ಎಂಗೇಜ್ ಆದ ವೈಷ್ಣವಿ ಗೌಡ? ವೈರಲ್ ಆದ ಫೋಟೋ ನೋಡಿ ಫ್ಯಾನ್ಸ್ ಖುಷ್

ಬಿಗ್ ಬಾಸ್​ನಿಂದ ಹೊರ ಬಂದ ನಂತರದಲ್ಲಿ ವೈಷ್ಣವಿಗೆ ಮದುವೆ ಆಫರ್​ಗಳು ಬರೋಕೆ ಆರಂಭ ಆಗಿದ್ದವು. ಈ ಬಗ್ಗೆ ಅವರು ಲೈವ್​ನಲ್ಲಿ ಹೇಳಿಕೊಂಡಿದ್ದೂ ಇದೆ.

ಎಂಗೇಜ್ ಆದ ವೈಷ್ಣವಿ ಗೌಡ? ವೈರಲ್ ಆದ ಫೋಟೋ ನೋಡಿ ಫ್ಯಾನ್ಸ್ ಖುಷ್
ವೈಷ್ಣವಿ
TV9kannada Web Team

| Edited By: Rajesh Duggumane

Nov 23, 2022 | 8:06 AM

‘ಅಗ್ನಿಸಾಕ್ಷಿ’ ಧಾರಾವಾಹಿ (Agnisakshi) ಮೂಲಕ ಸಾಕಷ್ಟು ಫೇಮಸ್ ಆದವರು ನಟಿ ವೈಷ್ಣವಿ ಗೌಡ (Vaishnavi Gowda). ಅವರಿಗೆ ಈ ಧಾರಾವಾಹಿ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಆ ಬಳಿಕ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 8’ಕ್ಕೆ ಕಾಲಿಟ್ಟರು. ಕೊನೆಯ ಹಂತದವರೆಗೂ ಅವರು ಆಟ ಆಡಿದರು. ಆದರೆ, ಗೆಲುವು ಸಿಗಲಿಲ್ಲ. ಅವರ ನಗು, ಹಾಸ್ಯಗಳೆಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಕೆಲ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಇತ್ತೀಚೆಗೆ ಅವರು ‘ಲಕ್ಷಣ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ಹೀಗಿರುವಾಗಲೇ ಫೋಟೋ ಒಂದು ವೈರಲ್ ಆಗಿದೆ.

‘ಬಿಗ್ ಬಾಸ್​’ಗೆ ಬಂದಾಗ ವೈಷ್ಣವಿ ಗೌಡ ಅವರು ಮದುವೆ ಬಗ್ಗೆ ಸಾಕಷ್ಟು ಮಾತನಾಡಿದ್ದರು. ತಮಗೆ ಮದುವೆ ಆಗಬೇಕು ಎನ್ನುವ ಆಸೆ ಇದೆ ಎಂದು ಅನೇಕ ಬಾರಿ ಹೇಳಿಕೊಂಡಿದ್ದರು. ಈ ಕಾರಣಕ್ಕೆ ಬಿಗ್ ಬಾಸ್​ನಿಂದ ಹೊರ ಬಂದ ನಂತರದಲ್ಲಿ ಮದುವೆ ಆಫರ್​ಗಳು ಬರೋಕೆ ಆರಂಭ ಆಗಿದ್ದವು. ಈ ಬಗ್ಗೆ ಅವರು ಲೈವ್​ನಲ್ಲಿ ಹೇಳಿಕೊಂಡಿದ್ದೂ ಇದೆ. ‘ಕನ್ನಡ ಬಿಗ್ ಬಾಸ್ ಸೀಸನ್ 8’ ಪೂರ್ಣಗೊಂಡು ಒಂದು ವರ್ಷದ ಬಳಿಕ ಅವರು ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ವೈಷ್ಣವಿ ಗೌಡ ಹಾಗೂ ಹುಡುಗನೊಬ್ಬ ಮಾಲೆ ಧರಿಸಿ ನಿಂತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹುಡುಗನ ಪಕ್ಕ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಕೂಡ ಇದ್ದಾರೆ. ಎದುರಿನಲ್ಲಿ ಹೂವು ಹಣ್ಣುಗಳನ್ನು ಇಡಲಾಗಿದೆ. ಸದ್ಯ ವೈಷ್ಣವಿ ಗೌಡ ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಈ ಫೋಟೋದ ಅಸಲಿಯತ್ತೇನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ: ಬಿಗ್​ ಬಾಸ್​ ವೈಷ್ಣವಿ ಗೌಡ ಹೊಸ ಸಿನಿಮಾ ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’; ಇದರಲ್ಲಿದೆ ಡಿಫರೆಂಟ್​ ಕಾನ್ಸೆಪ್ಟ್​​

ವೈಷ್ಣವಿ ಗೌಡ ಅವರು ಕಿರುತೆರೆಯಲ್ಲಿ ಅಷ್ಟಾಗಿ ಆ್ಯಕ್ಟೀವ್ ಇಲ್ಲ. ಹಾಗಂತ ಅವರ ಖ್ಯಾತಿ ಏನು ಕಡಿಮೆ ಆಗಿಲ್ಲ. ಅವರು ಮರಳಿ ಕಿರುತೆರೆಗೆ ಬರಬೇಕು ಎಂಬುದು ಫ್ಯಾನ್ಸ್ ಕೋರಿಕೆ ಆಗಿತ್ತು. ‘ಲಕ್ಷಣ’ ಧಾರಾವಾಹಿಯಲ್ಲಿ ಅವರು ಅತಿಥಿ ಪಾತ್ರ ಮಾಡುವ ಮೂಲಕ ಫ್ಯಾನ್ಸ್​ಗೆ ಖುಷಿ ನೀಡಿದ್ದರು. ಹೀಗಿರುವಾಗಲೇ ಅವರ ಎಂಗೇಜ್​ಮೆಂಟ್ ಸುದ್ದಿ ಹೊರ ಬಿದ್ದಿದೆ. ವೈಷ್ಣವಿ ಗೌಡ ಅವರ ಕುಟುಂಬದವರಾಗಲಿ ಅಥವಾ ವೈಷ್ಣವಿ ಆಗಲಿ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ವೈರಲ್ ಆದ ಫೋಟೋ ಬಗ್ಗೆ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada