ಎಂಟು ದಶಕಗಳ ನಂತರ ಸಂಪೂರ್ಣ ಭರ್ತಿಯಾದ ಹಿರಿಯೂರು ವಾಣಿವಿಲಾಸ ಜಲಾಶಯಕ್ಕೆ ಬಿಜೆಪಿ ಗಣ್ಯರಿಂದ ಬಾಗಿನ ಅರ್ಪಣೆ
ಬಾಗಿನವನ್ನು ಯಡಿಯೂರಪ್ಪ ತಮ್ಮ ಕೈಗೆ ತೆಗೆದುಕೊಳ್ಳುವಾಗ ಅದು ಜಾರಿದ ಪ್ರಸಂಗ ನಡೆಯಿತು. ಪಕ್ಕದಲ್ಲಿದ್ದ ಶಾಸಕಿ ಪೂರ್ಣಿಮಾ ಶ್ರೀನಿವಾಸ ಅದನ್ನು ಹಿಡಿದು ಕಟ್ಟೆಯ ಮೇಲಿಟ್ಟರು.
ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನಲ್ಲಿರುವ ವಾಣಿವಿಲಾಸ ಜಲಾಶಯ ಸುಮಾರು 8 ದಶಕಗಳಲ್ಲಿ ಮೊದಲ ಬಾರಿಗೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಹಾಗೂ ಇನ್ನಿತರ ಗಣ್ಯರು ಬಾಗಿನ (Bagina) ಅರ್ಪಿಸಿದರು. ಬಾಗಿನವನ್ನು ಯಡಿಯೂರಪ್ಪ ತಮ್ಮ ಕೈಗೆ ತೆಗೆದುಕೊಳ್ಳುವಾಗ ಅದು ಜಾರಿದ ಪ್ರಸಂಗ ನಡೆಯಿತು. ಪಕ್ಕದಲ್ಲಿದ್ದ ಶಾಸಕಿ ಪೂರ್ಣಿಮಾ ಶ್ರೀನಿವಾಸ ಅದನ್ನು ಹಿಡಿದು ಕಟ್ಟೆಯ ಮೇಲಿಟ್ಟರು. ಪೂಜೆಯ ನಂತರ ಎಲ್ಲ ಗಣ್ಯರು ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos