BBK9: ಸಂಪೂರ್ಣ ಬದಲಾಯ್ತು ಬಿಗ್ ಬಾಸ್ ಮನೆ ವಿನ್ಯಾಸ; ಇದೇ ಪರಿಸ್ಥಿತಿ ಮುಂದುವರಿದರೆ ಸ್ಪರ್ಧಿಗಳ ಪಾಡು ಕಷ್ಟ
Bigg Boss Kannada Season 9: ದೊಡ್ಮನೆಯನ್ನು ಕಾಡಿನ ರೀತಿ ಬದಲಾಯಿಸಲಾಗಿದೆ. ಈ ಮೊದಲು ಸ್ಪರ್ಧಿಗಳಿಗೆ ನೀಡಿದ ಅನೇಕ ಸೌಲಭ್ಯಗಳನ್ನು ಹಿಂಪಡೆಯಲಾಗಿದೆ.
ಬಿಗ್ ಬಾಸ್ (Bigg Boss) ರಿಯಾಲಿಟಿ ಶೋನಲ್ಲಿ ಹಲವು ಪ್ರಯೋಗಗಳನ್ನು ಮಾಡಲಾಗುತ್ತದೆ. ಆದರೆ ಮನೆಯ ವಿನ್ಯಾಸವನ್ನು ಬದಲಾಯಿಸುವುದು ಅತಿ ಅಪರೂಪ. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ (Bigg Boss Kannada Season 9) ಇಂಥ ಪ್ರಯೋಗ ಮಾಡಲಾಗಿದೆ. ಮನೆಯ ಒಂದು ಭಾಗವನ್ನು ಕಾಡಿನ ರೀತಿಯಲ್ಲಿ ಬದಲಾಯಿಸಲಾಗಿದೆ. ಈ ಮೊದಲು ಸ್ಪರ್ಧಿಗಳಿಗೆ ನೀಡಿದ ಅನೇಕ ಸೌಲಭ್ಯಗಳನ್ನು ವಾಪಸ್ ಪಡೆದುಕೊಳ್ಳಲಾಗಿದೆ. ಬಟ್ಟೆ, ಅಡುಗೆ ಸಾಮಾಗ್ರಿ ಮುಂತಾದ್ದನ್ನು ಹಿಂಪಡೆಯಲಾಗಿದೆ. ಮತ್ತೆ ಸಹಜ ಸ್ಥಿತಿಗೆ ಮರಳಲು ಸ್ಪರ್ಧಿಗಳು ವಿವಿಧ ಟಾಸ್ಕ್ ಗೆಲ್ಲಬೇಕಿದೆ. ಕಾಡಿನ ವಿನ್ಯಾಸ ಹೀಗೆಯೇ ಮುಂದುವರಿದರೆ ಸ್ಪರ್ಧಿಗಳ ಪರಿಸ್ಥಿತಿ ಕಷ್ಟ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 22, 2022 02:54 PM
Latest Videos