ಧಾರವಾಡ-ಬೆಂಗಳೂರು ಒಂದೇ ಭಾರತ್ ರೈಲಿಗೆ ಕಲ್ಲೇಟು: ಇಬ್ಬರು ಬಾಲಕರು ಪೊಲೀಸ್ ವಶಕ್ಕೆ

ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ಕಲ್ಲು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಬಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಧಾರವಾಡ-ಬೆಂಗಳೂರು ಒಂದೇ ಭಾರತ್ ರೈಲಿಗೆ ಕಲ್ಲೇಟು: ಇಬ್ಬರು ಬಾಲಕರು ಪೊಲೀಸ್ ವಶಕ್ಕೆ
ಗ್ಲಾಸ್ ಬಿರುಕು (ಎಡಚಿತ್ರ) ವಂದೇ ಭಾರತ್​ ರೈಲು (ಬಲಚಿತ್ರ)
Edited By:

Updated on: Jul 05, 2023 | 10:31 AM

ದಾವಣಗೆರೆ: ನೂತನ ಧಾರವಾಡ-ಬೆಂಗಳೂರು(Bengaluru) ಒಂದೇ ಭಾರತ್  ಎಕ್ಸ್​ಪ್ರೆಸ್​ ರೈಲಿಗೆ((Vande Bharat Express Train) )ಕಲ್ಲು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಮಕ್ಕಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ದಾವಣಗೆರೆಯ (Davanagere) ಎಸ್​ಎಸ್​ ನಗರ, ಹಾಗೂ ಭಾಷಾ ನಗರದ 12 ವರ್ಷದ ಇಬ್ಬರು ಬಾಲಕರನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದು, ಸದ್ಯ ಇಬ್ಬರು ಬಾಲಕರನ್ನು ಚಿತ್ರದುರ್ಗದ ಬಾಲಮಂದಿರದಲ್ಲಿ ಇಡಲಾಗಿದೆ.’

ಇದನ್ನೂ ಓದಿ: Vande Bharat Express: ದಾವಣಗೆರೆಯಲ್ಲಿ ಧಾರವಾಡ-ಬೆಂಗಳೂರು ವಂದೇ ಭಾರತ್​ ರೈಲಿಗೆ ಕಲ್ಲು

ಕಳೆದ ಶನಿವಾರ ಅಂದರೆ (ಜುಲೈ 01) ಮಧ್ಯಾಹ್ನ 3-30ಕ್ಕೆ ಧಾರವಾಡದಿಂದ ದಾವಣಗೆರೆಗೆ ಸಂಚರಿಸುತ್ತಿದ್ದ ವೇಳೆ ರೈಲಿಗೆ ಕಲ್ಲು ಎಸೆಯಲಾಗಿತ್ತು ಪರಿಣಾಮ ರೈಲಿನ ಕಿಟಕಿ ಗಾಜಿಗೆ ಹಾನಿಯಾಗಿಯತ್ತು. ಅದೃಷ್ಟವಶಾತ್ ಯಾವುದೇ ರೈಲಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿರಲಿಲ್ಲ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜೂನ್ 27ರಂದು ದೇಶಾದ್ಯಂತ ಒಟ್ಟು 5 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಒಂದೇ ಸಮಯದಲ್ಲಿ ಹಸಿರು ನಿಶಾನೆ ತೋರಿದ್ದರು. ಇದರಲ್ಲಿ ಧಾರವಾಡ-ಬೆಂಗಳೂರು ರೈಲು ಸಹ ಒಂದಾಗಿತ್ತು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
Loading...
Unable to load recommendations.
Follow Us