ಡಿ.ಕೆ.ಶಿವಕುಮಾರ್ಗೆ ಈ ಬಾರಿ ಆಯುಧಪೂಜೆ, ನವರಾತ್ರಿ ತಿಹಾರ್ ಜೈಲಿನಲ್ಲೇ
ದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಈಗಾಗಲೇ ತಿಹಾರ್ ಜೈಲಿನಲ್ಲಿರುವ ಡಿ.ಕೆ.ಶಿವಕುಮಾರ್ಗೆ ಮತ್ತೆ ಹಿನ್ನಡೆಯಾಗಿದೆ. ಡಿಕೆಶಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ದೆಹಲಿ ಹೈಕೋರ್ಟ್ ಮುಂದೂಡಿದೆ. ಅಲ್ಲದೆ ಅ.14ರೊಳಗೆ ಆಕ್ಷೇಪಣೆ ಅರ್ಜಿ ಸಲ್ಲಿಸಲು ಹೈಕೋರ್ಟ್ನ ನ್ಯಾ.ಸುರೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಇ.ಡಿಗೆ ನೋಟಿಸ್ ನೀಡಿದೆ. ಗೌರಿ, ಗಣೇಶ ಹಬ್ಬಕ್ಕೂ ಇ.ಡಿಯಿಂದ ರಿಲೀಫ್ ಸಿಗದ ಡಿಕೆಶಿಗೆ ಈಗ ದಸರಾಗೂ ಜಾಮೀನು ಸಿಕ್ಕಿಲ್ಲ. ಹೀಗಾಗಿ ನವರಾತ್ರಿ ಮುಗಿಯುವವರೆಗೂ ಕಾಂಗ್ರೆಸ್ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿನಲ್ಲೇ […]
ದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಈಗಾಗಲೇ ತಿಹಾರ್ ಜೈಲಿನಲ್ಲಿರುವ ಡಿ.ಕೆ.ಶಿವಕುಮಾರ್ಗೆ ಮತ್ತೆ ಹಿನ್ನಡೆಯಾಗಿದೆ. ಡಿಕೆಶಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ದೆಹಲಿ ಹೈಕೋರ್ಟ್ ಮುಂದೂಡಿದೆ. ಅಲ್ಲದೆ ಅ.14ರೊಳಗೆ ಆಕ್ಷೇಪಣೆ ಅರ್ಜಿ ಸಲ್ಲಿಸಲು ಹೈಕೋರ್ಟ್ನ ನ್ಯಾ.ಸುರೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಇ.ಡಿಗೆ ನೋಟಿಸ್ ನೀಡಿದೆ. ಗೌರಿ, ಗಣೇಶ ಹಬ್ಬಕ್ಕೂ ಇ.ಡಿಯಿಂದ ರಿಲೀಫ್ ಸಿಗದ ಡಿಕೆಶಿಗೆ ಈಗ ದಸರಾಗೂ ಜಾಮೀನು ಸಿಕ್ಕಿಲ್ಲ. ಹೀಗಾಗಿ ನವರಾತ್ರಿ ಮುಗಿಯುವವರೆಗೂ ಕಾಂಗ್ರೆಸ್ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿನಲ್ಲೇ ದಿನ ಕಳೆಯಬೇಕಾಗಿದೆ.
ಡಿ.ಕೆ.ಶಿವಕುಮಾರ್ ಕರ್ನಾಟಕ ಬಿಟ್ಟು ದೆಹಲಿಯಲ್ಲಿ ಇ.ಡಿ ಅಂಗಳ ತಲುಪಿ ಸರಿಯಾಗಿ ಒಂದು ತಿಂಗಳಾಗಿದೆ. ಈ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯವು ಡಿ.ಕೆ.ಶಿವಕುಮಾರ್ ಅವರ ಸೋದರ ಡಿ.ಕೆ.ಸುರೇಶ್ಗೂ ವಿಚಾರಣೆಗೆ ಹಾಜರಾಗುವಂತೆ ಬುಲಾವ್ ನೀಡಿದೆ. ಕಳೆದೊಂದು ತಿಂಗಳಿಂದ ದಿಲ್ಲಿಯಲ್ಲಿ ಅಣ್ಣನಿಗೆ ನೆರಳಾಗಿ ನಿಂತಿರುವ ಸುರೇಶ್ಗೂ ಈಗ ಇ.ಡಿ ಕಾಟ ಶುರುವಾಗಿದೆ. ಈ ಸಂಬಂಧ ದೆಹಲಿಯಲ್ಲಿ ವಕೀಲರನ್ನ ಭೇಟಿ ಮಾಡಿದ ಡಿ.ಕೆ.ಸುರೇಶ್, ಅಣ್ಣನ ಜಾಮೀನು ಅರ್ಜಿ ಮತ್ತು ತಮಗೆ ನೀಡಿರುವ ಸಮನ್ಸ್ ಬಗ್ಗೆ ವಕೀಲರೊಂದಿಗೆ ಡಿ.ಕೆ.ಸುರೇಶ್ ಚರ್ಚೆ ನಡೆಸಿದ್ದಾರೆ.
ಈಗ ತಾನೇ ಡಿ.ಕೆ.ಶಿವಕುಮಾರ್ ಅವರನ್ನ ಭೇಟಿಯಾಗಿದ್ದೆ, ಅವರು ಆರೋಗ್ಯವಾಗಿದ್ದಾರೆ. ಹಬ್ಬದ ಪ್ರಯುಕ್ತ ಅ.10ರವರೆಗೂ ನ್ಯಾಯಾಲಯ ರಜೆ ಇದೆ. ಹಾಗಾಗಿ ವಕೀಲರು ಮತ್ತು ಅಧಿಕಾರಿಗಳು ಇನ್ನೂ 4 ದಿನ ಬೇಕೆಂದು ಕೇಳಿದ್ರು. ಹೀಗಾಗಿ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಅ.14ಕ್ಕೆ ಕೋರ್ಟ್ ಮುಂದೂಡಿದೆ ಎಂದು ದೆಹಲಿಯಲ್ಲಿ ಡಿ.ಕೆ.ಸುರೇಶ್ ಮಾಹಿತಿ ನೀಡಿದ್ರು. ಈ ಮಧ್ಯೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ನನಗೆ ಯಾವುದೇ ಸಮನ್ಸ್ ಬಂದಿಲ್ಲ. ಒಂದು ವೇಳೆ ಸಮನ್ಸ್ ಬಂದ್ರೆ ಒಂದು ನಿಮಿಷವೂ ತಡ ಮಾಡದೆ ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಹಾಜರಾಗುತ್ತೇನೆ ಎಂದು ತಿಳಿಸಿದ್ರು.
Published On - 12:22 pm, Mon, 30 September 19