ಅನು ಸಿರಿಮನೆ-ಸಂಜುನಿಂದ ಮುರಿದು ಬಿತ್ತು ರಮ್ಯಾ ಎಂಗೇಜ್​ಮೆಂಟ್

‘ನಿಮ್ಮಪ್ಪ ಫ್ರಾಡ್. ನನಗೆ ಇದು ಮೊದಲೇ ಗೊತ್ತಿತ್ತು. ಈಗ ಈ ವಿಚಾರ ಖಚಿತ ಆಯಿತು. ಇಂಥ ಸಂಬಂಧ ನನಗೆ ಬೇಡ. ನೀವು ಓಕೆ ಅಂದಿದ್ರು ನಾನು ಮಾತ್ರ ನಿಮ್ಮನ್ನು ಮದುವೆ ಆಗುತ್ತಿರಲಿಲ್ಲ. ಇಂಥ ಕುಟುಂಬದ ಸಹವಾಸವೇ ಬೇಡ’ ಎಂದು ರಮ್ಯಾ ನೇರ ಮಾತಿನಲ್ಲಿ ಹೇಳಿದ್ದಾಳೆ.

ಅನು ಸಿರಿಮನೆ-ಸಂಜುನಿಂದ ಮುರಿದು ಬಿತ್ತು ರಮ್ಯಾ ಎಂಗೇಜ್​ಮೆಂಟ್
ಸಂಜು-ಅನು
TV9kannada Web Team

| Edited By: Rajesh Duggumane

Nov 25, 2022 | 10:22 AM

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ

ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು

ಸಮಯ: ರಾತ್ರಿ: 9.30 ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಅನು ಸಿರಿಮನೆ ಗೆಳತಿ ರಮ್ಯಾ ಮನೆಯಲ್ಲಿ ಸಂಭ್ರಮನ ಮನೆ ಮಾಡಿತ್ತು. ರಮ್ಯಾಳ ಎಂಗೇಜ್​ಮೆಂಟ್ ಎಂಬ ಕಾರಣಕ್ಕೆ ವಠಾರದಲ್ಲಿ ಎಲ್ಲರೂ ಸಂತಸದಿಂದ ಇದ್ದರು. ಸಂಜು ಗೊಂದಲ್ಲಿದ್ದ. ಆತನಿಗೆ ಮನೆಯಿಂದ ಹೊರಡುವಂತೆ ಸೂಚನೆ ನೀಡಿದ್ದಾಳೆ. ಮನೆಯಿಂದ ಹೊರ ಹೋಗುವಾಗ ಝೇಂಡೆ ಎದುರಾಗಿದ್ದಾನೆ. ಆತನಿಗೆ ಅನು ಹಾಗೂ ಝೇಂಡೆ ಬೈದಿದ್ದಾರೆ. ಝೇಂಡೆ ಕೂಡ ಗಂಡಿನ ಕಡೆಯವರಿಂದ ಎಂಗೇಜ್​ಮೆಂಟ್​ಗೆ ಬರುವವನಿದ್ದ.

ಮುರಿದುಬಿತ್ತು ಎಂಗೇಜ್​ಮೆಂಟ್

ವರ್ಧನ್ ಸಂಸ್ಥೆಗೆ ಸೇರಿದ ಸಂಪಿಗೆಪುರದ ಪ್ರಾಪರ್ಟಿ ಝೇಂಡೆ ಕೈಗೆ ಸೇರಿದೆ. ಇದನ್ನು ಡೀಲ್ ಮಾಡಿದ್ದು ರಮ್ಯಾಳನ್ನು ಮದುವೆ ಆಗಲು ಬಂದ ಹುಡುಗನ ತಂದೆ. ಈ ವಿಚಾರವನ್ನು ರಮ್ಯಾ ತಿಳಿದುಕೊಂಡಿದ್ದಳು. ಈ ಮಾಹಿತಿಯನ್ನು ಅನುಗೆ ಹೇಳಬೇಕು ಎಂದು ಆಕೆ ಅಂದುಕೊಂಡಿದ್ದಳು. ಆದರೆ, ಅದು ಸಾಧ್ಯವಾಗಿಲ್ಲ. ಈಗ ಅದೇ ಕುಟುಂಬ ರಮ್ಯಾಳ ಮದುವೆ ಆಗಲು ಬಂದಿದೆ. ಎಂಗೇಜ್​ಮೆಂಟ್​ಗೆ ಝೇಂಡೆ ಕೂಡ ಬಂದಿದ್ದ. ಆದರೆ, ಆತನನ್ನು ಸಂಜು ಹಾಗೂ ಅನು ಅಡ್ಡಗಟ್ಟಿ ಬೈದಿದ್ದಾರೆ. ತಮ್ಮ ಬಾಸ್​ಗೆ ಅವಮಾನ ಆಯಿತು ಎಂದು ರಮ್ಯಾಳ ಮದುವೆ ಆಗುವ ಹುಡಗನ ತಂದೆ ಕಿಡಿಕಾರಿದ್ದಾನೆ. ಇದಕ್ಕೆ ರಮ್ಯಾ ಸಿಟ್ಟಾಗಿದ್ದಾಳೆ.

‘ನಿಮ್ಮಪ್ಪ ಫ್ರಾಡ್. ನನಗೆ ಇದು ಮೊದಲೇ ಗೊತ್ತಿತ್ತು. ಈಗ ಈ ವಿಚಾರ ಖಚಿತ ಆಯಿತು. ಇಂಥ ಸಂಬಂಧ ನನಗೆ ಬೇಡ. ನೀವು ಓಕೆ ಅಂದಿದ್ರು ನಾನು ಮಾತ್ರ ನಿಮ್ಮನ್ನು ಮದುವೆ ಆಗುತ್ತಿರಲಿಲ್ಲ. ಇಂಥ ಕುಟುಂಬದ ಸಹವಾಸವೇ ಬೇಡ’ ಎಂದು ರಮ್ಯಾ ನೇರ ಮಾತಿನಲ್ಲಿ ಹೇಳಿದ್ದಾಳೆ. ಆಕೆಯ ಮಾತನ್ನು ಕೇಳಿ ಮದುವೆ ಆಗಲು ಬಂದ ಹುಡುಗ ಕಂಗಾಲಾಗಿದ್ದಾನೆ. ಆತನಿಗೆ ರಮ್ಯಾಳ ಪರ ಮಾತನಾಡಬೇಕೋ ಅಥವಾ ತಂದೆಯ ಪರ ಮಾತನಾಡಬೇಕೋ ಎಂಬುದು ಗೊತ್ತಾಗದೆ ಒದ್ದಾಡಿದ್ದಾನೆ. ಒಟ್ಟಿನಲ್ಲಿ ಈ ಎಂಗೇಜ್​ಮೆಂಟ್ ಮುರಿದು ಬಿದ್ದಿದೆ.

ಅನು ವಿಧವೆ. ಆಕೆ ಬಂದರೆ ಅಪಶಕುನ ಎಂಬುದು ರಮ್ಯಾಳ ತಾಯಿಯ ಅಭಿಪ್ರಾಯ ಆಗಿತ್ತು. ಈಗ ಆಕೆ ಅಂದುಕೊಂಡಂತೆ ನಡೆದು ಹೋಗಿದೆ. ಹೀಗಾಗಿ, ರಮ್ಯಾಳ ತಾಯಿ ಕಣ್ಣಿರು ಹಾಕಿದ್ದಾಳೆ. ಮಗಳ ಬಾಳು ಹಾಳಾಯಿತಲ್ಲ ಎಂದು ಗೋಳಾಡಿದ್ದಾಳೆ. ಆದರೆ, ರಮ್ಯಾ ಮಾತ್ರ ಈ ಬಗ್ಗೆ ಚಿಂತೆ ಮಾಡಿಕೊಂಡಿಲ್ಲ.

ಅನುಗೆ ಅವಮಾನ

ರಮ್ಯಾಳ ತಾಯಿ ಅನುಗೆ ಬಾಯಿಗೆ ಬಂದಂತೆ ಬೈದಿದ್ದಾಳೆ. ನಿನ್ನಿಂದಲೇ ಈ ರೀತಿ ಆಯಿತು ಎಂದು ಕೂಗಾಡಿದ್ದಾಳೆ. ಇದರಿಂದ ಆಕೆಗೆ ಬೇಸರ ಆಗಿದೆ. ಮನೆ ಒಳಗೆ ಹೋಗಿ ಕಣ್ಣೀರು ಹಾಕಿದ್ದಾಳೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಸಂಜು ಕಾಳಜಿಗೆ ಸುಬ್ಬು ಫಿದಾ

ಸಂಜು ಈ ಎಲ್ಲಾ ದೃಶ್ಯಕ್ಕೆ ಸಾಕ್ಷಿ ಆಗಿ ನಿಂತಿದ್ದ. ರಮ್ಯಾಳ ಎಂಗೇಜ್​ಮೆಂಟ್ ಮುರಿದು ಬೀಳುವಲ್ಲಿ ಆತನ ಪಾಲು ಕೂಡ ಇತ್ತು. ಈ ವಿಚಾರದಲ್ಲಿ ಆತನಿಗೆ ಬೇಸರ ಇದೆ. ಆದರೆ, ಬೇಸರ ಮಾಡಿಕೊಳ್ಳದಂತೆ ಸುಬ್ಬು ಸಮಾಧಾನ ಮಾಡಿದ್ದಾನೆ. ಇದರಲ್ಲಿ ಯಾರ ತಪ್ಪೂ ಇಲ್ಲ ಎಂದು ಸುಬ್ಬು ಹೇಳಿದ್ದಾನೆ. ಆದರೆ, ಝೇಂಡೆಯನ್ನು ಸಂಜು ತಡೆದಿದ್ದು ಏಕೆ? ಆತನಿಗೆ ಈತ ಬೈದಿದ್ದು ಏಕೆ ಎಂಬ ಪ್ರಶ್ನೆ ಕಾಡಿತ್ತು. ಇದಕ್ಕೆ ಸಂಜು ಉತ್ತರ ನೀಡಿದ್ದಾನೆ. ಝೇಂಡೆ ಅನುಗೆ ತೊಂದರೆ ಕೊಡಲು ಪ್ಲ್ಯಾನ್ ಮಾಡಿದ್ದು, ಇದಕ್ಕಾಗಿ ಆತ ರಾತ್ರಿ ಬಂದಿದ್ದು ಎಲ್ಲವನ್ನೂ ಹೇಳಿದ್ದಾನೆ. ಈ ಕಾರಣಕ್ಕೆ ತಾನು ಹೊರಗೆ ಕಾವಲು ಕಾಯುತ್ತಿದ್ದೆ ಎಂಬುದನ್ನೂ ಹೇಳಿದ್ದಾನೆ. ಇದನ್ನು ಕೇಳಿ ಸುಬ್ಬುಗೆ ಖುಷಿ ಆಗಿದೆ.

ಇದನ್ನೂ ಓದಿ

ಶ್ರೀಲಕ್ಷ್ಮಿ ಎಚ್.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada