Sai Dharam Tej: ಶಸ್ತ್ರಚಿಕಿತ್ಸೆಗಾಗಿ ನಟನೆಗೆ ಬ್ರೇಕ್ ಕೊಟ್ಟ ನಟ ಸಾಯಿ ಧರಮ್ ತೇಜ್

ಸಾಯಿ ಧರಮ್ ತೇಜ್ ಅಭಿಮಾನಿಗಳಿಗೆ ಈ ನಿರ್ಧಾರ ಬೇಸರ ಮೂಡಿಸಿದೆ. ಇನ್ನೂ ಕೆಲವರು ಅವರ ನಿರ್ಧಾರವನ್ನು ಬೆಂಬಲಿಸಿದ್ದಾರೆ.

Sai Dharam Tej: ಶಸ್ತ್ರಚಿಕಿತ್ಸೆಗಾಗಿ ನಟನೆಗೆ ಬ್ರೇಕ್ ಕೊಟ್ಟ ನಟ ಸಾಯಿ ಧರಮ್ ತೇಜ್
ಸಆಯಿ ಧರಮ್ ತೇಜ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 19, 2023 | 9:06 AM

ನಟ ಸಾಯಿ ಧರಮ್ ತೇಜ್ (Sai Dharam Tej) ಅಭಿಮಾನಿಗಳಿಗೆ ಬೇಸರದ ಸುದ್ದಿ ಕೊಟ್ಟಿದ್ದಾರೆ. ಸುಮಾರು ಆರು ತಿಂಗಳ ಕಾಲ ಸಿನಿಮಾದಿಂದ ದೂರ ಇರುವುದಾಗಿ ಘೋಷಿಸಿದ್ದಾರೆ. ತಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅವರು ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅಭಿಮಾನಿಗಳು ಇದನ್ನು ಅರ್ಥಮಾಡಿಕೊಳ್ಳಲ್ಲಿದ್ದಾರೆ ಎಂಬ ಭಾವನೆ ಅವರದ್ದು. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇನ್ನೂ ಕೆಲವರು ಸಾಯಿ ಧರಮ್ ತೇಜ್ ಅವರ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಅವರಿಗೆ ವಿಶ್ರಾಂತಿ ಅಗತ್ಯ ಎಂದು ಭಾವಿಸಿದ್ದಾರೆ.

ಬೈಕ್ ಅಪಘಾತದಲ್ಲಿ ಸಾಯಿ ಧರಮ್ ತೇಜ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಈ ಅಪಘಾತದಲ್ಲಿ ಅವರು ಬದುಕುಳಿದಿದ್ದು ಒಂದು ಪವಾಡ. ಆ ಸಂದರ್ಭದಲ್ಲಿ ಅವರು ಚಿತ್ರರಂಗದಿಂದ ದೂರ ಇದ್ದರು. ಬಳಿಕ ಅವರು ಕಂಬ್ಯಾಕ್ ಮಾಡಿದ್ದರು. ‘ವಿರೂಪಾಕ್ಷ’ ಸಿನಿಮಾದಲ್ಲಿ ನಟಿಸಿ ಅವರು ಗೆಲುವು ಕಂಡಿದ್ದಾರೆ. ಈ ಸಿನಿಮಾ ನೂರು ಕೋಟಿ ರೂಪಾಯಿ ಕ್ಲಬ್ ಸೇರಿತು. ಈಗ ಅವರು ಮಾವ ಪವನ್ ಕಲ್ಯಾಣ್ ಜೊತೆ ‘ಬ್ರೋ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜುಲೈ 28 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಸಾಯಿ ಧರಮ್ ತೇಜ್ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

‘ನಾನು ನನ್ನ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಲು ಬಯಸುತ್ತೇನೆ. ಇದಕ್ಕಾಗಿ ಆರು ತಿಂಗಳ ಕಾಲ ಚಿತ್ರರಂಗದಿಂದ ಬಿಡುವು ತೆಗೆದುಕೊಳ್ಳುತ್ತೇನೆ. ನನ್ನ ಮುಂದಿನ ಚಿತ್ರಗಳಿಗೆ ನಾನು ನೂರು ಪ್ರತಿಶತ ಶ್ರಮ ಹಾಕಲು ಈ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ಅಭಿಮಾನಿಗಳು ಅರ್ಥಮಾಡಿಕೊಳ್ಳುತ್ತಾರೆ ಎಂಬುದು ನನ್ನ ಭಾವನೆ. ನಾನು ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸುಮಾರು ಆರು ತಿಂಗಳು ಬೇಕಾಗಬಹುದು’ ಎಂದು ಸಾಯಿ ಧರಮ್ ತೇಜ್ ಹೇಳಿದ್ದಾರೆ.

ಇದನ್ನೂ ಓದಿ: ಆಕ್ಸಿಡೆಂಟ್​ ಆದರೂ ಕನಿಕರ ತೋರದ ಪ್ರೇಕ್ಷಕರು; ನಟ ಸಾಯಿ ಧರಮ್​ ತೇಜ್​ಗೆ ನ.26ಕ್ಕೆ ಇನ್ನೊಂದು ಚಾನ್ಸ್​

2021ರ ಸೆಪ್ಟೆಂಬರ್​ 10ರಂದು ನಡೆದ ಬೈಕ್​ ಅಪಘಾತದಲ್ಲಿ ಸಾಯಿ ಧರಮ್​ ತೇಜ್ ತೀವ್ರವಾಗಿ ಗಾಯಗೊಂಡಿದ್ದರು. ಕೆಲ ಸಮಯ ಅವರು ಕೋಮಾದಲ್ಲಿದ್ದರು. ಒಂದು ತಿಂಗಳಿಗೂ ಅಧಿಕ ಕಾಲ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಈ ಘಟನೆಯಿಂದ ಅವರು ಸಂಪೂರ್ಣವಾಗಿ ಚೇತರಿಕೆ ಕಂಡಿಲ್ಲ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು