ದಾವಣಗೆರೆ: ಒಬ್ಬ ತಹಶೀಲ್ದಾರ್ ತೆಗೆದುಕೊಂಡ ಗಟ್ಟಿ ನಿರ್ಧಾರದಿಂದ ಕೋಟ್ಯಂತರ ರೂ ಬೆಲೆಬಾಳುವ ಜಾಗ ಮತ್ತೆ ಶಾಲೆಗೆ ದಕ್ಕಿತು!

| Updated By: ಸಾಧು ಶ್ರೀನಾಥ್​

Updated on: Dec 05, 2022 | 2:32 PM

ಕೋಟ್ಯಂತರ ರೂ ಬೆಲೆಬಾಳುವ ಸರ್ಕಾರಿ ಶಾಲೆಯ ಜಮೀನನ್ನು ಕಬಳಿಸಿ ಮನೆಗಳನ್ನ ಕಟ್ಟಿಕೊಂಡಿದ್ದರು. ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಕೇಳಲು ಹೋದವರಿಗೆ ಬೆದರಿಕೆ ಹಾಕಿದ್ದರು. ಆದರೆ ಜಗಳೂರು ತಹಶೀಲ್ದಾರ್ ಸಂತೋಷ್ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ.

ದಾವಣಗೆರೆ: ಒಬ್ಬ ತಹಶೀಲ್ದಾರ್ ತೆಗೆದುಕೊಂಡ ಗಟ್ಟಿ ನಿರ್ಧಾರದಿಂದ ಕೋಟ್ಯಂತರ ರೂ ಬೆಲೆಬಾಳುವ ಜಾಗ ಮತ್ತೆ ಶಾಲೆಗೆ ದಕ್ಕಿತು!
ದಾವಣಗೆರೆ: ತಹಶೀಲ್ದಾರ್ ತೆಗೆದುಕೊಂಡ ಗಟ್ಟಿ ನಿರ್ಧಾರದಿಂದ ಕೋಟ್ಯಂತರ ರೂ ಬೆಲೆಬಾಳುವ ಜಾಗ ಮತ್ತೆ ಶಾಲೆಗೆ ದಕ್ಕಿತು!
Follow us on

ಅದು ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಸ್ಥಳ. ಕಾರಣ ಅದು ಗ್ರಾಮಕ್ಕೆ ಹೊಂದಿಕೊಂಡಿದೆ. ಸೈಟ್ ಮಾಡಿ ಮಾರಾಟ ಮಾಡಿದರೆ ಕೈ ತುಂಬಾ ಹಣ ಹಣವೋ! ಇಂತಹ ಜಮೀನಿನನ್ನು ಇಲ್ಲಿದ್ದ 14 ಜನರು ಮೂರು ದಶಕಗಳ ಹಿಂದೆಯೇ ಕಬಳಿಸಿದ್ದರು. ಮೇಲಾಗಿ ಲಕ್ಷ ಲಕ್ಷ ಖರ್ಚು ಮಾಡಿ ಬಿಲ್ಡಿಂಗ್ ಸಹ ಕಟ್ಟಿದ್ದರು. ನೋಡಿದ್ರೆ ಅದು ಶಾಲೆಯ ಜಾಗ (Village School). ಶಾಲಾ ಮಕ್ಕಳು ಆಟವಾಡುವ ಸ್ಥಳದಲ್ಲಿ ತಂತಿ ಬೇಲಿ ಹಾಕಿ ಅಟ್ಟಹಾಸ ಮೆರೆದವರಿಗೆ ಅಧಿಕಾರಿಗಳು ಮಾತ್ರ ಅಚ್ಚರಿಯ ರೀತಿಯಲ್ಲಿ ಬಿಸಿ ಮುಟ್ಟಿಸಿದ್ದಾದರು. ಇಲ್ಲಿದೆ ನೋಡಿ ಆ 14 ಜನರ ಅಟ್ಟಹಾಸ ಸ್ಟೋರಿ.

ಶಾಲಾ ಅವರಣದಲ್ಲಿ ಹತ್ತಾರು ಮಂದಿ ಪೊಲೀಸ್ ಸಿಬ್ಬಂದಿ. ಶಾಲೆಯ ಪಕ್ಕದಲ್ಲಿ ಜೆಸಿಬಿ ಯಂತ್ರಗಳ ಘರ್ಜನೆ. ಇದನ್ನ ನೋಡಲು ಸೇರಿದ್ದ ನೂರಾರು ಜನ ಗ್ರಾಮಸ್ಥರು. ನಡೆಯುತ್ತಿರುವ ಕಾರ್ಯಾಚರಣೆಗೆ ಅಡ್ಡಿಪಡಿಸಿ ಆಕ್ರೋಶ ಪಡಿಸುತ್ತಿರುವ ಕೆಲವರು. ಹೀಗೆ ಇವರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಪೊಲೀಸರು ತಮ್ಮ ಜೀಪ್ ನಲ್ಲಿ ಅವರನ್ನೆಲ್ಲ ಕುಡ್ರಿಸಿಕೊಂಡರು.

ನಿಮ್ಮ ಬಳಿ ದಾಖಲೆ ಇದ್ರೆ ಕೊಡಿ ಎಂದು ಕೇಳಿದ್ರೆ ಗ್ರಾಮದಲ್ಲಿದ್ದ ಮನೆಯ ಸರ್ವೇ ನಂಬರ್ ಈ ಸ್ಥಳಕ್ಕೆ ತೋರಿಸಿ ಚಾಲಾಕಿತನಕ್ಕೆ ಮುಂದಾದ ಪ್ರಕರಣ ಬೆಳಕಿಗೆ. ನಾವು ಹೇಳುತ್ತಿರುವುದು ದಾವಣಗೆರೆ (Davanagere) ಜಿಲ್ಲೆಯ ಜಗಳೂರು ತಾಲೂಕಿನ ಉಜ್ಜಪ್ಪ ಒಡೆರಹಳ್ಳಿ ಗ್ರಾಮದ ಬಗ್ಗೆ. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಾಲ್ಕು ಎಕರೆ 20 ಗುಂಟೆ ಜಮೀನು ಇದೆ. ಅದನ್ನ ಗ್ರಾಮದ 14 ಜನ ಸೇರಿ ಕಬಳಿಸಿಕೊಂಡಿದ್ದರು. ಈ ವಿಚಾರ ಗ್ರಾಮಸ್ಥರಿಗೆ ತಿಳಿದಿತ್ತು. ಜಗಳೂರು ತಹಶೀಲ್ದಾರ ಸಂತೋಷ ಅವರಿಗೆ ಸರ್ಕಾರ ಭೂಮಿ ಕಬಳಿಸಿದ ಬಗ್ಗೆ ತಿಳಿದು ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ ಮಾಡಿಯೇ ಬಿಟ್ಟರು. ಇದರಿಂದ ಗ್ರಾಮದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಆದ್ರೆ ತಹಶೀಲ್ದಾರ ಅವರು ತಾವು ತೆಗೆದುಕೊಂಡು ದಿಟ್ಟ ನಿರ್ಧಾರದಿಂದ ಹಿಂದೆ ಸರಿಯಲೇ ಇಲ್ಲಾ.

Also Read: Chikkaballapur: ಸದ್ಗುರು ಜಗ್ಗಿ ವಾಸುದೇವ್ ಇಶಾ ಫೌಂಡೇಶನ್ ಜಮೀನಿಗೆ ದಾರಿ ಯಾವುದಯ್ಯಾ? ಜಮೀನಿಗೆ ಹೋಗಲು ಖಾಸಗಿ ವ್ಯಕ್ತಿ ದಾರಿ ಬಿಡ್ತಿಲ್ಲವಂತೆ!

ಹೀಗೆ ಸರ್ಕಾರಿ ಶಾಲೆಯ ಜಮೀನು ಕಬಳಿಸಿ ಮನೆಗಳನ್ನ ಕಟ್ಟಿಕೊಂಡಿದ್ದರು. ಶಾಲೆಗೆ ಹೊಂದಿಕೊಂಡಿದ್ದ ಕೆಲ ಕಟ್ಟಡಗಳನ್ನ ಕೆಡವಿ ಹಾಕಿದರು. ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಕೇಳಲು ಹೋದವರಿಗೆ ಬೆದರಿಕೆ ಹಾಕುವುದು. ಅಷ್ಟೇ ಅಲ್ಲ… ಶಾಲಾ ಮಕ್ಕಳು ಆಟವಾಡುವ ಸ್ಥಳದಲ್ಲಿ ತಂತಿ ಬೇಲಿ ಹಾಕಿ, ಅದರಲ್ಲಿ ಮೆಕ್ಕೆಜೋಳ ಹಾಕಿದ್ದರು ಕೆಲವರು. ಇದನ್ನೆಲ್ಲಾ ನಾಲ್ಕು ಜೆಸಿಬಿಗಳಳಿಂದ ಸ್ವಚ್ಚ ಮಾಡಿ ಕಟ್ಟಡಗಳನ್ನ ತೆರವು ಗೊಳಿಸಿದ್ರು. ಇದಕ್ಕೆ ಗ್ರಾಮ ಪಂಚಾಯತ್ ಸಹ ಸಹಕಾರ ನೀಡಿತ್ತು.

ನಾಲ್ಕು ದಶಗಳ ಹಿಂದೆ ಗ್ರಾಮದ ಪ್ರಮುಖರೊಬ್ಬರು ಈ ಜಮೀನು ಶಾಲೆಗಾಗಿ ದಾನ (Donation) ನೀಡಿದ್ದರು. ಜಮೀನಿನಲ್ಲಿ ಒಂದು ಬಾವಿ ಸಹ ಇತ್ತು. ಈ ಬಾವಿಯನ್ನು ಮಕ್ಕಳಿಗೆ ನೀರು ಬೇಕಾಗುತ್ತದೆ ಎಂಬ ಉದ್ದೇಶದಿಂದ ಮಾಡಲಾಗಿತ್ತು. ಆದ್ರೆ ಇಲ್ಲಿ ದಿಢೀರನೆ ಉದ್ಭವಿಸಿದ 14 ಜನರು ಸರ್ಕಾರಕ್ಕೆ ದಾನ ನೀಡಿದ್ದ ಭೂಮಿಯನ್ನ ಕಬಳಿಸಿದ್ದರು. ತಹಶೀಲ್ದಾರ ಸಂತೋಷ ಹಾಗೂ ಇಓ ಚಂದ್ರಶೇಖರ ಸೇರಿದಂತೆ ಹಿರಿಯ ಅಧಿಕಾರಿಗಳು ಪೊಲೀಸರ ಸಹಾಯದಿಂದ ಸರ್ಕಾರಿ ಭೂಮಿ ಉಳಿಸಿ ಶಾಲೆಗೆ ಬಿಡಿಸಿಕೊಟ್ಟು ಮಕ್ಕಳು ಆಟವಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. (ವರದಿ: ಬಸವರಾಜ್ ದೊಡ್ಮನಿ, ಟಿವಿ 9, ದಾವಣಗೆರೆ)