ಹಣ ಕೊಡದೆ ನಿರ್ಗತಿಕರ ಹೊಟ್ಟೆ ತುಂಬಿಸಲು ಹೊಸ ಐಡಿಯಾ.. ‘ಡಿಎಫ್’ ಫುಡ್ ಕಾರ್ಡ್ ಕೊಟ್ಟರೆ ಊಟ ಉಚಿತ

|

Updated on: Jan 29, 2021 | 7:06 AM

ಇತ್ತೀಚಿನ ದಿನಗಳಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು ದಂಧೆಗೂ ಇಳಿದಿದ್ದಾರೆ. ಹೀಗಾಗಿ ಸಾಕಷ್ಟು ಜನ ಭಿಕ್ಷೆ ಹಾಕುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಇದರಿಂದ ನಿಜವಾಗೂ ಹಸಿದವರು ಪರದಾಡುವಂತಾಗಿದೆ. ಇದನ್ನರಿತ ಅದೊಂದು ಯುವ ಪಡೆ ಹೊಸದೊಂದು ಐಡಿಯಾ ಮಾಡಿ ಹಸಿದವರಿಗೆ ಅನ್ನ ನೀಡುವ ಕೆಲಸ ಮಾಡ್ತಿದೆ.

ಹಣ ಕೊಡದೆ ನಿರ್ಗತಿಕರ ಹೊಟ್ಟೆ ತುಂಬಿಸಲು ಹೊಸ ಐಡಿಯಾ.. ‘ಡಿಎಫ್’ ಫುಡ್ ಕಾರ್ಡ್ ಕೊಟ್ಟರೆ ಊಟ ಉಚಿತ
‘ಡಿಎಫ್’ ಫುಡ್ ಕಾರ್ಡ್ ಪಡೆದು ಉಚಿತ ಊಟ ಸೇವಿಸಿದ ಮಹಿಳೆಯರು
Follow us on

ಬೆಳಗಾವಿ: ಈ ನಾಲ್ವರು ಯುವಕರ ತಂಡ ಭಿಕ್ಷುಕರ ಬಳಿ, ಅನಾಥರ ಬಳಿ ಹೋಗಿ ಹಣವನ್ನೋ ಅಥವಾ ಊಟವನ್ನೋ ಕೊಡುವುದನ್ನ ಬಿಟ್ಟು ಎಟಿಎಂ ಮಾದರಿಯ ಕಾರ್ಡ್ ಕೊಡ್ತಿದ್ದಾರೆ. ಈ ಕಾರ್ಡ್​ನಿಂದ ಊಟದ ಪ್ಯಾಕೆಟ್ ಅಥವಾ ಹಣ ಕೊಡುವುದು ತಪ್ಪಲಿದೆ. ಹಾಗೇ ಅಸಹಾಯಕರು ಹೋಟೆಲ್​ನಲ್ಲಿ ಬೇಕಾದ ತಿಂಡಿಯನ್ನ, ಯಾವಾಗ ಬೇಕಾದ್ರೂ ತಿನ್ನಲು ಅನುಕೂಲವಾಗುತ್ತಿದೆ.

ಇದೇ ಉದ್ದೇಶದಿಂದ ಡಿಎಫ್ ಪೌಂಡೇಷನ್ ಹೆಸರಿನ ಕಾರ್ಡ್ ಕೊಡ್ತಿದ್ದಾರೆ. ಕಾರ್ಡ್ ಹೆಸ್ರು ಡಿಯರ್ ಹುಡ್ ಪುಡ್ ಕಾರ್ಡ್ ಅಂತಾ. ಕಾರ್ಡ್ ಬೆಲೆ 10 ರೂಪಾಯಿ. ಕಾರ್ಡ್​ನ ಭಿಕ್ಷುಕರು, ವಯಸ್ಸಾದವರು ಹಾಗೂ ಊಟಕ್ಕೆ ಪರದಾಡುವವರಿಗೆ ನೀಡಲಾಗುತ್ತದೆ. ಹೀಗೆ ಕುಂದಾನಗರಿಯಲ್ಲಿ ಹಸಿದವರಿಗೆ ಹೊಟ್ಟೆ ತುಂಬಾ ಅನ್ನ ಸಿಗುತ್ತಿದೆ. ಹೊಸ ಬದಲಾವಣೆಗೆ ಈ ಯುವಪಡೆ ಇದೀಗ ನಾಂದಿ ಹಾಡಿದೆ.

ಭಿಕ್ಷುಕರ ಹೊಟ್ಟೆ ತುಂಬಿಸೋ ಕಾರ್ಡ್
ಜನವರಿ ಮೊದಲ ವಾರದಿಂದ ಕಾರ್ಡ್ ಸಿಸ್ಟಮ್ ಊಟ ವಿತರಣೆ ಆರಂಭವಾಗಿದೆ. ಬೆಳಗಾವಿಯ ಬಹುತೇಕ ಹೋಟೆಲ್​ಗಳೊಂದಿಗೆ ಟೈಯಪ್ ಆಗಿರುವ ಇವರು ಡಿಎಫ್ ಕಾರ್ಡ್ ತೆಗೆದುಕೊಂಡು ಬಂದರೆ ಅಂತವರಿಗೆ ಊಟ ನೀಡುವಂತೆ ಹೇಳಿದ್ದಾರೆ. ಗುರುತಿಗಾಗಿ ಹೋಟೆಲ್ ಮುಂಭಾಗದಲ್ಲಿ ತಮ್ಮದೊಂದು ಸ್ಟಿಕ್ಕರ್ ಅಂಟಿಸಿರುತ್ತಾರೆ. ಇಪ್ಪತ್ತು ಜನರಿರುವ ತಂಡ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ.

ಬೇರೊಬ್ಬರಿಗೆ ಸಹಾಯ ಮಾಡುವ ಮನಸ್ಸಿದ್ದರೂ 1 ರೂಪಾಯಿ ಕೊಡಲು ಹಿಂದೆ ಮುಂದೆ ನೋಡುವ ಸ್ಥಿತಿ ಇದೆ. ಆದ್ರೆ ಸಹಾಯ ಮಾಡಲೇಬೇಕು ಅನ್ನುವವರು ಈ ರೀತಿ ಹೋಟೆಲ್​ಗೆ ಹೋಗಿ ಅಲ್ಲಿ ಕಾರ್ಡ್​ನ್ನ ಖರೀದಿಸಿ ನಂತರ ಭೀಕ್ಷುಕರಿಗೆ ಅದನ್ನ ನೀಡಬಹುದು. ಕಾರ್ಡ್ ಮೂಲಕ ಇಷ್ಟವಾದ ಆಹಾರವನ್ನ ಅವರು ತಿನ್ನುವಂತಾಗುತ್ತದೆ. ಒಟ್ನಲ್ಲಿ ಇದೊಂದು ಡಿಫರೆಂಟ್ ಐಡಿಯಾ ಆಗಿದ್ದು, ಈಗಾಗಲೇ ಕುಂದಾನಗರಿಯಲ್ಲಿ ಸಕ್ಸಸ್ ಕಾಣುತ್ತಿದೆ.

ಬಡ ವಿದ್ಯಾರ್ಥಿಗಳಿಗೆ ಮಿಡಿದ ವಿದ್ಯಾರ್ಥಿ ಜೀವ: 106 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ

Published On - 7:03 am, Fri, 29 January 21