ಟ್ರಬಲ್ ಶೂಟರ್ ಡಿಕೆಶಿಗೆ ಜಾಮೀನು ಇಲ್ಲ, ಇನ್ನೂ ತಿಹಾರ್ ಜೈಲಿನಲ್ಲೇ ಇರಬೇಕು
ಮಾಜಿ ಸಚಿವ ಡಿ.ಕೆ.ಶಿವಕುಮಾರ್ಗೆ ಜಾಮೀನು ನೀಡಲು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ನಿರಾಕರಿಸಿದೆ. ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ಜಡ್ಜ್ ಅಜಯ್ ಕುಮಾರ್ ಕುಹರ್ ವಜಾಗೊಳಿಸಿ, ಒಂದೇ ವಾಕ್ಯದ ಆದೇಶ ಓದಿ, ತೆರಳಿದ್ದಾರೆ. ಹೀಗಾಗಿ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ಗೆ ತಿಹಾರ್ ಜೈಲುವಾಸ ಮುಂದುವರಿದಿದೆ. ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಕಳೆದ 6 ದಿನಗಳಿಂದ ಡಿಕೆ ಶಿವಕುಮಾರ್ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಅ.1ಕ್ಕೆ ಡಿ.ಕೆ.ಶಿವಕುಮಾರ್ ಅವರ ನ್ಯಾಯಾಂಗ ಬಂಧನದ ಅವಧಿ ಮುಗಿಯಲಿದೆ. ಪ್ರಕರಣದ ಹಿನ್ನೆಲೆ: ದೆಹಲಿಯಲ್ಲಿ ಡಿಕೆಶಿ ಮತ್ತು ಆಪ್ತರ […]
ಮಾಜಿ ಸಚಿವ ಡಿ.ಕೆ.ಶಿವಕುಮಾರ್ಗೆ ಜಾಮೀನು ನೀಡಲು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ನಿರಾಕರಿಸಿದೆ. ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ಜಡ್ಜ್ ಅಜಯ್ ಕುಮಾರ್ ಕುಹರ್ ವಜಾಗೊಳಿಸಿ, ಒಂದೇ ವಾಕ್ಯದ ಆದೇಶ ಓದಿ, ತೆರಳಿದ್ದಾರೆ. ಹೀಗಾಗಿ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ಗೆ ತಿಹಾರ್ ಜೈಲುವಾಸ ಮುಂದುವರಿದಿದೆ.
ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಕಳೆದ 6 ದಿನಗಳಿಂದ ಡಿಕೆ ಶಿವಕುಮಾರ್ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಅ.1ಕ್ಕೆ ಡಿ.ಕೆ.ಶಿವಕುಮಾರ್ ಅವರ ನ್ಯಾಯಾಂಗ ಬಂಧನದ ಅವಧಿ ಮುಗಿಯಲಿದೆ.
ಪ್ರಕರಣದ ಹಿನ್ನೆಲೆ: ದೆಹಲಿಯಲ್ಲಿ ಡಿಕೆಶಿ ಮತ್ತು ಆಪ್ತರ ನಿವಾಸಗಳ ಮೇಲೆ ಐಟಿ ಅಧಿಕಾರಿಳು ದಾಳಿ ನಡೆಸಿದ್ದರು. ಈ ವೇಳೆ ದಾಖಲೆಯಿಲ್ಲದ 8.59 ಕೋಟಿ ನಗದು ಪತ್ತೆಯಾಗಿತ್ತು. ಈ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ECIR ದಾಖಲಿಸಿದ್ದರು.
ಆ.30ರಿಂದ ಡಿ.ಕೆ.ಶಿವಕುಮಾರ್ ಸತತ 4 ದಿನ ಇಡಿ ಅಧಿಕಾರಿಗಳ ವಿಚಾರಣೆ ಎದುರಿಸಿದ್ರು. ಆದ್ರೆ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಡಿಕೆಶಿಯನ್ನು 10 ದಿನಗಳ ಕಾಲ ಇಡಿ ವಶಕ್ಕೆ ಪಡೆಯಿತು. ಅವಧಿ ಮುಗಿದ ಬಳಿಕ ಮತ್ತೆ 4 ದಿನಗಳ ಕಾಲ ಹೆಚ್ಚಿನ ವಿಚಾರಣೆಗೆ ಡಿಕೆಶಿಯನ್ನು ಇಡಿ ವಶಕ್ಕೆ ಪಡೆಯಿತು. ಈ ವೇಳೆ ಸೆ.12ರಂದು ಡಿಕೆಶಿ ಪುತ್ರಿ ಐಶ್ವರ್ಯಾಗೂ ಸಮನ್ಸ್ ನೀಡಿ ಅಕ್ರಮ ಹಣ ವರ್ಗಾವಣೆ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದರು. ಬಳಿಕ ಸೆ.17ರಂದು ಡಿಕೆಶಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ದೆಹಲಿ ಕೋರ್ಟ್ ಆದೇಶಿಸಿತು.
Published On - 5:30 pm, Wed, 25 September 19