Honganasu: ರಿಷಿನ ಗಟ್ಟಿಯಾಗಿ ತಬ್ಬಿಕೊಂಡ ವಸು; ಭಾವಚಿತ್ರದ ರಹಸ್ಯ ಬಯಲಾಗುತ್ತಾ?

Honganasu Serial Update: ಇಷ್ಟು ಸುಂದರವಾಗಿರುವ ನನ್ನ ಭಾವಚಿತ್ರ ಬಿಡಿಸಿದ್ದು ರಿಷಿನೇ ಇರಬಹುದಾ ಎನ್ನುವ ಅನುಮಾನ ವಸುಗೆ ಶುರುವಾಗಿದೆ. ಯಾರಿರಬಹುದು ಎಂದು ಯೋಚಿಸುತ್ತಾ ಬರುತ್ತಿದ್ದಳು.

Honganasu: ರಿಷಿನ ಗಟ್ಟಿಯಾಗಿ ತಬ್ಬಿಕೊಂಡ ವಸು; ಭಾವಚಿತ್ರದ ರಹಸ್ಯ ಬಯಲಾಗುತ್ತಾ?
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 30, 2022 | 12:32 PM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ರಿಷಿ ಬರೆದ ಲವ್ ಲೆಟರ್ ರಹಸ್ಯ ಜಗತಿ ಮತ್ತು ಮಹೇಂದ್ರನ ಮುಂದೆ ಬಯಲಾಗಿದೆ. ವಸುಧರಾಗೆ ಬರೆದ ಲವ್ ಲೆಟರ್ ಈ ಹಿಂದೆಯೇ ಜಗತಿಗೆ ಸಿಕ್ಕಿತ್ತು. ಆದರೆ ರಿಷಿನೇ ಬರೆದಿದ್ದು ಅಂತ ಜಗತಿಗೆ ಗೊತ್ತಾಗಿರಲಿಲ್ಲ. ಆದರೀಗ ರಿಷಿ ರೂಮಿನಲ್ಲಿ ಲವ್ ಲೆಟರ್ ನೋಡಿ ಜಗತಿ ಮತ್ತು ಮಹೇಂದ್ರ ಇಬ್ಬರೂ ಶಾಕ್ ಆದರು. ವಸುಧರಾ ತನ್ನದೇ ಭಾವಚಿತ್ರ ಹಿಡಿದು ಯಾರು ಬಿಡಿಸಿರಬಹುದು ಎಂದು ಯೋಚಿಸುತ್ತಿದ್ದಳು. ಆದರೆ ಮಕ್ಕಳು ಅದನ್ನು ಹರಿದು ಹಾಕಿದರು.

ಹರಿದ ಭಾವಚಿತ್ರ ಹಿಡಿದು ಅಳುತ್ತಾ ನಿಂತಿದ್ದಳು ವಸು. ಎಂಟ್ರಿ ಕೊಟ್ಟ ರಿಷಿ, ‘ಈ ಚಿತ್ರ ಹಾಳಗಿದ್ದಕ್ಕೆ ಯಾಕಿಷ್ಟು ಭಾವುಕಳಾಗಿದ್ದೀಯಾ’ ಎಂದು ವಸುಗೆ ಕೇಳಿದ. ‘ನನ್ನನ್ನು ನೋಡದೆ ಇಷ್ಟು ಚೆನ್ನಾಗಿ ಸ್ಕೆಚ್ ಮಾಡಿದ್ದಾರೆ ಅಂದರೆ ಅವರ ಮನಸ್ಸಿನಲ್ಲಿ ನಾನು ಇದ್ದೀನಿ’ ಅಂತ ರಿಷಿಗೆ ವಿವರಣೆ ನೀಡಿದಳು. ವಸುಧರಾ ಅಳು ನೋಡಲಾರದೆ ಮತ್ತೊಂದು ಸ್ಕೆಚ್ ಬಿಡಿಸಿ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ವಸುಗೆ ಕೊಡಲು ತೆಗೆದುಕೊಂಡು ಬಂದ ರಿಷಿ. ಹೇಗೆ ಕೊಡುವುದು ಎಂದು ಯೋಚಿಸುತ್ತಿದ್ದ ರಿಷಿಗೆ ಪುಟ್ಟ ಬಾಲಕ ಕಾಣಿಸಿದ. ರೆಸ್ಟೋರೆಂಟ್‌ನಲ್ಲಿದ್ದ ಪುಟ್ಟ ಹುಡುಗನನ್ನು ಕರೆದು ಸ್ಕೆಚ್ ಕೊಟ್ಟು ವಸುಗೆ ಕೊಡುವಂತೆ ಹೇಳಿದ.

ಪುಟ್ಟ ಹುಡುಗ ಸ್ಕೆಚ್ ತಂದು ವಸು ಕೈಗೆ ಕೊಟ್ಟ. ಸ್ಕೆಚ್ ನೋಡಿ ವಸು ಶಾಕ್ ಆದಳು. ಯಾರು ಕೊಟ್ಟಿದ್ದು ಎಂದು ಹುಡುಕಲು ಹೊರಟಳು. ಆಗ ರೆಸ್ಟೋರೆಂಟ್ ‌ಗೆ ಬಂದು ಕುಳಿತಿದ್ದ ರಿಷಿನ ನೋಡಿ ಮಾತನಾಡಿಸಿದಳು.  ಭಾವಚಿತ್ರದ ವಿಚಾರವನ್ನು ಹೇಳಿ ಸಂತಸ ಪಟ್ಟಳು ವಸು. ಆದರೆ ರಿಷಿನೇ ಬಿಡಿಸಿದ ಸ್ಕೆಚ್ ಎಂದು ವಸುಗೆ ಗೊತ್ತಾಗಿಲ್ಲ. ಇದನ್ನು ಕೊಟ್ಟಿದ್ದು ಯಾರೆಂದು ಪುಟ್ಟ ಹುಡುಗನನ್ನು ಕೇಳಿದ್ರೆ ಗೊತ್ತಾಗುತ್ತೆ ಎಂದು ಕೇಳಲು ಹೋದಳು ವಸು. ರಿಷಿಗೆ ಢವ ಢವ ಶುರುವಾಯಿತು. ಪುಟ್ಟ ಹುಡಗನಿಗೆ ಹೇಳಬೇಡ ಎಂದು ಸನ್ನೆ ಮಾಡಿದ ರಿಷಿ. ಅಷ್ಟೊತ್ತಿಗೆ ಯಾರೋ ಕರೆದರು ಎಂದು ಹೊರಟು ಹೋದಳು ವಸು. ಬಚಾವ್ ಆದೆ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟ ರಿಷಿ.

ಇಷ್ಟು ಸುಂದರವಾಗಿರುವ ನನ್ನ ಭಾವಚಿತ್ರ ಬಿಡಿಸಿದ್ದು ರಿಷಿನೇ ಇರಬಹುದಾ ಎನ್ನುವ ಅನುಮಾನ ವಸುಗೆ ಶುರುವಾಗಿದೆ. ಯಾರಿರಬಹುದು ಎಂದು ಯೋಚಿಸುತ್ತಾ ಬರುತ್ತಿದ್ದಳು. ಅಲ್ಲೇ ನಿಂತಿದ್ದ ರಿಷಿ ‘ನಾನಲ್ಲ ನಾನಲ್ಲ’ ಎಂದು ಕೂಗಿದ. ಗಾಬರಿಯಾದ ವಸು ಏನಾಯಿತು ಸರ್ ಎಂದು ಕೇಳಿದಳು. ಇಬ್ಬರೂ ಮತ್ತೆ ಭಾವಚಿತ್ರ ಬಿಡಿಸಿದವರ ಬಗ್ಗೆಯೇ ಮಾತನಾಡಿದರು. ನಾನೇ ಇರಬಹುದು ಅಂತ ಅಂದ್ಕೊ ಎಂದು ಹೇಳಿದ ರಿಷಿ. ‘ಹುಡುಗಿಯರ ಮುಖನೇ ಸರಿಯಾಗಿ ನೋಡಲ್ಲ ನೀವು ಹೇಗೆ ಬಿಡಿಸುತ್ತೀರಾ’ ಎಂದು ವಸು ತಮಾಷೆ ಮಾಡಿದಳು. ಈ ಸ್ಕೆಚ್ ಬಿಡಿಸಿದವರು ಸಿಕ್ಕಿದ್ರೆ ಏನ್ ಮಾಡ್ತೀಯಾ ಎಂದು ವಸುಗೆ ಕೇಳಿದ ರಿಷಿ. ವಸು ತಕ್ಷಣ ರಿಷಿಯನ್ನು ತಬ್ಬಿಕೊಂಡಗಳು. ಶಾಕ್ ಆದ ರಿಷಿ. ಹೀಗೆ ತಬ್ಬಿಕೊಂಡು ವಿಶೇಷ ಧನ್ಯವಾದ ಹೇಳ್ತೀನಿ ಎಂದಳು ವಸು.

ವಸುಧರಾಳನ್ನು ಕಾರಿನಲ್ಲಿ ಕರೆದುಕೊಂಡು ಹೊರಟ ರಿಷಿ. ದಾರಿಯಲ್ಲಿ ಹೂ ಮಾರುವವಳು ರಿಷಿಗೆ ಒತ್ತಾಯ ಮಾಡಿ ಮಲ್ಲಿಗೆ ಹೂ ನೀಡಿದ್ದಳು. ಮಲ್ಲಿಗೆ ಹೋವನ್ನು ಕಾರಿನಲ್ಲಿ ಇಟ್ಟುಕೊಂಡಿದ್ದ ರಿಷಿ. ಕಾರಿನಲ್ಲಿ ಕುಳಿತಿದ್ದ ವಸು ಏನೋ ಪರಿಮಳ ಬರ್ತಿದೆ ಏನದು ಅಂತ ಕೇಳಿದಳು. ರಿಷಿ ಕಾರಿನಲ್ಲಿದ್ದ ಮಲ್ಲಿಗೆ ಹೂ ತೋರಿಸಿದ. ರಿಷಿ ಮಲ್ಲಿಗೆ ಹೂ ತಂದಿದ್ದು ನೋಡಿ ಅಶ್ಚರ್ಯ ಪಟ್ಟಳು ವಸು. ಅದೇ ಮಲ್ಲಿಗೆ ಹೂವನ್ನು ನೀಡಿ ವಸುಗೆ ಪ್ರಪೋಸ್ ಮಾಡ್ತಾನಾ ರಿಷಿ? ವಸುಧರಾ ಮನಸ್ಸಲ್ಲೂ ರಿಷಿ ಇದ್ದಾನಾ? ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ
ಅಪ್ಪಾಜಿ ಕಿಡ್ನಾಪ್ ಆಗಿ ವಾಪಸ್ ಬಂದಾಗ ಆದಷ್ಟು ಸಂತೋಷ ಈಗ ಆಗಿದೆ: ರಾಘಣ್ಣ
ಅಪ್ಪಾಜಿ ಕಿಡ್ನಾಪ್ ಆಗಿ ವಾಪಸ್ ಬಂದಾಗ ಆದಷ್ಟು ಸಂತೋಷ ಈಗ ಆಗಿದೆ: ರಾಘಣ್ಣ
ಪತ್ನಿ ಗೀತಾ ನೀಡಿದ ಬೆಂಬಲದ ಬಗ್ಗೆ ಶಿವಣ್ಣ ಭಾವುಕ ಮಾತು
ಪತ್ನಿ ಗೀತಾ ನೀಡಿದ ಬೆಂಬಲದ ಬಗ್ಗೆ ಶಿವಣ್ಣ ಭಾವುಕ ಮಾತು
ಶಿವಣ್ಣನಿಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ
ಶಿವಣ್ಣನಿಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ
ಗಣರಾಜ್ಯೋತ್ಸವ: ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ
ಗಣರಾಜ್ಯೋತ್ಸವ: ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ
ಸೇಬಿನ ಹಾರ ಹಾಕಿ ಶಿವಣ್ಣನನ್ನು ಅದ್ಧೂರಿ ಸ್ವಾಗತಿಸಿದ ಅಭಿಮಾನಿಗಳು
ಸೇಬಿನ ಹಾರ ಹಾಕಿ ಶಿವಣ್ಣನನ್ನು ಅದ್ಧೂರಿ ಸ್ವಾಗತಿಸಿದ ಅಭಿಮಾನಿಗಳು
Video: ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ಪ್ರಧಾನಿ ಮೋದಿ ನಮನ
Video: ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ಪ್ರಧಾನಿ ಮೋದಿ ನಮನ