Health risks of Sitting: ಕಛೇರಿಯಲ್ಲಿ ಇಡೀ ದಿನ ಕುಳಿತುಕೊಂಡೆ ಇರುತ್ತೀರಾ? ಹಾಗಿದ್ದರೆ ಅಪಾಯವನ್ನು ತಿಳಿದುಕೊಳ್ಳಿ

ನಮ್ಮಲ್ಲಿ ಮುಕ್ಕಾಲು ಭಾಗದಷ್ಟು ಜನರು ಇಂದು ಕಚೇರಿಗಳಲ್ಲಿ ಕೆಲಸ ಮಾಡುತ್ತಾರೆ, ದಿನದ ಬಹುಪಾಲು ಕುಳಿತುಕೊಂಡೇ ಇರುತ್ತೇವೆ. ಈ ಜೀವನಶೈಲಿಯ ಬದಲಾವಣೆಯು ಬೆನ್ನುನೋವಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ.

Health risks of Sitting: ಕಛೇರಿಯಲ್ಲಿ ಇಡೀ ದಿನ ಕುಳಿತುಕೊಂಡೆ ಇರುತ್ತೀರಾ? ಹಾಗಿದ್ದರೆ ಅಪಾಯವನ್ನು ತಿಳಿದುಕೊಳ್ಳಿ
Health risks of sittingImage Credit source: GOQii
Follow us
ಅಕ್ಷತಾ ವರ್ಕಾಡಿ
|

Updated on:Jul 16, 2023 | 6:20 PM

2017 ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ನಾವು ನಮ್ಮ ಹೆಚ್ಚಿನ ಸಮಯವನ್ನು ಕೆಲಸದ ಕಛೇರಿಯಲ್ಲಿ ಅಥವಾ ಮನೆಯಲ್ಲಿ ದೀರ್ಘಸಮಯದವರೆಗೆ ಕುಳಿತುಕೊಳ್ಳುವುದು ನಮ್ಮ ಆರೋಗ್ಯಕ್ಕೆ ಹಾನಿ ಮಾಡುವುದರ ಜೊತೆಗೆ ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಬಹಿರಂಗಪಡಿಸಿದೆ. ಜೀ ಇಂಗ್ಲಿಷ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಬ್ರಿಟಿಷ್ ಸೇಫ್ಟಿ ಕೌನ್ಸಿಲ್ ಇಂಡಿಯಾದ ಮುಖ್ಯಸ್ಥರಾದ ಸುರೇಶ್ ತನ್ವಾರ್ ದೀರ್ಘಕಾಲದ ವರೆಗೆ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ಆರೋಗ್ಯದ ಮೇಲೆ ಯಾವ ರೀತಿ ಅಪಾಯವನ್ನುಂಟು ಮಾಡುತ್ತದೆ ಎಂಬುದನ್ನು ವಿವರಿಸಿದ್ದಾರೆ.

ನಮ್ಮಲ್ಲಿ ಮುಕ್ಕಾಲು ಭಾಗದಷ್ಟು ಜನರು ಇಂದು ಕಚೇರಿಗಳಲ್ಲಿ ಕೆಲಸ ಮಾಡುತ್ತಾರೆ, ದಿನದ ಬಹುಪಾಲು ಕುಳಿತುಕೊಂಡೇ ಇರುತ್ತೇವೆ. ಈ ಜೀವನಶೈಲಿಯ ಬದಲಾವಣೆಯು ಬೆನ್ನುನೋವಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ.

ಇದನ್ನೂ ಓದಿ: ಪ್ಲಾಸ್ಟಿಕ್ ಸರ್ಜರಿಯ ಸಂಭವನೀಯ ಅಪಾಯ ಮತ್ತು ತೊಡಕುಗಳು ಏನೆಂದು ತಿಳಿಯಿರಿ

ದೀರ್ಘ ಗಂಟೆಗಳ ಕಾಲ ಕುಳಿತುಕೊಳ್ಳುವ ಅಪಾಯಗಳು:

30 ನಿಮಿಷದಿಂದ 12 ಗಂಟೆಗಳವರೆಗೆ ದೀರ್ಘಾವಧಿಯ ಕುಳಿತುಕೊಳ್ಳುವುದು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಇಂದು ಅನೇಕ ಕೆಲಸಗಳಿಗೆ ಕುಳಿತುಕೊಳ್ಳುವ ಅಗತ್ಯವಿದ್ದರೂ, ಜಡ ಜೀವನಶೈಲಿಯನ್ನು ಸರಿದೂಗಿಸಲು ನಿಯಮಿತ ವ್ಯಾಯಾಮಕ್ಕೆ ಆದ್ಯತೆ ನೀಡುವುದು ಬಹಳ ಮುಖ್ಯ. ಯಾಕೆಂದರೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಕೊಬ್ಬು ನಿಧಾನವಾಗಿ ಕರಗುತ್ತದೆ ಮತ್ತು ಟೈಪ್ 2 ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:19 pm, Sun, 16 July 23