ಸುಪ್ತ ಪ್ರಜ್ಞೆಯಲ್ಲಿ ನಿಜ ವಿಚಾರ ಹೇಳಿದ ಸಂಜು; ಆದರೂ ರಿವೀಲ್ ಆಗಿಲ್ಲ ಸತ್ಯ

ಆರ್ಯವರ್ಧನ್ ಇಲ್ಲದೆ ಮೀರಾ ಹೆಗಡೆಗೆ ಬೇಸರ ಆಗಿದೆ. ಆಕೆಗೆ ಆರ್ಯವರ್ಧನ್​ ಗ್ರೂಪ್​ನಲ್ಲಿ ಸರಿಯಾದ ಗೌರವ ಸಿಗುತ್ತಿಲ್ಲ. ಈ ಕಾರಣಕ್ಕೆ ಆಕೆ ಕಂಪನಿ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದಾಳೆ.

ಸುಪ್ತ ಪ್ರಜ್ಞೆಯಲ್ಲಿ ನಿಜ ವಿಚಾರ ಹೇಳಿದ ಸಂಜು; ಆದರೂ ರಿವೀಲ್ ಆಗಿಲ್ಲ ಸತ್ಯ
ಸಂಜು-ಅನು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 01, 2022 | 8:28 AM

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ

ಇದನ್ನೂ ಓದಿ
Image
ವಿಷ ಇರುವ ಪಾಯಸ ಕುಡಿದು ಆಸ್ಪತ್ರೆ ಸೇರಿದ ಸಂಜು; ಅನುಗೆ ಸಂಕಟ
Image
ಝೇಂಡೆಯ ಅಸಲಿ ಮುಖ ರಿವೀಲ್​; ವಿಲನ್ ಆದ ರಮ್ಯಾ
Image
ಅನು ಸಿರಿಮನೆ-ಸಂಜುನಿಂದ ಮುರಿದು ಬಿತ್ತು ರಮ್ಯಾ ಎಂಗೇಜ್​ಮೆಂಟ್
Image
ಎಲ್ಲರ ಎದುರು ಸಂಜುಗೆ ಆರ್ಯ ಎಂದು ಕರೆದ ಝೇಂಡೆ; ಸಿಟ್ಟಾದ ಅನು ಸಿರಿಮನೆ

ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು

ಸಮಯ: ರಾತ್ರಿ: 9.30

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ವಿಷ ಸೇವನೆಯಿಂದ ಸಂಜು ಆಸ್ಪತ್ರೆ ಸೇರಿದ್ದಾನೆ. ಅನು ಸಿರಿಮನೆಗೆ ಈ ವಿಚಾರದಲ್ಲಿ ಸಿಕ್ಕಾಪಟ್ಟೆ ಬೇಸರ ಕಾಡಿದೆ. ರಜನಿ ಕೊಟ್ಟ ವಿಷಯುಕ್ತ ಪಾಯಸವನ್ನು ಅನು ಕುಡಿಯಬೇಕಿತ್ತು. ಆದರೆ, ಇದನ್ನು ಕುಡಿದಿದ್ದು ಸಂಜು. ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮತ್ತೊಂದು ಕಡೆ ಮೀರಾಗೆ ಆರ್ಯವರ್ಧನ್​ನ ಮರಳಿ ನೀಡುವ ಭರವಸೆಯನ್ನು ಝೇಂಡೆ ನೀಡಿದ್ದಾನೆ. ಆರ್ಯವರ್ಧನ್ ಬದುಕಿರುವ ವಿಚಾರವನ್ನು ರಿವೀಲ್ ಮಾಡಿ ಮೀರಾಗೆ ಶಾಕ್ ನೀಡಿದ್ದಾನೆ. ಆರ್ಯವರ್ಧನ್ ವಿಚಾರದಲ್ಲಿ ಆಕೆಗೆ ಹೊಸ ಭರವಸೆ ಮೂಡಿದೆ. ಝೇಂಡೆ ಹೇಳಿದಂತೆ ಕೇಳಲು ಆಕೆ ರೆಡಿ ಆಗಿದ್ದಾಳೆ.

ಕ್ಷಮೆ ಕೇಳಿದ ರಜನಿ

ಸಂಜುಗೆ ವಿಷ ನೀಡಿದ್ದರಿಂದ ರಜನಿ ಸಾಕಷ್ಟು ನೊಂದುಕೊಂಡಿದ್ದಾಳೆ. ಆಕೆ, ಪುಷ್ಪಾ ಬಳಿ ಬಂದು ಕ್ಷಮೆ ಕೇಳಿದ್ದಾಳೆ. ಕಾಲಿಗೆ ಬಿದ್ದು ತಪ್ಪಾಯಿತು ಎಂದು ಕೋರಿಕೊಂಡಿದ್ದಾಳೆ. ಆದರೆ, ಇದಕ್ಕೆ ಪುಷ್ಪ ಸೊಪ್ಪು ಹಾಕಿಲ್ಲ. ಆಕೆಯನ್ನು ದೂರ ತಳ್ಳಿದ್ದಾಳೆ. ಇದರಿಂದ ರಜನಿ ನೊಂದುಕೊಂಡಿದ್ದಾಳೆ. ತಾನು ಆಡಿದ ಮಾತಿನಿಂದ ಸ್ವತಃ ಪುಷ್ಪಾಗೂ ಬೇಸರ ಆಗಿದೆ.

ರಿಸೈನ್ ಮಾಡ್ತೀನಿ ಎಂದ ಮೀರಾ

ಆರ್ಯವರ್ಧನ್ ಇಲ್ಲದೆ ಮೀರಾ ಹೆಗಡೆಗೆ ಬೇಸರ ಆಗಿದೆ. ಆಕೆಗೆ ಆರ್ಯವರ್ಧನ್​ ಗ್ರೂಪ್​ನಲ್ಲಿ ಸರಿಯಾದ ಗೌರವ ಸಿಗುತ್ತಿಲ್ಲ. ಈ ಕಾರಣಕ್ಕೆ ಆಕೆ ಕಂಪನಿ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದಾಳೆ. ಇದರ ಹಿಂದೆ ಝೇಂಡೆ ಕುಮ್ಮಕು ಇದೆ ಅನ್ನೋದು ವೀಕ್ಷಕರ ಅನುಮಾನ. ವರ್ಧನ್ ಕಂಪನಿಗೆ ತಾನು ಮತ್ತೆಸ ಸೇರಬೇಕು ಎಂದು ಆತ ಆಲೋಚಿಸಿದ್ದಾನೆ. ಇದಕ್ಕೆ ಮೀರಾಳ ಸಹಾಯ ಪಡೆಯುತ್ತಿದ್ದಾನೆ. ಆರ್ಯವರ್ಧನ್ ಬದುಕಿರುವ ವಿಚಾರವನ್ನು ಝೇಂಡೆ ರಿವೀಲ್ ಮಾಡಿರುವುದರಿಂದ ಆಕೆ ಹೇಳಿದಂತೆ ಕೇಳಲು ಒಪ್ಪಿಕೊಂಡಿದ್ದಾಳೆ. ಈಗ ರಿಸೈನ್ ಡ್ರಾಮಾ ಕೂಡ ಝೇಂಡೆ ಮಾಡಿರುವ ಪ್ಲ್ಯಾನ್ ಭಾಗ ಎನ್ನಲಾಗುತ್ತಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ನಿದ್ದೆಯಲ್ಲಿ ಕನವರಿಸಿದ ಸಂಜು

ಸಂಜುನೇ ಆರ್ಯವರ್ಧನ್ ಎನ್ನುವ ವಿಚಾರ ಅನೇಕರಿಗೆ ಗೊತ್ತಿಲ್ಲ. ಈ ವಿಚಾರದಲ್ಲಿ ಅನುಗೆ ಸಾಕಷ್ಟು ಅನುಮಾನ ಹುಟ್ಟಿಕೊಳ್ಳುತ್ತಿದೆ. ಸಂಜುನಲ್ಲಿ ಆರ್ಯವರ್ಧನ್​ನ ಆಕೆ ಕಾಣುತ್ತಿದ್ದಾಳೆ. ಈ ಮಧ್ಯೆ ಸಂಜು ದೇಹದಲ್ಲಿ ವಿಷ ಸೇರಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದ. ಆತನಿಗೆ ಪ್ರಜ್ಞೆ ಬಂದಿರಲಿಲ್ಲ. ಪ್ರಜ್ಞೆ ಬರುವಾಗ ಆತ ಕೆಲ ಮಾತುಗಳನ್ನು ಹೇಳಿದ್ದಾನೆ.

‘ಅಮ್ಮ ಹೆದರಬೇಡ. 700 ಕೋಟಿ ರೂಪಾಯಿ ಸಾಲವನ್ನು ನಾನು ತೀರಿಸುತ್ತೇನೆ. ನಾನು ಈಗಲೇ ಬರುತ್ತೇನೆ’ ಎಂದು ಸಂಜು ಕನವರಿಸಿದ್ದಾನೆ. ಇದನ್ನು ಕೇಳಿ ಅನುಗೆ ಆಶ್ಚರ್ಯವಾಗಿದೆ. ಈ ಮಾತನ್ನು ಹೇಳಿದ್ದು ಆರ್ಯವರ್ಧನ್. ಈ ಮಾತನ್ನು ಸಂಜು ಆಡಿದ್ದು ಕೇಳಿ ಅಚ್ಚರಿ ಆಗಿದೆ. ಆದರೆ, ಇದನ್ನು ಆರಾಧನಾ ಬೇರೆಯದೇ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾಳೆ.

‘ಸಂಜುಗೆ ಹಳೆಯದೆಲ್ಲ ನೆನಪಿದೆ. ಈ ಕಾರಣಕ್ಕೆ ಅವನು 700 ಕೋಟಿ ರೂಪಾಯಿ ವಿಚಾರ ಹೇಳಿದ್ದಾನೆ. ಆತನಿಗೆ ನಿಧಾನವಾಗಿ ಹಳೆಯ ನೆನಪು ಬರುತ್ತಿದೆ’ ಎಂದು ಆರಾಧನಾ ಸಂಭ್ರಮಿಸಿದ್ದಾಳೆ. ಆದರೆ, ಅನುಗೆ ಈ ವಿಚಾರದಲ್ಲಿ ಅನುಮಾನ ಬಂದಿದೆ. ತಂದೆ ಸುಬ್ಬು ಬಳಿ ಈ ವಿಚಾರವನ್ನು ಹೇಳಬೇಕು ಎಂದು ಆಕೆ ಅಂದುಕೊಂಡಳು. ಆದರೆ, ಅದು ಸಾಧ್ಯವಾಗಿಲ್ಲ.

ಸಂಜು ಕನವರಿಕೆಯಿಂದ ನಿಜ ವಿಚಾರ ರಿವೀಲ್ ಆಗಬೇಕಿತ್ತು. ಆದರೆ, ಮತ್ತಷ್ಟು ಗೊಂದಲ ಸೃಷ್ಟಿ ಆಗಿದೆ. ಪ್ರತೀ ಹಂತದಲ್ಲೂ ಆರಾಧನಾಗೆ ಈತ ತನ್ನ ಪತಿಯೇ ಅಲ್ಲ ಅನಿಸುತ್ತಿತ್ತು. ಆದರೆ, ಈ ಬಾರಿ ಆತ 700 ಕೋಟಿ ರೂಪಾಯಿ ವಿಚಾರ ಹೇಳಿರುವುದರಿಂದ ಆಕೆಗೆ ಹೋಪ್ ಸಿಕ್ಕಿದೆ. ತನ್ನ ವಿಶ್ವನನ್ನು ಮರಳಿ ಪಡೆಯುತ್ತೇನೆ ಎನ್ನುವ ಭರವಸೆ ಆಕೆಗೆ ಸಿಕ್ಕಿದೆ.

ಶ್ರೀಲಕ್ಷ್ಮಿ ಎಚ್.

Published On - 8:24 am, Thu, 1 December 22