ಬೆಂಗಳೂರು: ತೋಟಗಾರಿಕೆ ಇಲಾಖೆಯ ಎಡವಟ್ಟಿನಿಂದಾಗಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ಪರದಾಡುವಂತ ಪರಿಸ್ಥಿತಿ ಉಂಟಾಗಿದೆ. ಕೆಲಸನೂ ಇಲ್ಲ, ಬೇರೆ ಕೆಲಸ ಹುಡುಕೋಕೆ ಮಾರ್ಕ್ಸ್ ಕಾರ್ಡ್ ಕೂಡ ಇಲ್ಲ ಎಂಬ ಚಿಂತೆಯಲ್ಲಿ ಅಭ್ಯರ್ಥಿಗಳಿದ್ದು ರೈತರ ಮಕ್ಕಳ ಬದುಕು ಬೀದಿ ಪಾಲಾಗಿದೆ.
ತೋಟಗಾರಿಕೆ ಇಲಾಖೆ ಕಳೆದ ವರ್ಷ ಉದ್ಯೋಗಕ್ಕೆ ಅರ್ಜಿ ಅಹ್ವಾನಿಸಿತ್ತು. ಇದು ರೈತರ ಮಕ್ಕಳಿಗೆ ಮಾತ್ರ ಇರೋ ಉದ್ಯೋಗ. ಅದೇ ರೀತಿ ವಿದ್ಯಾರ್ಥಿಗಳು ಅಪ್ಲಿಕೇಶನ್ ಹಾಕಿ ಸೆಲೆಕ್ಟ್ ಆಗಿದ್ರು. ಡಾಕ್ಯುಮೆಂಟ್ ವೆರಿಫಿಕೇಷನ್ ಸಹ ಆಗಿತ್ತು. ಆದ್ರೀಗ ಇಲಾಖೆ ನಷ್ಟದಲ್ಲಿದೆ ಅಂತ ನೇಮಕಾತಿ ತಡೆಹಿಡಿದಿದೆ. ಆದ್ರೆ ಡಾಕ್ಯುಮೆಂಟ್ ವೆರಿಫಿಕೇಷನ್ ವೇಳೆ ಉದ್ಯೋಗಾಕಾಂಕ್ಷಿಗಳು ತಮ್ಮ ಒರಿಜಿನಲ್ ಡಾಕ್ಯುಮೆಂಟ್ಗಳನ್ನ ಇಲಾಖೆಗೆ ಸಬ್ಮಿಟ್ ಮಾಡಿದ್ದಾರೆ.
ಅಂಕಪಟ್ಟಿಯನ್ನ ತೋಟಗಾರಿಕೆ ಇಲಾಖೆ ತನ್ನ ಸುಪರ್ದಿಗೆ ಪಡೆದಿದೆ. ಆದ್ರೆ ಇನ್ನೂ ಕೂಡ ನೇಮಕಾತಿ ಮಾಡಿಕೊಂಡಿಲ್ಲ. ಹೀಗಾಗಿ ಡಾಕ್ಯುಮೆಂಟ್ ವೆರಿಫಿಕೇಷನ್ಗೆ ಅಂಕಪಟ್ಟಿ ಕೊಟ್ಟಿರೋ ವಿದ್ಯಾರ್ಥಿಗಳು ಪರದಾಡ್ತಿದ್ದಾರೆ. ಇತ್ತ ಕೆಲಸಾನೂ ಇಲ್ಲ, ಬೇರೆ ಕಡೆ ಕೆಲಸ ಹುಡುಕೋಣ ಅಂದ್ರೆ ಮಾರ್ಕ್ಸ್ ಕಾರ್ಡ್ ಸಹ ಇಲ್ಲ. ಹೀಗಾಗಿ ತಮ್ಮ ಮೂಲ ದಾಖಲೆ ನೀಡುವಂತೆ ಒತ್ತಾಯ ಮಾಡಿದ್ದಾರೆ.
ಕಬ್ಬನ್ ಪಾರ್ಕ್ನಲ್ಲಿ ನಿಯಮಬಾಹಿರ ನಿರ್ಮಾಣ ಚಟುವಟಿಕೆ ಆರೋಪ: ಸರ್ಕಾರ, ತೋಟಗಾರಿಕೆ ಇಲಾಖೆಗೆ ಹೈಕೋರ್ಟ್ ನೋಟಿಸ್