Samantha: ಭಾರತದಲ್ಲಿ ವಾಸಿ ಆಗಲಿಲ್ಲ ಸಮಂತಾ ಕಾಯಿಲೆ; ಸೌತ್ ಕೊರಿಯಾದಲ್ಲಿ ನಟಿಗೆ ಹೆಚ್ಚಿನ ಚಿಕಿತ್ಸೆ?
Samantha Health Problem: ಎಷ್ಟೇ ಪ್ರಯತ್ನಿಸಿದರೂ ಸಮಂತಾ ಅವರ ಆರೋಗ್ಯ ಸುಧಾರಿಸಿಲ್ಲ. ಆದ್ದರಿಂದ ಅವರು ದಕ್ಷಿಣ ಕೊರಿಯಾದಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲಿದ್ದಾರೆ ಎಂಬ ಮಾಹಿತಿ ಹರಡಿದೆ.
ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರಿಗೆ ಆರೋಗ್ಯ ಕೈ ಕೊಟ್ಟಿದೆ. ಈ ವಿಚಾರವನ್ನು ಅವರು ಬಾಯ್ಬಿಟ್ಟು ಹೇಳುವುದಕ್ಕೂ ಮುನ್ನವೇ ಅನೇಕ ಮಾಧ್ಯಮಗಳಲ್ಲಿ ಜಗಜ್ಜಾಹೀರು ಆಗಿತ್ತು. ನಂತರ ತಮಗೆ Myositis ಎಂಬ ಕಾಯಿಲೆ ಇದೆ ಎಂದು ಸ್ವತಃ ಸಮಂತಾ (Samantha) ಒಪ್ಪಿಕೊಂಡರು. ಇದಕ್ಕೆ ಚಿಕಿತ್ಸೆ ಪಡೆಯಲು ಅವರು ಈ ಮೊದಲು ವಿದೇಶಕ್ಕೆ ತೆರಳಿದ್ದರು. ಬಳಿಕ ವಾಪಸ್ ಬಂದು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಕೈಗೆ ಡ್ರಿಪ್ಸ್ ಹಾಕಿಕೊಂಡೇ ಅವರು ‘ಯಶೋದಾ’ ಸಿನಿಮಾದ ಡಬ್ಬಿಂಗ್ ಮುಗಿಸಿದ್ದರು. ಭಾರತದಲ್ಲಿ ಅವರು ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೂ ಕೂಡ ಅವರಿಗೆ ಪೂರ್ತಿ ವಾಸಿ ಆಗಿಲ್ಲ. ಹಾಗಾಗಿ ದಕ್ಷಿಣ ಕೊರಿಯಾಗೆ (South Korea) ತೆರಳಿ, ಅಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲು ಸಮಂತಾ ತೀರ್ಮಾನಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಸಮಂತಾ ಅವರ ವೈಯಕ್ತಿಕ ಜೀವನ ಮತ್ತು ವೃತ್ತಿಬದುಕಿನಲ್ಲಿ ಅನೇಕ ಏರಿಳಿತಗಳು ಆಗುತ್ತಿವೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅವರು ಅಂತ್ಯ ಹಾಡಿ ವಿಚ್ಛೇದನ ಪಡೆದ ಬಳಿಕ ಹೊಸ ಜೀವನಕ್ಕೆ ಹೊಂದಿಕೊಳ್ಳಲು ಒಂದಷ್ಟು ಸಮಯ ತೆಗೆದುಕೊಂಡರು. ಆದರೆ ಅದರ ಬೆನ್ನಲ್ಲೇ ಅವರಿಗೆ ಅನಾರೋಗ್ಯ ಕಾಟ ಕೊಡಲು ಆರಂಭಿಸಿತು.
‘ದಿ ಫ್ಯಾಮಿಲಿ ಮ್ಯಾನ್ 2’ ಸೂಪರ್ ಹಿಟ್ ಆದ ಬಳಿಕ ಹಾಗೂ ‘ಪುಷ್ಪ’ ಸಿನಿಮಾದಲ್ಲಿ ಐಟಂ ಡ್ಯಾನ್ಸ್ ಮಾಡಿದ ನಂತರ ಸಮಂತಾ ಅವರಿಗೆ ಹತ್ತಾರು ಆಫರ್ಗಳು ಬರಲು ಶುರುವಾದವು. ಆದರೆ ಅನಾರೋಗ್ಯದ ಕಾರಣದಿಂದ ಎಲ್ಲವನ್ನೂ ಒಪ್ಪಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೇಗೋ ಕಷ್ಟಪಟ್ಟು ‘ಯಶೋದಾ’ ಸಿನಿಮಾದ ಕೆಲಸಗಳನ್ನು ಅವರು ಮುಗಿಸಿಕೊಟ್ಟರು. ಇನ್ನೇನು ಪೂರ್ತಿ ಗುಣಮುಖರಾಗಿ ಮತ್ತೆ ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗುತ್ತಾರೆ ಎಂದುಕೊಳ್ಳುತ್ತಿರುವಾಗಲೇ ಈ ಸುದ್ದಿ ಕೇಳಿಬಂದಿದೆ.
ಆಯುರ್ವೇದ ಔಷದಿ ಪ್ರಯತ್ನಿಸಿದ್ದ ಸಮಂತಾ ಅವರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಆದ್ದರಿಂದ ಅವರು ದಕ್ಷಿಣ ಕೊರಿಯಾದಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲಿದ್ದಾರೆ ಎಂಬ ಮಾಹಿತಿ ಹರಡಿದೆ. ಈ ಬಗ್ಗೆ ಸಮಂತಾ ಕಡೆಯಿಂದ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ. ಎಲ್ಲವೂ ಅಂದಕೊಂಡಂತೆ ಆಗಿದ್ದರೆ ವಿಜಯ್ ದೇವರಕೊಂಡ ಜೊತೆಗೆ ‘ಖುಷಿ’ ಚಿತ್ರದ ಶೂಟಿಂಗ್ನಲ್ಲಿ ಸಮಂತಾ ಈಗ ಭಾಗಿ ಆಗಬೇಕಿತ್ತು. ಆದರೆ ಆ ಸಿನಿಮಾದ ಕೆಲಸಗಳು ವಿಳಂಬ ಆಗುತ್ತಿವೆ.
ಸಮಂತಾ ನಟನೆಯ ‘ಯಶೋದಾ’ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ‘ಖುಷಿ’ ಮಾತ್ರವಲ್ಲದೇ ‘ಶಾಕುಂತಲಂ’ ಚತ್ರಕ್ಕೂ ಅವರು ನಾಯಕಿ ಆಗಿದ್ದು, ಈ ಸಿನಿಮಾಗಳ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:33 am, Wed, 30 November 22