ’ ಮುಂತಾದ ಸಿನಿಮಾಗಳು ಅವರ ಕೈಯಲ್ಲಿವೆ.

ಸಮಂತಾ ಭಾವುಕ ಪತ್ರ

‘ಪ್ರೀತಿಯ ಅಭಮಾನಿಗಳೇ, ನೀವು ‘ಯಶೋದಾ’ ಚಿತ್ರಕ್ಕೆ ತೋರಿಸಿದ ಪ್ರೀತಿ, ಅಭಿಮಾನ ನನಗೆ ಸಿಕ್ಕ ಉತ್ತಮ ಉಡುಗೊರೆ. ನಿಮ್ಮ ಈ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿ. ಇದು ಇಡೀ ‘ಯಶೋದಾ’ ಚಿತ್ರ ತಂಡದ ಶ್ರಮಕ್ಕೆ ಸಿಕ್ಕ ಪ್ರತಿಫಲ. ನೀವು ಥಿಯೇಟರ್​ಗಳಲ್ಲಿ ಸಂಭ್ರಮಿಸಿದ ಪರಿಯನ್ನು ನಾನು ಕಂಡಿದ್ದೇನೆ. ನಿಮ್ಮೆಲ್ಲಾ ಶುಭಾಶಯಗಳು ನನಗೆ ತಲುಪಿವೆ. ಪ್ರತಿಯೊಬ್ಬರಿಗೂ ನಾನು ಧನ್ಯವಾದ ತಿಳಿಸುತ್ತೇನೆ’ ಎಂದು ಪತ್ರ ಆರಂಭಿಸಿದ್ದರು ಸಮಂತಾ.

ಇದನ್ನೂ ಓದಿ

‘ಯಶೋದಾ ಚಿತ್ರದ ತಂಡಕ್ಕೂ ನಾನು ಧನ್ಯವಾದ ಅರ್ಪಿಸುತ್ತೇನೆ. ಅದರಲ್ಲಿಯೂ ನನ್ನ ಮೇಲೆ ನಂಬಿಕೆ ಇಟ್ಟು ಈ ಚಿತ್ರವನ್ನು ನಿರ್ಮಾಣ ಮಾಡಿದ ಕೃಷ್ಣ ಪ್ರಸಾದ್ ಅವರಿಗೆ ಮತ್ತು ನಿರ್ದೇಶಕರಾದ ಹರಿ-ಹರೀಶ್​ ಅವರಿಗೂ ತುಂಬು ಹೃದಯದ ಧನ್ಯವಾದ ತಿಳಿಸುತ್ತೇನೆ’ ಎಂದಿದ್ದರು ಅವರು. ಅದೇ ರೀತಿಯಾಗಿ ಚಿತ್ರದಲ್ಲಿ ತಮ್ಮೊಂದಿಗೆ ಕೆಲಸ ಮಾಡಿದ ಇತರೆ ಸಹ ಕಲಾವಿದರಿಗೂ ಸಮಂತಾ ಧನ್ಯವಾದ ಹೇಳಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada