ತಪ್ಪು ಮಾಡದಿದ್ರೆ ಭಯ ಪಡುವ ಅಗತ್ಯವಿಲ್ಲ; ಹೆಚ್ಡಿಕೆ ಟ್ವೀಟ್ಗೆ ಆರ್.ಅಶೋಕ್ ಟಾಂಗ್
ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ನ ಮೈತ್ರಿ ಸರ್ಕಾರದಲ್ಲಿ ನಡೆದ ಫೋನ್ ಕದ್ದಾಲಿಕೆ ಸಂಬಂಧ ರಾಜ್ಯದಲ್ಲಿ ಸಿಬಿಐ ತನಿಖೆ ನಡೆಯುತ್ತಿದೆ. ಸ್ವಾಮೀಜಿಗಳು, ಪೊಲೀಸ್ ಅಧಿಕಾರಿಗಳು ಹಾಗು ರಾಜಕಾರಣಿಗಳ ಫೋನ್ ಕದ್ದಾಲಿಕೆ ಆಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಆದಿಚುಂಚನಗಿರಿ ಶ್ರೀಗಳ ಫೋನ್ ಕದ್ದಾಲಿಕೆ ನಡೆದಿತ್ತು ಎಂಬ ಆರೋಪಕ್ಕೆ ನಿನ್ನೆಯಷ್ಟೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು. ಶ್ರೀಗಳ ಫೋನ್ ಟ್ಯಾಪಿಂಗ್ ಸಂಬಂಧ ರಾಜಕೀಯ ನಾಯಕರ ಹೇಳಿಕೆ ಕೇಳಿ ನನ್ನ ಹೃದಯದಲ್ಲಿ ಸಹಿಸಲಾಗದಷ್ಟು ನೋವುಂಟು […]
ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ನ ಮೈತ್ರಿ ಸರ್ಕಾರದಲ್ಲಿ ನಡೆದ ಫೋನ್ ಕದ್ದಾಲಿಕೆ ಸಂಬಂಧ ರಾಜ್ಯದಲ್ಲಿ ಸಿಬಿಐ ತನಿಖೆ ನಡೆಯುತ್ತಿದೆ. ಸ್ವಾಮೀಜಿಗಳು, ಪೊಲೀಸ್ ಅಧಿಕಾರಿಗಳು ಹಾಗು ರಾಜಕಾರಣಿಗಳ ಫೋನ್ ಕದ್ದಾಲಿಕೆ ಆಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಆದಿಚುಂಚನಗಿರಿ ಶ್ರೀಗಳ ಫೋನ್ ಕದ್ದಾಲಿಕೆ ನಡೆದಿತ್ತು ಎಂಬ ಆರೋಪಕ್ಕೆ ನಿನ್ನೆಯಷ್ಟೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು. ಶ್ರೀಗಳ ಫೋನ್ ಟ್ಯಾಪಿಂಗ್ ಸಂಬಂಧ ರಾಜಕೀಯ ನಾಯಕರ ಹೇಳಿಕೆ ಕೇಳಿ ನನ್ನ ಹೃದಯದಲ್ಲಿ ಸಹಿಸಲಾಗದಷ್ಟು ನೋವುಂಟು ಮಾಡಿದೆ. ಎಲ್ಲಕ್ಕೂ ಮಿಗಿಲಾಗಿ ಶ್ರೀಗಳಿಗಾದ ನೋವು ಹೆಚ್ಚಿಸಿದೆ. ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಹೆಸರು ಪ್ರಸ್ತಾಪಿಸಲಾಗಿದೆ. ಸಂಭವಿಸದ ತಪ್ಪೊಂದಕ್ಕೆ ಆರ್.ಅಶೋಕ್ ಕ್ಷಮೆ ಕೇಳಿದ್ದಾರೆ. ಇದರಿಂದ ಅವರಿಗೆ ಏನು ಲಾಭವೋ ಗೊತ್ತಿಲ್ಲ. ಆದ್ರೆ, ಆರ್.ಅಶೋಕ್ ಆತುರಕ್ಕೆ ಮರುಕವಿದೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.
ಹೆಚ್ಡಿಕೆ ಬಗ್ಗೆ ನಾನು ಮಾತಾಡಿಲ್ಲ: ಹೆಚ್ಡಿಕೆ ಟ್ವೀಟ್ ಸಂಬಂಧ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.ಅಶೋಕ್, ಫೋನ್ ಕದ್ದಾಲಿಕೆ ಸಂಬಂಧ ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ನಾನು ಏನನ್ನೂ ಮಾತಾಡಿಲ್ಲ. ನಾನು ಈಗ ಸರ್ಕಾರದ ಭಾಗವಾಗಿದ್ದೇನೆ. ಫೋನ್ ಕದ್ದಾಲಿಕೆ ಬಗ್ಗೆ ಹೇಳಿದ್ದು ಸತ್ಯ. ಇದರಲ್ಲಿ ಮುಚ್ಚು ಮೊರೆ ಪ್ರಶ್ನೆ ಇಲ್ಲ. ಪ್ರಕರಣ ಸಂಬಂಧ ಸಿಬಿಐ ತನಿಖೆ ಆಗ್ತಿದೆ, ಸತ್ಯ ಹೊರಗೆ ಬರಲಿದೆ. ಅವರು ತಪ್ಪು ಮಾಡದೇ ಇದ್ದರೆ ಭಯ ಪಡೋ ಅಗತ್ಯ ಇಲ್ಲ ಎಂದರು.
ಫೋನ್ ಕದ್ದಾಲಿಕೆ ಅಕ್ಷಮ್ಯ ಅಪರಾಧ: ಯಾವ ಸರ್ಕಾರ ಸ್ವಾಮೀಜಿಯವರ ಫೋನ್ ಕದ್ದಾಲಿಕೆ ಮಾಡಿದೆಯೋ ಆ ಸರ್ಕಾರ ಅಕ್ಷಮ್ಯ ಅಪರಾಧ ಮಾಡಿದೆ ಅಂತ ಹೇಳಿದ್ದೇನೆ. ಆದ್ರೆ ಇವರದ್ದೇ ಸರ್ಕಾರ ಮಾಡಿದೆ ಅಂತ ನಾನು ಹೇಳಿಲ್ಲ. ತನಿಖೆಗೆ ಕೊಡುವ ಮುಂಚೆಯೇ ಈ ಬಗ್ಗೆ ಅಧಿಕಾರಿಗಳು ನನಗೆ ಮಾಹಿತಿ ನೀಡಿದ್ದರು. ಫೋನ್ ಕದ್ದಾಲಿಕೆ ಆಗಿಲ್ಲ ಅಂದರೆ ನಾವು ಹೇಗೆ ತನಿಖೆಗೆ ಕೊಡೋಕೆ ಸಾಧ್ಯ? ಯಾವುದೇ ವ್ಯಕ್ತಿ, ಪಕ್ಷ ತಪ್ಪು ಮಾಡಿದರೂ ಅದು ಪಾಪದ ಕೆಲಸ ಎಂದಿದ್ದೇನೆ. ನಿರ್ಮಲಾನಂದ ಶ್ರೀಗಳು ನಮ್ಮ ಸಮುದಾಯದ ಸ್ವಾಮೀಜಿ. ಹೀಗಾಗಿ ಹೇಳಿದ್ದೇನೆ ಎಂದು ಸಚಿವ ಆರ್.ಅಶೋಕ್ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
Published On - 2:33 pm, Mon, 30 September 19