ದಾವಣಗೆರೆಯಲ್ಲಿ ವೀರಭದ್ರೇಶ್ವರನ ಅದ್ಧೂರಿ ರಥೋತ್ಸವದಲ್ಲಿ ಹರಿದು ಬಂದ ಭಕ್ತ ಸಾಗರ, ಪಾದಯಾತ್ರೆ ಮೂಲಕ ಹರಕೆ ತೀರಿಸಿದ ಭಕ್ತಗಣ

| Updated By: ಆಯೇಷಾ ಬಾನು

Updated on: Mar 20, 2022 | 7:09 PM

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿರೋ ವೀರಭದ್ರೇಶ್ವರ ಪುಣ್ಯಕ್ಷೇತ್ರಕ್ಕೆ ನಿನ್ನೆ ಭಕ್ತಸಾಗರವೇ ಹರಿದು ಬಂದಿತ್ತು. ಪ್ರತೀ ವರ್ಷ ಹೋಳಿ ಹುಣ್ಣಿಮೆ ವೇಳೆ ರಥೋತ್ಸವ ನಡೆಯಲಿದ್ದು, ಅದ್ರಂತೆ ಈ ವರ್ಷವೂ ಅದ್ಧೂರಿಯಾಗಿ ಜರುಗಿತು. ಅದ್ರಲ್ಲೂ ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದ ಜಾತ್ರೆಗೆ ಬ್ರೇಕ್‌ ಬಿದ್ದಿತ್ತು.

ದಾವಣಗೆರೆಯಲ್ಲಿ ವೀರಭದ್ರೇಶ್ವರನ ಅದ್ಧೂರಿ ರಥೋತ್ಸವದಲ್ಲಿ ಹರಿದು ಬಂದ ಭಕ್ತ ಸಾಗರ, ಪಾದಯಾತ್ರೆ ಮೂಲಕ ಹರಕೆ ತೀರಿಸಿದ ಭಕ್ತಗಣ
ದಾವಣಗೆರೆಯಲ್ಲಿ ವೀರಭದ್ರೇಶ್ವರನ ಅದ್ಧೂರಿ ರಥೋತ್ಸವದಲ್ಲಿ ಹರಿದು ಬಂದ ಭಕ್ತ ಸಾಗರ
Follow us on

ದಾವಣಗೆರೆ: ಬೇಡಿದ ವರವ ಕೊಡವ, ಭಕ್ತರ ಇಷ್ಟಾರ್ಥ ಈಡೇರಿಸೋ ಕೊಡದಗುಡ್ಡದ ವೀರಭದ್ರೇಶ್ವರ ರಥೋತ್ಸವ ಮಾರ್ಚ್ 19ರಂದು ಅದ್ಧೂರಿಯಾಗಿ ನೆರವೇರಿದೆ. ಈ ಸುಕ್ಷೇತ್ರದಲ್ಲಿ ಪ್ರತಿವರ್ಷ ಹೋಳಿ ಹುಣ್ಣಿಮೆ ವೇಳೆ ಜಾತ್ರೆ ನಡೆಯುತ್ತೆ. ಅದೇ ರೀತಿ ಈ ಬಾರಿಯೂ ಅದ್ಧೂರಿ ಜಾತ್ರೆ ನಡೆದಿದ್ದು ಭಕ್ತಸಾಗರವೇ ಹರಿದು ಬಂದಿತ್ತು.

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿರೋ ವೀರಭದ್ರೇಶ್ವರ ಪುಣ್ಯಕ್ಷೇತ್ರಕ್ಕೆ ನಿನ್ನೆ ಭಕ್ತಸಾಗರವೇ ಹರಿದು ಬಂದಿತ್ತು. ಪ್ರತೀ ವರ್ಷ ಹೋಳಿ ಹುಣ್ಣಿಮೆ ವೇಳೆ ರಥೋತ್ಸವ ನಡೆಯಲಿದ್ದು, ಅದ್ರಂತೆ ಈ ವರ್ಷವೂ ಅದ್ಧೂರಿಯಾಗಿ ಜರುಗಿತು. ಅದ್ರಲ್ಲೂ ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದ ಜಾತ್ರೆಗೆ ಬ್ರೇಕ್‌ ಬಿದ್ದಿತ್ತು. ಆದ್ರೆ ಈ ಬಾರಿ ಎಲ್ಲಾ ಅಡೆತಡೆ ನಿವಾರಣೆಯಾಗಿದ್ರಿಂದ ಲಕ್ಷಾಂತರ ಭಕ್ತರ ಸಂಗಮವಾಗಿತ್ತು. ದಾವಣಗೆರೆ, ವಿಜಯನಗರ, ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ಭಕ್ತರು ಆಗಮಿಸಿದ್ರು.

ದಾವಣಗೆರೆಯಲ್ಲಿ ವೀರಭದ್ರೇಶ್ವರನ ಅದ್ಧೂರಿ ರಥೋತ್ಸವದಲ್ಲಿ ಹರಿದು ಬಂದ ಭಕ್ತ ಸಾಗರ

ಇನ್ನು ಕೊಟ್ಟೂರಿನಲ್ಲಿ ನೆಲಸಿದ್ದ ವೀರಭದ್ರಸ್ವಾಮಿ ಅಲ್ಲಿ ಕೊಟ್ಟೂರೇಶ್ವರಿಗೆ ದೇಗುಲ ಬಿಟ್ಟುಕೊಟ್ಟು ಇಲ್ಲಿಗೆ ಬಂದ್ರು ಅನ್ನೋ ಪುರಾಣ ಕತೆ ಇದೆ. ಇಲ್ಲಿ ಬೆಟ್ಟದ ಮೇಲೆ ವೀರಭದ್ರಸ್ವಾಮಿ ನೆಲಸಿದ್ರೆ, ಬೆಟ್ಟದ ಕೆಳಗೆ ರಥೋತ್ಸವ ನಡೆಯುತ್ತೆ. ಇಲ್ಲೂ ಕೂಡಾ ಮಹಿಮೆ ತೋರಿಸುತ್ತಾ ಮಹಾಮಹಿಮನಾಗಿರೋ ವೀರಭದ್ರಸ್ವಾಮಿ, ಭಕ್ತರ ಇಷ್ಟಾರ್ಥಗಳನ್ನ ಈಡೇರಿಸುತ್ತಾನೆ. ಹೀಗಾಗಿಯೇ ಮದುವೆಯಾಗದವರು, ಮಕ್ಕಳಾಗದವರು ಪಾದಯಾತ್ರೆ ಮೂಲಕ ಬಂದು ಬೇಡಿಕೊಳ್ತಾರೆ. ತಮ್ಮ ಭಕ್ತಿಗೆ ದೇವರು ಒಲಿಯುತ್ತಿದ್ದಂತೆ, ಹರಕೆ ತೀರಿಸುತ್ತಾರೆ.

ಒಟ್ನಲ್ಲಿ ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದ ಅದ್ಧೂರಿ ರಥೋತ್ಸವಕ್ಕೆ ಬ್ರೇಕ್‌ ಬಿದ್ದಿತ್ತು. ಆದ್ರೆ ಈ ಬಾರಿ ಅವಕಾಶ ಸಿಗ್ತಿದ್ದಂತೆ ಭಕ್ತಸಾಗರವೇ ಅರಿದು ಬಂದು ವೀರಭದ್ರೇಶ್ವರ ರಥೋತ್ಸವದ ದರ್ಶನ ಪಡೆದು ಧನ್ಯರಾದ್ರು.

ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅಂದು ಪರ್ಪಲ್ ಕ್ಯಾಪ್ ವಿನ್ನರ್, ಇಂದು ನೆಟ್ ಬೌಲರ್..! 

ಬೆಂಗಳೂರಿನ ಪೀಣ್ಯ ಫ್ಲೈಓವರ್ ಮೇಲೆ‌ ಸರಣಿ ಅಪಘಾತ; 9 ಕಾರುಗಳು ಜಖಂ, ಓರ್ವರಿಗೆ ಗಾಯ