ಝೇಂಡೆಯ ಅಸಲಿ ಮುಖ ರಿವೀಲ್; ವಿಲನ್ ಆದ ರಮ್ಯಾ
ಝೇಂಡೆ ಮಾಸ್ಟರ್ಪ್ಲ್ಯಾನ್ ಶುರುಮಾಡಿದ್ದಾನೆ. ವರ್ಧನ್ ಕಂಪನಿಯಿಂದ ಆತ ಸಾಕಷ್ಟು ಆಸ್ತಿಯನ್ನು ಹೊಡೆದಿದ್ದಾನೆ. ಈಗ ಈ ವಿಚಾರ ಅನುಗೆ ಗೊತ್ತಾಗುವುದರಲ್ಲಿದೆ.
ಧಾರಾವಾಹಿ: ಜೊತೆ ಜೊತೆಯಲಿ
ವಾಹಿನಿ: ಜೀ ಕನ್ನಡ
ನಿರ್ದೇಶನ: ಆರೂರು ಜಗದೀಶ
ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು
ಸಮಯ: ರಾತ್ರಿ: 9.30
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ರಮ್ಯಾ ಎಂಗೇಜ್ಮೆಂಟ್ ಮುರಿದುಬಿತ್ತು. ರಮ್ಯಾ ತಾಯಿ ರಜನಿ ಕೂಗಾಟ ನಡೆಸಿದ್ದಳು. ಆಕೆ ಅನುಗೆ ಶಪಿಸಿದ್ದಳು. ಎಂಗೇಜ್ಮೆಂಟ್ ಮುರಿದು ಬೀಳಲು ಕಾರಣರಾದ ವ್ಯಕ್ತಿಗಳ ಪೈಕಿ ಸಂಜು, ಅನು ಹಾಗೂ ರಮ್ಯಾ ಪ್ರಮುಖರು. ಇವರು ಮಾಡಿದ ಅವಾಂತರದಿಂದ ಇಷ್ಟು ಸಮಸ್ಯೆ ಆಗಿದೆ. ಈ ಮಧ್ಯೆ ಝೇಂಡೆಯ ಪ್ಲ್ಯಾನ್ ರಿವೀಲ್ ಆಗಿದೆ.
ವಿಲನ್ ಆದ ರಮ್ಯಾ
ಝೇಂಡೆ ಪಾಲಿಗೆ ರಮ್ಯಾ ವಿಲನ್ ಆಗಿದ್ದಾಳೆ. ಸಂಪಿಗೆಪುರದ ಪ್ರಾಪರ್ಟಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾನೆ ಝೇಂಡೆ. ಇದಕ್ಕೆ ಮಧ್ಯವರ್ತಿಯ ಬಳಕೆ ಮಾಡಿಕೊಂಡಿದ್ದಾನೆ. ಮಧ್ಯವರ್ತಿಯ ಮಗನನ್ನೇ ರಮ್ಯಾ ಮದುವೆ ಆಗಬೇಕಿತ್ತು. ಆದರೆ, ರಮ್ಯಾ ಮದುವೆ ಆಗುವ ಹುಡುಗನನ್ನು ತನ್ನ ಕೆಲಸಕ್ಕೆ ಬಳಸಿಕೊಂಡಳು. ಆತನಿಂದ ಝೇಂಡೆಯ ಕೆಟ್ಟ ಕೆಲಸಗಳ ಜಾತಕವನ್ನೇ ತರಿಸಿಕೊಂಡಳು. ನಿಶ್ಚಿತಾರ್ಥದ ದಿನ ನಡೆದ ಜಗಳದಲ್ಲಿ ಈ ಬಗ್ಗೆ ಓಪನ್ ಆಗಿ ಮಾತನಾಡಿದ್ದಾಳೆ ರಮ್ಯಾ. ಇದರಿಂದ ಝೇಂಡೆಗೆ ತಲೆಬಿಸಿ ಶುರುವಾಗಿದೆ. ಝೇಂಡೆ ಪಾಲಿಗೆ ರಮ್ಯಾ ವಿಲನ್ ಆಗಿದ್ದಾಳೆ.
ಈ ವಿಚಾರದಲ್ಲಿ ಮಧ್ಯವರ್ತಿ ಕ್ಷಮೆ ಕೇಳಲು ಮುಂದಾಗಿದ್ದಾನೆ. ಆದರೆ, ಇದಕ್ಕೆ ಸೊಪ್ಪು ಹಾಕಿಲ್ಲ ಝೇಂಡೆ. ‘ನಮ್ಮ ವ್ಯವಹಾರ ಯಾರಿಗೂ ಗೊತ್ತಾಗಬಾರದು. ಆದರೆ, ನೀನು ಅದನ್ನು ಮೀರಿದೆ. ತಪ್ಪು ಮಾಡಿ ಕ್ಷಮೆ ಕೇಳುವುದು, ಅಮ್ಮನ ಬಗ್ಗೆ ಕೆಟ್ಟದಾಗಿ ಮಾತನಾಡದೋದು ಎರಡೂ ಒಂದೇ. ಎರಡಕ್ಕೂ ಕ್ಷಮೆ ಇಲ್ಲ. ಈ ವಿಚಾರ ಅನುಗೆ ಗೊತ್ತಾಗಬಾರದು’ ಎಂದು ಝೇಂಡೆ ಹೇಳಿದ್ದಾನೆ.
ಝೇಂಡೆ ಮಾಸ್ಟರ್ಪ್ಲ್ಯಾನ್
ಝೇಂಡೆ ಮಾಸ್ಟರ್ಪ್ಲ್ಯಾನ್ ಶುರುಮಾಡಿದ್ದಾನೆ. ವರ್ಧನ್ ಕಂಪನಿಯಿಂದ ಆತ ಸಾಕಷ್ಟು ಆಸ್ತಿಯನ್ನು ಹೊಡೆದಿದ್ದಾನೆ. ಈಗ ಈ ವಿಚಾರ ಅನುಗೆ ಗೊತ್ತಾಗುವುದರಲ್ಲಿದೆ. ವರ್ಧನ್ ಕಂಪನಿಯಲ್ಲಿ ಲೆಕ್ಕ ನೋಡಿಕೊಳ್ಳುತ್ತಿದ್ದ ಶಾನಭೋಗನನ್ನು ಝೇಂಡೆ ಕರೆಸಿದ್ದಾನೆ. ‘ವರ್ಧನ್ ಕಂಪನಿನ ಅನುನೇ ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾಳೆ ಎಂಬುದನ್ನು ಹೇಳಬೇಕು. ನನ್ನ ಬಗ್ಗೆ ಯಾವುದೇ ವಿಚಾರವನ್ನು ಹೇಳಬಾರದು. ಒಟ್ಟಿನಲ್ಲಿ ಅನು ಅಪರಾಧಿ ಆಗಬೇಕು’ ಎಂದು ಝೇಂಡೆ ಹೇಳುತ್ತಿದ್ದಂತೆ ಶಾನಭೋಗರು ‘ಇದು ಸಾಧ್ಯವೇ ಇಲ್ಲ’ ಎಂದು ಹೇಳಿದ್ದಾರೆ.
‘ಸಣ್ಣಪುಟ್ಟ ಕೆಲಸ ಹೇಳಿದಾಗ ಒಪ್ಪಿಕೊಂಡೆ. ನನ್ನ ಕೊಂದರೂ ತೊಂದರೆ ಇಲ್ಲ’ ಎಂದು ಹೇಳಿದ್ದಾನೆ ಶಾನಭೋಗ. ಇದಕ್ಕೆ ಕುಟುಂಬದವರನ್ನು ಕೊಲೆ ಮಾಡುವ ಬೆದರಿಕೆ ಒಡ್ಡಿದ್ದಾನೆ. ‘ನನ್ನ ಕೈಗೆ ಕೆಸರು ಅಂಟಿದೆ. ನಾನು ಇದನ್ನು ಅನು ಕೈಗೆ ಹಸ್ತಾಂತರ ಮಾಡಬೇಕು. ಅದನ್ನು ನೀನು ಮಾತ್ರ ಮಾಡೋಕೆ ಸಾಧ್ಯ. ವಿದೇಶದಲ್ಲಿರುವ ನಿನ್ನ ಸುಂದರ ಕುಟುಂಬ ಚೆನ್ನಾಗಿ ಇರಬೇಕು ಎಂಬ ಆಸೆ ಇದೆಯೋ ಅಥವಾ ಇಲ್ಲವೋ’ ಎಂದು ಹೇಳುತ್ತಿದ್ದಂತೆ ಶಾನಭೋಗ ನಡುಗಿ ಹೋಗಿದ್ದಾನೆ.
ಆರಾಧನಾಗೆ ಮತ್ತೆ ಬೇಸರ
ಸಂಜುಗೆ ಆರಾಧನಾ ಕರೆ ಮಾಡಿದ್ದಾಳೆ. ಆಕೆ ಈತನೇ ಪತಿ ಎಂದುಕೊಂಡಿದ್ದಾಳೆ. ಆದರೆ, ಅಸಲಿಯತ್ತು ಬೇರೆಯೇ ಇದೆ. ಆತ ಆರ್ಯವರ್ಧನ್. ಈ ಕಾರಣಕ್ಕೆ ಅನು ಜತೆ ಸಂಜು ಕ್ಲೋಸ್ ಆಗುತ್ತಿದ್ದಾನೆ. ಈ ವಿಚಾರದಲ್ಲಿ ಸಂಜು ಸಾಕಷ್ಟು ಗೊಂದಲದಲ್ಲಿ ಇದ್ದಾನೆ. ಆಕೆಯಿಂದ ದೂರ ಹೋಗಲು ಆಗದೆ, ಹತ್ತಿರ ಬರಲೂ ಆಗದೆ ಒದ್ದಾಡುತ್ತಿದ್ದಾನೆ.
ಮೀರಾಗೆ ಶಾಕ್
ಝೇಂಡೆ ಹಾಗೂ ಮೀರಾ ಮೀಟ್ ಮಾಡಿದ್ದಾರೆ. ಶಾನಭೋಗ ಹೋಗುವ ಸಂದರ್ಭದಲ್ಲೇ ಮೀರಾ ಬಂದಿದ್ದಾಳೆ. ಇದರಿಂದ ಆಕೆಗೆ ಅನುಮಾನ ಹುಟ್ಟಿಕೊಂಡಿದೆ. ಝೇಂಡೆ ಬಳಿ ಬಂದ ಅವಳು ನಾನು ಕಂಪನಿ ಬಿಡುತ್ತೇನೆ ಎಂಬ ಮಾತನ್ನು ಹೇಳಿದ್ದಾಳೆ. ಇದನ್ನು ಕೇಳಿ ಝೇಂಡೆಗೆ ಶಾಕ್ ಆಗಿದೆ.
ಶ್ರೀಲಕ್ಷ್ಮಿ ಎಚ್.
Published On - 9:39 am, Sat, 26 November 22