ರಾಣಿ ಚನ್ನಮ್ಮ ವಿವಿಯ B.Ed 1ನೇ, 3ನೇ ಸೆಮಿಸ್ಟರ್ ರೆಗ್ಯುಲರ್‌ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೆಯೇ ಪಾಸ್‌

ರಾಣಿ ಚನ್ನಮ್ಮ ವಿವಿಯ ಬಿ.ಎಡ್‌ 1ನೇ ಹಾಗೂ 3ನೇ ಸೆಮಿಸ್ಟರ್​ಗಳ ರೆಗ್ಯುಲರ್‌ ವಿದ್ಯಾರ್ಥಿಗಳನ್ನು ಕೊವಿಡ್ ಹಿನ್ನೆಲೆಯಲ್ಲಿ ಮುಂದಿನ ಸೆಮಿಸ್ಟರ್‌ಗೆ ಪಾಸ್‌ ಮಾಡುವಂತೆ ಆದೇಶ ಹೊರಡಿಸಲಾಗಿದೆ.

ರಾಣಿ ಚನ್ನಮ್ಮ ವಿವಿಯ B.Ed 1ನೇ, 3ನೇ ಸೆಮಿಸ್ಟರ್ ರೆಗ್ಯುಲರ್‌ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೆಯೇ ಪಾಸ್‌
ರಾಣಿ ಚನ್ನಮ್ಮ ವಿವಿ
KUSHAL V

|

Jan 28, 2021 | 11:10 PM

ಬೆಳಗಾವಿ: ಜಿಲ್ಲೆಯ ರಾಣಿ ಚನ್ನಮ್ಮ ವಿವಿಯ ಬಿ.ಎಡ್‌ 1ನೇ ಹಾಗೂ 3ನೇ ಸೆಮಿಸ್ಟರ್​ಗಳ ರೆಗ್ಯುಲರ್‌ ವಿದ್ಯಾರ್ಥಿಗಳನ್ನು ಕೊವಿಡ್ ಹಿನ್ನೆಲೆಯಲ್ಲಿ ಮುಂದಿನ ಸೆಮಿಸ್ಟರ್‌ಗೆ ಪಾಸ್‌ ಮಾಡುವಂತೆ ಆದೇಶ ಹೊರಡಿಸಲಾಗಿದೆ. ರಾಣಿ ಚನ್ನಮ್ಮ ವಿವಿ ಮೌಲ್ಯಮಾಪನ ಕುಲ ಸಚಿವರಿಂದ ಆದೇಶ ಹೊರಡಿಸಲಾಗಿದೆ.

2020ರ ಮಾರ್ಚ್ ತಿಂಗಳಲ್ಲಿ ಸೆಮಿಸ್ಟರ್ ಪರೀಕ್ಷೆ ನಡೆಯಬೇಕಿತ್ತು. ಆದರೆ, ಕೊವಿಡ್​ ಹಿನ್ನೆಲೆಯಲ್ಲಿ ರೆಗ್ಯುಲರ್ ವಿದ್ಯಾರ್ಥಿಗಳಿಗೆ ಮುಂದಿನ ಸೆಮಿಸ್ಟರ್‌ಗೆ ಬಡ್ತಿ ನೀಡುವಂತೆ ಸರ್ಕಾರದ ಸೂಚನೆ ಮೇರೆಗೆ ವಿವಿ ರಚಿಸಿದ ಸಮಿತಿ ವರದಿಯಂತೆ ಆದೇಶ ಹೊರಡಿಸಲಾಗಿದೆ.

ಆಂತರಿಕ, ಹಿಂದಿನ ಸೆಮಿಸ್ಟರ್ ಅಂಕಗಳನ್ನು ಪರಿಗಣಿಸಿ ವಿದ್ಯಾರ್ಥಿಗಳನ್ನು ಪಾಸ್‌ ಮಾಡಲಾಗಿದೆ. ಪ್ರಥಮ ಸೆಮಿಸ್ಟರ್‌ ವಿದ್ಯಾರ್ಥಿಗಳು ಪಡೆದ ಶೇ.100ರಷ್ಟು ಆಂತರಿಕ ಅಂಕಗಳನ್ನು ಹಾಗೂ ತೃತೀಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸದರಿ ಸೆಮಿಸ್ಟರ್‌ನ ಶೇ.50ರಷ್ಟು ಅಂಕ ಹಾಗೂ ಹಿಂದಿನ ಸೆಮಿಸ್ಟರ್​ ಫಲಿತಾಂಶದಲ್ಲಿ ಪಡೆದ ಶೇ.50ರಷ್ಟು ಅಂಕಗಳನ್ನ ಪರಿಗಣಿಸಿ ಮುಂದಿನ ಸೆಮಿಸ್ಟರ್‌ಗೆ ಬಡ್ತಿ ನೀಡಲಾಗಿದೆ. ಈ ಕುರಿತು, ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ಎಸ್.ಎಂ.ಹುರಕಡ್ಲಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಲಿಂಗೈಕ್ಯ ಶಿವಕುಮಾರ ಶ್ರೀಗಳ ಹೆಸರಿನಲ್ಲಿ ನಿರ್ಮಾಣವಾಗ್ತಿದ್ದ ಜೈವಿಕವನಕ್ಕೆ ಕಿಡಿಗೇಡಿಗಳಿಂದ ಬೆಂಕಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada