ಸಾಯಿ ಧರಮ್ ತೇಜ್​ಗೆ ಮತ್ತೆ ಸಂಕಷ್ಟ; ಹೈದರಾಬಾದ್​ ಪೊಲೀಸರಿಂದ ಬಂತು ನೋಟಿಸ್​

ಸಾಯಿ ಧರಮ್ ತೇಜ್​ಗೆ ಮತ್ತೆ ಸಂಕಷ್ಟ; ಹೈದರಾಬಾದ್​ ಪೊಲೀಸರಿಂದ ಬಂತು ನೋಟಿಸ್​
ಸಾಯಿ ಧರಮ್​ತೇಜ್​

ಸ್ನೇಹಿತರಾದ ಸಂದೀಪ್​ ಕಿಷನ್​, ವೈವಾ ಹರ್ಷಾ ಎಂಬುವರೊಂದಿಗೆ​ ಸಾಯಿ ಧರಮ್​ ತೇಜ್ ಬೈಕ್​ ರೈಡಿಂಗ್​ಗೆ ತೆರಳಿದ್ದರು. ಸ್ಪೋರ್ಟ್ಸ್ ಬೈಕ್​ನಲ್ಲಿ ಬರುವಾಗ ಹೈದರಾಬಾದ್‌ನ ಮಾದಾಪುರ ಕೇಬಲ್ ಬ್ರಿಡ್ಜ್​​ ಬಳಿ ಅಪಘಾತ ಸಂಭವಿಸಿತ್ತು.

TV9kannada Web Team

| Edited By: Rajesh Duggumane

Dec 29, 2021 | 6:00 AM

ನಟ ಸಾಯಿ ಧರಮ್​ ತೇಜ್​​ ಬೈಕ್​ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಅತಿವೇಗ, ನಿರ್ಲಕ್ಷ್ಯ ಆರೋಪದಡಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದರು. ಸೆಪ್ಟೆಂಬರ್​ 10ರಂದು ನಡೆದಿದ್ದ ಈ ಅಪಘಾತದಲ್ಲಿ ಸಾಯಿ ಧರಮ್​ ತೇಜ್​ ಅವರು ತೀವ್ರವಾಗಿ ಗಾಯಗೊಂಡಿದ್ದರು. ಒಂದು ತಿಂಗಳಿಗೂ ಅಧಿಕ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರು ಮರಳಿದ್ದಾರೆ. ಈಗ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಪೊಲೀಸ್​ ಠಾಣೆಯಿಂದ ಅವರಿಗೆ ನೋಟಿಸ್ ಬಂದಿದೆ.

ನಟ ಸಾಯಿ ಧರಮ್​ ತೇಜ್ ಸಾಮಾನ್ಯವಾಗಿ ಬೈಕ್​ ರೈಡಿಂಗ್​ಗೆ ತೆರಳುತ್ತಿದ್ದರು. ಅದೇ ರೀತಿ ಸ್ನೇಹಿತರಾದ ಸಂದೀಪ್​ ಕಿಷನ್​, ವೈವಾ ಹರ್ಷಾ ಎಂಬುವರೊಂದಿಗೆ​ ಅವರು ಬೈಕ್​ ರೈಡಿಂಗ್​ಗೆ ತೆರಳಿದ್ದರು. ಸ್ಪೋರ್ಟ್ಸ್ ಬೈಕ್​ನಲ್ಲಿ ಬರುವಾಗ ಹೈದರಾಬಾದ್‌ನ ಮಾದಾಪುರ ಕೇಬಲ್ ಬ್ರಿಡ್ಜ್​​ ಬಳಿ ಅಪಘಾತ ಸಂಭವಿಸಿತ್ತು. ರಸ್ತೆ ಬದಿ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಹೀಗಾಗಿ, ಸ್ಥಳದಲ್ಲಿ ಬಿದ್ದಿದ್ದ ಮರಳಿನಿಂದ ಬೈಕ್​ ಸ್ಕಿಡ್​ ಆಗಿ ಅಪಘಾತ ಸಂಭವಿಸಿದೆ ಎನ್ನಲಾಗಿತ್ತು.

ಸಾಯಿ ಧರಮ್​ ತೇಜ್​ ಹೆಲ್ಮೆಟ್ ಧರಿಸಿದ್ದರು ಮತ್ತು ಆಲ್ಕೊಹಾಲ್ ಸೇವನೆ ಮಾಡಿರಲಿಲ್ಲ. ಆದರೆ, ಅವರ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿತ್ತು. ನಟ ಸಾಯಿ ಧರಮ್​ತೇಜ್​​ ಬೈಕ್​ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈದರಾಬಾದ್​ನಲ್ಲಿ ಕೇಸ್ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ಸಾಯಿ ಧರಮ್​ ತೇಜ್​ ಅವರು ಡ್ರೈವಿಂಗ್​ ಲೈಸೆನ್ಸ್​, ಆರ್​ಸಿ, ಇನ್ಸೂರೆನ್ಸ್​ ಮತ್ತು ಪೊಲ್ಯೂಷನ್​ ಕಾಗದಪತ್ರಗಳನ್ನು ನೀಡಬೇಕಿತ್ತು. ಆದರೆ, ಇದನ್ನು ಅವರು ನೀಡಿಲ್ಲ. ಈ ಬಗ್ಗೆ ಅವರು ಯಾವುದೇ ಮಾಹಿತಿ ಕೂಡ ನೀಡಿಲ್ಲ. ಹೀಗಾಗಿ, ಅವರ ಮೇಲೆ ಕೇಸ್​ ದಾಖಲಾಗಿದೆ. ‘ಇಲ್ಲಿಯವರೆಗೆ ನಾವು ನಟನಿಂದ ಯಾವುದೇ ಪ್ರತಿಕ್ರಿಯೆಯನ್ನು ಸ್ವೀಕರಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ಬರದಿದ್ದರೆ ಚಾರ್ಜ್ ಶೀಟ್ ಸಲ್ಲಿಸಲಾಗುವುದು’ ಎಂದು ಕಮಿಷನರ್ ಸ್ಟೀಫನ್ ರವಿಂದ ಹೇಳಿದ್ದಾರೆ.

ಸಾಯಿ ಧರಮ್​ ತೇಜ್​ ಸ್ಥಿತಿ ಗಂಭೀರವಾಗಿತ್ತು. ಅವರು ಗುಣಮುಖರಾದ ನಂತರ ಟ್ವೀಟ್​ ಮಾಡಿದ್ದ ಚಿರಂಜೀವಿ, ‘ಈ ಬಾರಿ ವಿಜಯ ದಶಮಿಯ ವಿಶೇಷ ಏನೆಂದರೆ, ಸಾಯಿ ಧರಮ್​ ತೇಜ್​ ಸಂಪೂರ್ಣ ಗುಣಮುಖರಾಗಿ ಮನೆಗೆ ಬರುತ್ತಿದ್ದಾರೆ. ಭೀಕರ ಬೈಕ್​ ಅಪಘಾತದಲ್ಲಿ ಅವರು ಬದುಕಿ ಬಂದಿದ್ದಾರೆ. ಇದು ನಮ್ಮೆಲ್ಲರಿಗೂ ಖುಷಿ ನೀಡಿದೆ. ಅವರಿಗೆ ಇದು ಪುನರ್ಜನ್ಮ’ ಎಂದು ಹೇಳಿದ್ದರು.

ಇದನ್ನೂ ಓದಿ: ಆ್ಯಕ್ಸಿಡೆಂಟ್​ ಬಳಿಕ ಥಿಯೇಟರ್​ನಲ್ಲಿ ಸೋತು ಓಟಿಟಿಯಲ್ಲಿ ದಾಖಲೆ ಮಾಡಿದ ಸಾಯಿ ಧರಮ್​ ತೇಜ್​ ಚಿತ್ರ ‘ರಿಪಬ್ಲಿಕ್​’

Follow us on

Related Stories

Most Read Stories

Click on your DTH Provider to Add TV9 Kannada