Vaishnavi Gowda: ವಿದ್ಯಾಭರಣ್ ಜತೆಗಿನ ಮದುವೆ ಮಾತುಕತೆ ಕ್ಯಾನ್ಸಲ್; ಬೇಸರ ತೋಡಿಕೊಂಡ ವೈಷ್ಣವಿ ಗೌಡ

Vidhyabharan: ವಿದ್ಯಾಭರಣ್ ಜತೆಗಿನ ಮದುವೆ ಮಾತುಕತೆ ಕ್ಯಾನ್ಸಲ್ ಆದ  ಬಗ್ಗೆ ವೈಷ್ಣವಿ ಗೌಡ ಮಾಹಿತಿ ನೀಡಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

Vaishnavi Gowda: ವಿದ್ಯಾಭರಣ್ ಜತೆಗಿನ ಮದುವೆ ಮಾತುಕತೆ ಕ್ಯಾನ್ಸಲ್; ಬೇಸರ ತೋಡಿಕೊಂಡ ವೈಷ್ಣವಿ ಗೌಡ
ವೈಷ್ಣವಿ ಗೌಡ
Follow us
TV9 Web
| Updated By: Digi Tech Desk

Updated on:Nov 25, 2022 | 9:39 AM

ವೈಷ್ಣವಿ ಗೌಡ (Vaishnavi Gowda) ಹಾಗೂ ಉದ್ಯಮಿ ವಿದ್ಯಾಭರಣ್ ನಡುವೆ ನಿಶ್ಚಿತಾರ್ಥ ನಡೆದಿದೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ವೈಷ್ಣವಿ ಗೌಡ ಹಾಗೂ ವಿದ್ಯಾಭರಣ್ ಇಬ್ಬರೂ ಸ್ಪಷ್ಟನೆ ನೀಡಿದ್ದರು. ‘ಇದು ನಿಶ್ಚಿತಾರ್ಥ ಅಲ್ಲ. ಕೇವಲ ಮದುವೆ ಮಾತುಕತೆ’ ಎಂದು ಹೇಳಿದ್ದರು. ಈಗ ವಿದ್ಯಾಭರಣ್ ಜತೆಗಿನ ಮದುವೆ ಮಾತುಕತೆ ಕ್ಯಾನ್ಸಲ್ ಆದ  ಬಗ್ಗೆ ವೈಷ್ಣವಿ ಗೌಡ ಮಾಹಿತಿ ನೀಡಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

‘ನಾವು ಇದನ್ನು (ಎಂಗೇಜ್​ಮೆಂಟ್ ಆಗಿದೆ ಎನ್ನಲಾದ ಫೋಟೋ) ಎಲ್ಲ ಕಡೆಗಳಲ್ಲಿ ನೋಡುತ್ತಿದ್ದೇವೆ. ನಮ್ಮ ಖಾಸಗಿತನಕ್ಕೆ ಗೌರವ ಕೊಡಿ. ಇದು ಎಂಗೇಜ್​ಮೆಂಟ್ ಅಲ್ಲ. ಆ ರೀತಿ ಆದರೆ ನಾನೇ ಮಾಹಿತಿ ನೀಡುತ್ತೇನೆ’ ಎಂದು ಇನ್​ಸ್ಟಾಗ್ರಾಮ್​ ಸ್ಟೇಟಸ್​ನಲ್ಲಿ ಬರೆದುಕೊಂಡಿದ್ದಾರೆ ವೈಷ್ಣವಿ.

ಮತ್ತೊಂದು ಸ್ಟೇಟಸ್​ನಲ್ಲಿ, ‘ನಾವು ಇದನ್ನು ಇಲ್ಲಿಗೆ ಬಿಡುತ್ತಿದ್ದೇವೆ. ಇದನ್ನು ಮತ್ತೂ ಎಳೆಯಬೇಡಿ. ಎಲ್ಲವನ್ನೂ ಇಲ್ಲೇ ಬಿಟ್ಟುಬಿಡಿ. ನನಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ’ ಎಂದಿದ್ದಾರೆ ವೈಷ್ಣವಿ. ಈ ಮೂಲಕ ಮದುವೆ ಮಾತುಕತೆ ಕ್ಯಾನ್ಸಲ್ ಆಗಿರುವ ವಿಚಾರವನ್ನು ಅವರು ಅಧಿಕೃತ ಮಾಡಿದ್ದಾರೆ.

ಇದನ್ನೂ ಓದಿ: Triple Riding Review: ‘ತ್ರಿಬಲ್​ ರೈಡಿಂಗ್​’ ರೇಸ್​ನಲ್ಲಿ ಓವರ್​ಟೇಕ್​ ಮಾಡಿದ ಸಾಧುಕೋಕಿಲ, ರಂಗಾಯಣ ರಘು

ವಿದ್ಯಾಭರಣ್ ಹೇಳಿದ್ದೇನು?

ವೈಷ್ಣವಿ ಗೌಡ ಹಾಗೂ ವಿದ್ಯಾಭರಣ್ ಮಾಲೆ ಧರಿಸಿ ನಿಂತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಎದುರಿನಲ್ಲಿ ಹೂವು ಹಣ್ಣುಗಳನ್ನು ಇಡಲಾಗಿತ್ತು. ಹುಡುಗನ ಪಕ್ಕ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಕೂಡ ಇದ್ದರು. ನಿಶ್ಚಿತಾರ್ಥ ನಡೆದಿದೆ ಎಂದು ಎಲ್ಲರೂ ವೈಷ್ಣವಿ ಗೌಡ ಅವರಿಗೆ ಶುಭಾಶಯ ತಿಳಿಸಿದ್ದರು. ಈ ಬಗ್ಗೆ ವಿದ್ಯಾಭರಣ್ ಮಾತನಾಡಿದ್ದಾರೆ. ‘ನ.11ರಂದು ಎರಡು ಕುಟುಂಬಗಳ ನಡುವೆ ಮಾತುಕತೆ ನಡೆದಿದೆ. ನಾನು, ವೈಷ್ಣವಿ ಇನ್ನೂ ಮಾತನಾಡಿಲ್ಲ. ಈ ಫೋಟೋ ಎಲ್ಲಿಂದ ವೈರಲ್ ಆಗಿದೆಯೋ ಗೊತ್ತಿಲ್ಲ’ ಎಂದಿದ್ದಾರೆ ಅವರು.

ವಿದ್ಯಾಭರಣ್ ಬಗ್ಗೆ ಆರೋಪ

ನಿಶ್ಚಿತಾರ್ಥದ್ದು ಎನ್ನಲಾದ ಫೋಟೋ ವೈರಲ್ ಆದ ಬೆನ್ನಲ್ಲೇ ಆಡಿಯೋ ಒಂದು ವೈರಲ್ ಆಗಿತ್ತು. ಈ ಆಡಿಯೋದಲ್ಲಿ ಯುವತಿಯೊಬ್ಬಳು ವಿದ್ಯಾಭರಣ್​ ವಿರುದ್ಧ ಆರೋಪ ಮಾಡಿದ್ದರು. ಈ ಆಡಿಯೋ ಕುರಿತು ವಿದ್ಯಾಭರಣ್ ಸ್ಪಷ್ಟನೆ ನೀಡಿದ್ದಾರೆ. ‘ಈ ಹಿಂದೆ ನನಗೆ ಗರ್ಲ್​​ಫ್ರೆಂಡ್ ಇದ್ದಿದ್ದು ನಿಜ. ಇದ್ದು ಗೊತ್ತಿರುವ ವಿಚಾರ. ನಾನು ಯಾವುದೇ ಹುಡುಗಿಯೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ಆಡಿಯೋದಲ್ಲಿ ನನ್ನ ಬಗ್ಗೆ ಯುವತಿಯೊಬ್ಬರು ಮಾತನಾಡಿದ್ದಾರೆ. ಆಕೆ ನೇರವಾಗಿಯೇ ಬಂದು ಆರೋಪ ಮಾಡಬಹುದಿತ್ತು. ಆರೋಪ ಮಾಡುವ ಬದಲು ನನ್ನ ವಿರುದ್ಧ ದೂರು ಕೊಡಬಹುದಿತ್ತು. ನಮ್ಮ ಕುಟುಂಬದ ವರ್ಚಸ್ಸು ಹಾಳು ಮಾಡುವ ಪ್ರಯತ್ನ ನಡೆದಿದೆ. ಈ ಬಗ್ಗೆ ಇಂದು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತೇನೆ’ ಎಂದು ವಿದ್ಯಾಭರಣ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:11 am, Fri, 25 November 22

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ