Honganasu: ವಸುಧರಾ ಜತೆ ರಿಷಿಯ ಪ್ರೀತಿ ರಹಸ್ಯ ಬಯಲಿಗೆಳೆದ ಸಾಕ್ಷಿ: ದೇವಯಾನಿಗೆ ಖುಷಿ
Honganasu Serial Update: ಮೊದಲೇ ಕೋಪದಲ್ಲಿದ್ದ ರಿಷಿಗೆ ಸಾಕ್ಷಿಯ ಮಾತು ಕುದಿಯುವಂತೆ ಮಾಡಿತು. ಆಕೆಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ.
ಧಾರಾವಾಹಿ: ಹೊಂಗನಸು
ಪ್ರಸಾರ: ಸ್ಟಾರ್ ಸುವರ್ಣ
ಸಮಯ: ಮಧ್ಯಾಹ್ನ 1.30
ನಿರ್ದೇಶನ: ಅನಿಲ್ ಆನಂದ್, ಕುಮಾರ್
ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು
ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?
ರಿಷಿ ತಂದಿದ್ದ ಮಲ್ಲಿಗೆ ಹೂ ವಸುಧರಾ ಪಾಲಾಯಿತು. ಕಾರಿನಲ್ಲಿ ಇಟ್ಟಿದ್ದ ಮಲ್ಲಿಗೆ ಹೂವನ್ನು ತೆಗೆದುಕೊಳ್ಳುತ್ತೇನೆ ಎಂದು ವಸುಧರಾ ರಿಷಿಗೆ ಹೇಳಿ ಮನೆಗೆ ತೆಗೆದುಕೊಂಡು ಹೋದಳು. ಈ ಹೂ ಯಾರಿಗೆ ಸೇರಬೇಕೋ ಅವರಿಗೆ ಸೇರುತ್ತೆ ಅಂತ ಹೂ ಮಾರುವವಳು ಹೇಳಿದ ಮಾತನ್ನು ನೆನಪಿಸಿಕೊಂಡ ರಿಷಿ. ಹೂ ತೆಗೆದುಕೊಂಡು ಹೋಗಿ ವಸು ತುಂಬಾ ಸಂತಸ ಪಟ್ಟಳು. ಹೂವಿನ ಜೊತೆ ಭಾವಚಿತ್ರವನ್ನು ಕೈಯಲ್ಲಿ ಹಿಡಿದು ಯಾರು ಬಿಡಿಸಿರಬಹುದು ಎಂದು ಮತ್ತೆ ಯೋಚಿಸಲು ಶುರು ಮಾಡಿದಳು. ಯಾರು ಬಿಡಿಸಿದ್ದು ಎಂದು ಕಂಡು ಹಿಡಿಯುತ್ತೇನೆ ಎಂದು ಶಪತ ಮಾಡಿ ರಿಷಿಗೆ ಮಸೇಜ್ ಮಾಡಿ ತಿಳಿಸಿದಳು. ನಾನೇ ಬಿಡಿಸಿದ್ದು ಅಂತ ವಸುಗೆ ಗೊತ್ತಾಗುತ್ತಾ ಎಂದು ರಿಷಿ ಯೋಚಿಸುತ್ತಾ ಕುಳಿತಿದ್ದ. ಅಷ್ಟೊತ್ತಿಗೆ ವಸು ಮೆಸೇಜ್ ಬಂತು. ವಸುಗೆ ಆಲ್ ದಿ ಬೆಸ್ಟ್ ಹೇಳಿ ಮಲಗಿದ ರಿಷಿ.
ಬೆಳಗ್ಗೆ ಕಾಲೇಜಿಗೆ ಬಂದವನೇ ಜಗತಿಯನ್ನು ತನ್ನ ಚೇಂಬರ್‌ಗೆ ಬರಲು ಹೇಳಿ ಅಂತ ಹೇಳಿದ ರಿಷಿ. ಏನಿರಬಹುದು, ರಿಷಿ ಯಾಕೆ ಕರೆಯುತ್ತಿದ್ದಾನೆ ಎಂದು ಗೊಂದಲದಲ್ಲೇ ಹೋದಳು ಜಗತಿ. ತನ್ನ ಚೇಂಬರ್‌ಗೆ ಆತ್ಮೀಯವಾಗಿ ಜಗತಿಗೆ ಸ್ವಾಗತ ಮಾಡಿದ ರಿಷಿ, ‘ಸ್ಕಾಲರ್ಫಿಪ್ ಎಕ್ಸಾಮ್ ಹತ್ತಿರ ಬರುತ್ತಿದೆ, ವಸುಧರಾಳನ್ನು ಚೆನ್ನಾಗಿ ತಯಾರಿ ಮಾಡಬೇಕು’ ಎಂದ. ವಸುಧರಾ ಚೆನ್ನಾಗಿಯೇ ಓದುತ್ತಿದ್ದಾಳೆ ಎಂದು ಜಗತಿ ಹೇಳಿದಳು. ಸರಿಯಾಗಿ ಗೈಡ್ ಮಾಡಬೇಕು ಆಕೆ ರ‍್ಯಾಂಕ್ ಬರಬೇಕು ಅಂತ ಜಗತಿಗೆ ಹೇಳುತ್ತಿರುವಾಗ ಸಾಕ್ಷಿ ಎಂಟ್ರಿ ಕೊಟ್ಟಳು. ಸಾಕ್ಷಿಯನ್ನು ನೋಡಿ ಕೆಂಡವಾದ ರಿಷಿ. ಚೇಂಬರ್ ಒಳಗೆ ದಿಢೀರ್ ಎಂಟ್ರಿ ಕೊಟ್ಟವಳೇ ಸಿನಿಮಾಗೆ ಹೋಗಣ ಬಾ ರಿಷಿ ಎಂದು ಕರೆದಳು.
ಮೊದಲೇ ಕೋಪದಲ್ಲಿದ್ದ ರಿಷಿಗೆ ಸಾಕ್ಷಿ ಮಾತು ಕುದಿಯುವಂತೆ ಮಾಡಿತು. ಸಾಕ್ಷಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ. ಅನುಮತಿ ಇಲ್ಲದೆ ಹೀಗೆಲ್ಲ ಒಳಗೆ ಬರಬಾರದು ಎನ್ನುವ ಕಾಮನ್‌ಸೆನ್ಸ್ ಇಲ್ವಾ ಎಂದು ಕೂಗಾಡಿದ. ಅಲ್ಲದೇ ಕೆಲಸದವರನ್ನು ಕರೆದು ಇಂತವರನ್ನೆಲ್ಲ ಯಾಕೆ ಒಳಗೆ ಬಿಡ್ತೀರಾ ಗೊತ್ತಾಗಲ್ವಾ ನಿಮಗೆ ಎಂದು ಅವರ ಮೇಲೂ ರೇಗಿದ. ನಂತರ ‘ವಸುಧರಾನ ಎಕ್ಸಾಮ್ ಗೆ ಸರಿಯಾಗಿ ತಯಾರಿ ಮಾಡಿ ಮೇಡಮ್’ ಎಂದು ಜಗತಿಗೆ ಹೇಳಿ ಅಲ್ಲಿಂದ ಹೊರಟ ರಿಷಿ. ಸಾಕ್ಷಿ ಅವನ ಹಿಂದೆಯೇ ಹೊರಟಳು. ಆದರೆ ಕೈ ಹಿಡಿದು ಎಳೆದು ನಿಲ್ಲಿಸಿದಳು ಜಗತಿ.
ನಂತರ ಸಾಕ್ಷಿ ತನ್ನ ತಂದೆ ಜೊತೆ ನೇರವಾಗಿ ರಿಷಿ ಮನೆಗೆ ಎಂಟ್ರಿ ಕೊಟ್ಟಳು. ಬಂದವಳೇ ಮದುವೆ ವಿಚಾರ ಎತ್ತಿದಳು. ಕಾಲೇಜು ಮುಗಿಸಿ ಮನೆಗೆ ಬಂದ ರಿಷಿಗೆ ಸಾಕ್ಷಿ ಮತ್ತು ಅವರ ತಂದೆ ನೋಡಿ ಸಿಟ್ಟಾದ. ಅವರ ಮುಂದೆ ತೋರಿಸಿಕೊಳ್ಳದೆ ಮಾತನಾಡಿಸಿದ ರಿಷಿ. ಬಳಿಕ ಮದುವೆ ವಿಚಾರ ಎತ್ತಿದಳು ಸಾಕ್ಷಿ. ಇದೆಲ್ಲ ಮುಗಿದ ವಿಚಾರ, ಮತ್ತೆ ಯಾಕೆ ಈ ಬಗ್ಗೆ ಚರ್ಚೆ ಎಂದ ರಿಷಿ. ತುಂಬಾ ಬದಲಾಗಿದ್ದೀಯಾ ಎಂದು ರಿಷಿ ಮೇಲೆ ಕೂಗಾಡಿದಳು ಸಾಕ್ಷಿ. ನಾನು ಬದಲಾಗಿಲ್ಲ, ಎಂಗೇಜ್ಮೆಂಟ್ ಬ್ರೇಕ್ ಮಾಡಿಕೊಂಡು ನಾನು ಬೇಡ ಅಂತ ರಿಜೆಕ್ಟ್ ಮಾಡಿ ಹೋಗಿದ್ದು ನೀನು. ಈಗ್ಯಾಕೆ ಮತ್ತೆ ಬಂದಿದ್ದೀಯಾ ಎಂದು ಪ್ರಶ್ನೆ ಮಾಡಿದ ರಿಷಿ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕಿತ್ತಾಟ ಜೋರಾಯಿತು.
ವಸುಧರಾ ಜೊತೆ ಕ್ಲೋಸ್ ಆಗಿರುವ ವಿಚಾರವನ್ನು ಮನೆಯವರ ಮುಂದೆ ಬಾಯ್ಬಿಟ್ಟಳು ಸಾಕ್ಷಿ. ಇಬ್ಬರ ಕಿತ್ತಾಟ ನೋಡಿ ದೇವಯಾನಿ ಸಂತಸ ಪಡುತ್ತಿದ್ದಳು. ಸಾಕ್ಷಿಯನ್ನು ಒಪ್ಪಿಕೊಳ್ತಾನಾ ಅಥವಾ ವಸುಧರಾಳನ್ನು ಪ್ರೀತಿ ಮಾಡುತ್ತಿರುವ ವಿಚಾರ ಬಹಿರಂಗ ಪಡಿಸುತ್ತಾನಾ ರಿಷಿ? ಕಾದು ನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.