‘ವೈಷ್ಣವಿ ಜತೆ ಮಾತನಾಡಿಲ್ಲ, ಇನ್ನೂ ನಿಶ್ಚಿತಾರ್ಥ ನಡೆದಿಲ್ಲ’; ಉದ್ಯಮಿ ವಿದ್ಯಾಭರಣ್ ಸ್ಪಷ್ಟನೆ

ವೈಷ್ಣವಿ ಗೌಡ ಹಾಗೂ ವಿದ್ಯಾಭರಣ್ ಮಾಲೆ ಧರಿಸಿ ನಿಂತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನಿಶ್ಚಿತಾರ್ಥ ನಡೆದಿದೆ ಎಂದು ಎಲ್ಲರೂ ವೈಷ್ಣವಿ ಗೌಡ ಅವರಿಗೆ ಶುಭಾಶಯ ತಿಳಿಸಿದ್ದರು. ಈ ಬಗ್ಗೆ ವಿದ್ಯಾಭರಣ್ ಮಾತನಾಡಿದ್ದಾರೆ

‘ವೈಷ್ಣವಿ ಜತೆ ಮಾತನಾಡಿಲ್ಲ, ಇನ್ನೂ ನಿಶ್ಚಿತಾರ್ಥ ನಡೆದಿಲ್ಲ’; ಉದ್ಯಮಿ ವಿದ್ಯಾಭರಣ್ ಸ್ಪಷ್ಟನೆ
ವೈಷ್ಣವಿ
TV9kannada Web Team

| Edited By: Rajesh Duggumane

Nov 25, 2022 | 7:09 AM

ಇತ್ತೀಚೆಗೆ ಕಿರುತೆರೆ ನಟಿ ವೈಷ್ಣವಿ ಗೌಡ (Vaishnavi Gowda) ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾದ ಫೋಟೋ ಒಂದು ವೈರಲ್ ಆಗಿತ್ತು. ಉದ್ಯಮಿ ವಿದ್ಯಾಭರಣ್ ಜತೆ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಈಗ ವಿದ್ಯಾಭರಣ್ (Vidhyabharan) ಅವರು ಸ್ಪಷ್ಟನೆ ನೀಡಿದ್ದಾರೆ. ‘ನಾನು ವೈಷ್ಣವಿ ಇನ್ನೂ ಪರಸ್ಪರ ಮಾತನಾಡಿಲ್ಲ, ನಿಶ್ಚಿತಾರ್ಥ ನಡೆದಿಲ್ಲ’ ಎಂದು ವಿದ್ಯಾಭರಣ್ ಟಿವಿ9 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. ಈ ಮೂಲಕ ವೈರಲ್ ಆದ ಫೋಟೋ ಬಗ್ಗೆ ಹುಟ್ಟಿಕೊಂಡ ಅನುಮಾನಕ್ಕೆ ಸ್ಪಷ್ಟಣೆ ನೀಡಿದ್ದಾರೆ.

ವೈಷ್ಣವಿ ಗೌಡ ಹಾಗೂ ವಿದ್ಯಾಭರಣ್ ಮಾಲೆ ಧರಿಸಿ ನಿಂತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಎದುರಿನಲ್ಲಿ ಹೂವು ಹಣ್ಣುಗಳನ್ನು ಇಡಲಾಗಿತ್ತು. ಹುಡುಗನ ಪಕ್ಕ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಕೂಡ ಇದ್ದರು. ನಿಶ್ಚಿತಾರ್ಥ ನಡೆದಿದೆ ಎಂದು ಎಲ್ಲರೂ ವೈಷ್ಣವಿ ಗೌಡ ಅವರಿಗೆ ಶುಭಾಶಯ ತಿಳಿಸಿದ್ದರು. ಈ ಬಗ್ಗೆ ವಿದ್ಯಾಭರಣ್ ಮಾತನಾಡಿದ್ದಾರೆ. ‘ನ.11ರಂದು ಎರಡು ಕುಟುಂಬಗಳ ನಡುವೆ ಮಾತುಕತೆ ನಡೆದಿದೆ. ನಾನು, ವೈಷ್ಣವಿ ಇನ್ನೂ ಮಾತನಾಡಿಲ್ಲ. ಈ ಫೋಟೋ ಎಲ್ಲಿಂದ ವೈರಲ್ ಆಗಿದೆಯೋ ಗೊತ್ತಿಲ್ಲ’ ಎಂದಿದ್ದಾರೆ ಅವರು.

ವೈರಲ್ ಆಡಿಯೋಗೆ ಸ್ಪಷ್ಟನೆ

ನಿಶ್ಚಿತಾರ್ಥದ ಫೋಟೋ ವೈರಲ್ ಆದ ಬೆನ್ನಲ್ಲೇ ಆಡಿಯೋ ಒಂದು ವೈರಲ್ ಆಗಿತ್ತು. ಈ ಆಡಿಯೋದಲ್ಲಿ ಹುಡುಗಿ ಒಬ್ಬರು ವಿದ್ಯಾಭರಣ್​ ವಿರುದ್ಧ ಆರೋಪ ಮಾಡಿದ್ದರು. ಈ ಆಡಿಯೋ ಕುರಿತು ವಿದ್ಯಾಭರಣ್ ಸ್ಪಷ್ಟನೆ ನೀಡಿದ್ದಾರೆ. ‘ಈ ಹಿಂದೆ ನನಗೆ ಗರ್ಲ್​​ಫ್ರೆಂಡ್ ಇದ್ದಿದ್ದು ನಿಜ. ಇದ್ದು ಗೊತ್ತಿರುವ ವಿಚಾರ. ನಾನು ಯಾವುದೇ ಹುಡುಗಿಯೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ಆಡಿಯೋದಲ್ಲಿ ನನ್ನ ಬಗ್ಗೆ ಯುವತಿಯೊಬ್ಬರು ಮಾತನಾಡಿದ್ದಾರೆ. ಆಕೆ ನೇರವಾಗಿಯೇ ಬಂದು ಆರೋಪ ಮಾಡಬಹುದಿತ್ತು. ಆರೋಪ ಮಾಡುವ ಬದಲು ನನ್ನ ವಿರುದ್ಧ ದೂರು ಕೊಡಬಹುದಿತ್ತು. ನಮ್ಮ ಕುಟುಂಬದ ವರ್ಚಸ್ಸು ಹಾಳು ಮಾಡುವ ಪ್ರಯತ್ನ ನಡೆದಿದೆ. ಈ ಬಗ್ಗೆ ಇಂದು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತೇನೆ’ ಎಂದು ವಿದ್ಯಾಭರಣ್ ಹೇಳಿದ್ದಾರೆ.

ವೈಷ್ಣವಿಗೆ ಬಂದಿತ್ತು ಹಲವು ಮದುವೆ ಆಫರ್

‘ಬಿಗ್ ಬಾಸ್​’ಗೆ ಬಂದಾಗ ವೈಷ್ಣವಿ ಗೌಡ ಅವರು ಮದುವೆ ಬಗ್ಗೆ ಸಾಕಷ್ಟು ಮಾತನಾಡಿದ್ದರು. ತಮಗೆ ಮದುವೆ ಆಗಬೇಕು ಎನ್ನುವ ಆಸೆ ಇದೆ ಎಂದು ಅನೇಕ ಬಾರಿ ಹೇಳಿಕೊಂಡಿದ್ದರು. ಈ ಕಾರಣಕ್ಕೆ ಬಿಗ್ ಬಾಸ್​ನಿಂದ ಹೊರ ಬಂದ ನಂತರದಲ್ಲಿ ಮದುವೆ ಆಫರ್​ಗಳು ಬರೋಕೆ ಆರಂಭ ಆಗಿದ್ದವು. ಈ ಬಗ್ಗೆ ಅವರು ಲೈವ್​ನಲ್ಲಿ ಹೇಳಿಕೊಂಡಿದ್ದೂ ಇದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada