Sign In

By signing in or creating an account, you agree with Associated Broadcasting Company's Terms & Conditions and Privacy Policy.

Sai Dharam Tej: ಆಕ್ಸಿಡೆಂಟ್​ ಆದರೂ ಕನಿಕರ ತೋರದ ಪ್ರೇಕ್ಷಕರು; ನಟ ಸಾಯಿ ಧರಮ್​ ತೇಜ್​ಗೆ ನ.26ಕ್ಕೆ ಇನ್ನೊಂದು ಚಾನ್ಸ್​

Republic on Zee5: ಸಾಯಿ ಧರಮ್​ ತೇಜ್​ಗೆ ಆಕ್ಸಿಡೆಂಟ್​ ಆದಾಗ ಅವರು ಬೇಗ ಗುಣಮುಖರಾಗಲಿ ಎಂದು ಅನೇಕ ಅಭಿಮಾನಿಗಳು ಪ್ರಾರ್ಥನೆ ಮಾಡಿಕೊಂಡಿದ್ದರು. ಆ ಕಷ್ಟದ ಪರಿಸ್ಥಿತಿಯಲ್ಲೇ ‘ರಿಪಬ್ಲಿಕ್​’ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು.

Sai Dharam Tej: ಆಕ್ಸಿಡೆಂಟ್​ ಆದರೂ ಕನಿಕರ ತೋರದ ಪ್ರೇಕ್ಷಕರು; ನಟ ಸಾಯಿ ಧರಮ್​ ತೇಜ್​ಗೆ ನ.26ಕ್ಕೆ ಇನ್ನೊಂದು ಚಾನ್ಸ್​
ಸಾಯಿ ಧರಮ್​ತೇಜ
Follow us
TV9 Web
| Updated By: ಮದನ್​ ಕುಮಾರ್​

Updated on: Nov 02, 2021 | 1:41 PM

ನಟ ಸಾಯಿ ಧರಮ್​ ತೇಜ್​ ಅವರು ಕಳೆದ ಕೆಲವು ತಿಂಗಳಿಂದ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಸೆಪ್ಟೆಂಬರ್​ 10ರಂದು ಅವರಿಗೆ ಹೈದರಾಬಾದ್​ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಹಲವು ದಿನಗಳ ಕಾಲ ಅವರ ಕೋಮಾ ಸ್ಥಿತಿಯಲ್ಲಿ ಇದ್ದರು. ಸಾಯಿ ಧರಮ್​ ತೇಜ್​ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವಾಗಲೇ ಅವರ ‘ರಿಪಬ್ಲಿಕ್​’ ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಪ್ರೇಕ್ಷಕರಿಂದ ಆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಈಗ ಆ ಚಿತ್ರ ಓಟಿಟಿ ಪ್ಲಾಟ್​ಫಾರ್ಮ್​ಗೆ ಕಾಲಿಡುತ್ತಿದೆ.

ಸಾಯಿ ಧರಮ್​ ತೇಜ್​ಗೆ ಆಕ್ಸಿಡೆಂಟ್​ ಆದಾಗ ಅವರು ಬೇಗ ಗುಣಮುಖರಾಗಲಿ ಎಂದು ಅನೇಕ ಅಭಿಮಾನಿಗಳು ಪ್ರಾರ್ಥನೆ ಮಾಡಿಕೊಂಡಿದ್ದರು. ಆ ಕಷ್ಟದ ಪರಿಸ್ಥಿತಿಯಲ್ಲೇ ‘ರಿಪಬ್ಲಿಕ್​’ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಮಾಪಕರು ತೀರ್ಮಾನಿಸಿದ್ದರು. ಕೋಮದಲ್ಲಿ ಇರುವ ಸಾಯಿ ಧರಮ್​ ತೇಜ್​ ಮೇಲಿನ ಕನಿಕರದ ಕಾರಣದಿಂದಲಾದರೂ ಪ್ರೇಕ್ಷಕರು ಬಂದು ಆ ಸಿನಿಮಾವನ್ನು ನೋಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ನಂಬಿಕೆ ಸುಳ್ಳಾಯಿತು. ಇದು ಸಹಜವಾಗಿಯೇ ಚಿತ್ರತಂಡಕ್ಕೆ ನಿರಾಸೆ ಮೂಡಿಸಿತ್ತು.

ಈಗ ಸಾಯಿ ಧರಮ್​ ತೇಜ್​ ಚೇತರಿಸಿಕೊಂಡಿದ್ದಾರೆ. ಥಿಯೇಟರ್​ನಲ್ಲಿ ತಮ್ಮ ‘ರಿಪಬ್ಲಿಕ್​’ ಸಿನಿಮಾ ಸೋತಿರುವುದಕ್ಕೆ ಅವರಿಗೆ ಬೇಸರ ಆಗಿದೆ. ಈಗ ಓಟಿಟಿಯಲ್ಲಿ ಪ್ರದರ್ಶನ ಕಾಣಲು ಆ ಚಿತ್ರ ಸಜ್ಜಾಗಿದೆ. ನ.26ರಂದು ಜೀ5 ಮೂಲಕ ‘ರಿಪಬ್ಲಿಕ್​’ ಸಿನಿಮಾ ಪ್ರೇಕ್ಷಕರಿಗೆ ಲಭ್ಯವಾಗಲಿದೆ. ಚಿತ್ರಮಂದಿರದಲ್ಲಿ ಸೋತ ಸಿನಿಮಾವನ್ನು ಜನರು ಓಟಿಟಿ ವೇದಿಕೆಯಲ್ಲಾದರೂ ಕೈ ಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳಿದ್ದಾರೆ. ಹಾಗಾಗಿ ಸಾಯಿ ಧರಮ್​ ತೇಜ್​ಗೆ ಇದನ್ನು ಸೆಕೆಂಡ್​ ಚಾನ್ಸ್​ ಎನ್ನಬಹುದು.

ಅ.1ರಂದು ‘ರಿಪಬ್ಲಿಕ್’​ ತೆರೆಕಂಡಿತ್ತು. ಈ ಸಿನಿಮಾದಲ್ಲಿ ಸಾಯಿ ಧರಮ್​ ತೇಜ್​ ಅವರು ಐಎಎಸ್​ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಆಕ್ಸಿಡೆಂಟ್​ ಆಗುವುದಕ್ಕೂ ಎರಡು ದಿನ ಮುನ್ನ ಕರುನಾಡಿನ ದಿವಂಗತ ಐಎಎಸ್​ ಅಧಿಕಾರಿ ಡಿಕೆ ರವಿಗೆ ಒಂದು ವಿಡಿಯೋ ಮೂಲಕ ಸಾಯಿ ಧರಮ್ ತೇಜ್​ ಅವರು ನಮನ ಸಲ್ಲಿಸಿದ್ದರು. ‘ಥ್ಯಾಂಕ್​ ಯೂ ಕಲೆಕ್ಟರ್​ ಡಿಕೆ ರವಿ’ ಎಂಬ ಕ್ಯಾಪ್ಷನ್​ ಜೊತೆ ಆ ವಿಡಿಯೋವನ್ನು ಸಾಯಿ ಧರಮ್​ ತೇಜ್​ ಶೇರ್​ ಮಾಡಿಕೊಂಡಿದ್ದರು. ಅದರಲ್ಲಿ ಡಿಕೆ ರವಿ ಅವರ ಅಪರೂಪದ ಮಾತುಗಳು ಇವೆ. ಅವರ ದಿಟ್ಟತನ ಮತ್ತು ಸಾಧನೆಗಳ ಬಗ್ಗೆ ಮಾಹಿತಿ ಇದೆ. ಡಿವಿ ರವಿ ಅವರನ್ನು ಧೀರ ಯೋಧ ಎಂದು ಸಾಯಿ ಧರಮ್​ ತೇಜ್ ಬಣ್ಣಿಸಿದ್ದರು. ಆ ಮೂಲಕ ಅವರು ಕರುನಾಡಿನ ದಕ್ಷ ಅಧಿಕಾರಿಗೆ ನಮನ ಸಲ್ಲಿಸಿದ್ದರು. ಅದಾಗಿ ಎರಡು ದಿನ ಕಳೆಯುವುದರೊಳಗೆ ಸಾಯಿ ಧರಮ್​ ತೇಜ್​ಗೆ ರಸ್ತೆ ಅಪಘಾತ ಆಗಿತ್ತು.

ಇದನ್ನೂ ಓದಿ:

ಪುನೀತ್​ ಬಗ್ಗೆ ಅವಹೇಳನಕಾರಿ ಪೋಸ್ಟ್​ ಮಾಡಿದ್ದ ವ್ಯಕ್ತಿ ಅರೆಸ್ಟ್​; ಸೈಬರ್​ ಪೊಲೀಸರ ಬಲೆಗೆ ಬಿದ್ದ ಕಿಡಿಗೇಡಿ

ಪುನೀತ್​ ಅವರ 2 ಕಣ್ಣನ್ನು 4 ಜನರಿಗೆ ಜೋಡಿಸಿದ್ದು ಹೇಗೆ? ವೈದ್ಯರು ತೆರೆದಿಟ್ಟ ಅಚ್ಚರಿ ಮಾಹಿತಿ ಇಲ್ಲಿದೆ

ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಸಮರಾಭ್ಯಾಸ ಶುರು ಮಾಡಿದ ಆರ್​ಸಿಬಿ; ವಿಡಿಯೋ ನೋಡಿ
ಮಂತ್ರಿಗಳಿದ್ದಾರೆ, ಅವರಿಗೆ ಪ್ರಶ್ನೆ ಕೇಳಿ ಎಂದ ಡೆಪ್ಯುಟಿ ಸ್ಪೀಕರ್ ಲಮಾಣಿ
ಮಂತ್ರಿಗಳಿದ್ದಾರೆ, ಅವರಿಗೆ ಪ್ರಶ್ನೆ ಕೇಳಿ ಎಂದ ಡೆಪ್ಯುಟಿ ಸ್ಪೀಕರ್ ಲಮಾಣಿ
ಶಾಸಕ ಈಗ ಬಂದು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂದ ಸ್ಪೀಕರ್
ಶಾಸಕ ಈಗ ಬಂದು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂದ ಸ್ಪೀಕರ್