ACB ದಾಳಿಯಿಂದ ಬಯಲಾಯ್ತು FDA ಬ್ರಹ್ಮಾಂಡ ಭ್ರಷ್ಟಾಚಾರ.. 4 ಕೋಟಿಗೂ ಅಧಿಕ ಮೌಲ್ಯದ ಚೆಕ್ ಪತ್ತೆ

ಜನವರಿ 25ರಂದು ಬಾಗಲಕೋಟೆಯಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿತ್ತು. ಈ ವೇಳೆ ಎಸಿಬಿ ಅಧಿಕಾರಿಗಳಿಗೆ 4 ಕೋಟಿಗೂ ಹೆಚ್ಚು ಮೌಲ್ಯದ ಪರಿಹಾರದ ಚೆಕ್​ಗಳು ಸಿಕ್ಕಿವೆ. ಕೃಷ್ಣಾ ಮೇಲ್ದಂಡೆ ಯೋಜನೆಯ 70 ಜನ ಫಲಾನುಭವಿಗಳಿಗೆ ನೀಡಬೇಕಿದ್ದ ಪರಿಹಾರದ ಚೆಕ್​ಗಳನ್ನು ವಿತರಿಸದೆ ಅಧಿಕಾರಿಗಳು ಅಕ್ರಮ ಎಸಗುತ್ತಿದ್ದದ್ದು ಬಯಲಾಗಿದೆ.

ACB ದಾಳಿಯಿಂದ ಬಯಲಾಯ್ತು FDA ಬ್ರಹ್ಮಾಂಡ ಭ್ರಷ್ಟಾಚಾರ.. 4 ಕೋಟಿಗೂ ಅಧಿಕ ಮೌಲ್ಯದ ಚೆಕ್ ಪತ್ತೆ
ಬಾಗಲಕೋಟೆಯಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಕಚೇರಿ
Follow us
ಆಯೇಷಾ ಬಾನು
|

Updated on: Jan 30, 2021 | 7:49 AM

ಬಾಗಲಕೋಟೆ: ಜಿಲ್ಲೆಯಲ್ಲಿ ನಡೆದ ಎಸಿಬಿ ದಾಳಿಯಿಂದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ಲಂಚ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಎಸಿಬಿಗೆ 4 ಕೋಟಿ 61 ಲಕ್ಷದ 46 ಸಾವಿರದ 310 ರೂ ಮೌಲ್ಯದ 50 ಚೆಕ್​ಗಳು ಸಿಕ್ಕಿವೆ.

ಜನವರಿ 25ರಂದು ಬಾಗಲಕೋಟೆಯಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿತ್ತು. ಈ ವೇಳೆ ಎಸಿಬಿ ಅಧಿಕಾರಿಗಳಿಗೆ 4 ಕೋಟಿಗೂ ಹೆಚ್ಚು ಮೌಲ್ಯದ ಪರಿಹಾರದ ಚೆಕ್​ಗಳು ಸಿಕ್ಕಿವೆ. ಕೃಷ್ಣಾ ಮೇಲ್ದಂಡೆ ಯೋಜನೆಯ 70 ಜನ ಫಲಾನುಭವಿಗಳಿಗೆ ನೀಡಬೇಕಿದ್ದ ಪರಿಹಾರದ ಚೆಕ್​ಗಳನ್ನು ವಿತರಿಸದೆ ಅಧಿಕಾರಿಗಳು ಅಕ್ರಮ ಎಸಗುತ್ತಿದ್ದದ್ದು ಬಯಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕಾರಿಗಳು, ಸಿಬ್ಬಂದಿಯ ಮುಖವಾಡ ಕಳಚಿದೆ.

FDA ಸುನಂದಾ ತೆಗ್ಗಿಯಿಂದ ಲಂಚಕ್ಕೆ ಡಿಮ್ಯಾಂಡ್

ಸುನಂದಾ ತೆಗ್ಗಿ

ಭೂಪರಿಹಾರದ ಹಣ ಜಮಾ ಮಾಡಲು ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಇಲಾಖೆ ಕಚೇರಿ ಎಫ್‌ಡಿಎ ಸುನಂದಾ ತೆಗ್ಗಿಯವರು ಕಮತಗಿ ಪಟ್ಟಣದ ಸಂಗಪ್ಪ ಹಿರಾಳರಿಗೆ ಲಂಚ ಕೇಳಿದ್ದರು. 3 ಲಕ್ಷದ 43 ಸಾವಿರ ಭೂಪರಿಹಾರದ ಹಣ ಜಮಾ ಮಾಡಲು 4 ಸಾವಿರ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. FDA ಸುನಂದಾ ತೆಗ್ಗಿ ಲಂಚ ಪಡೆಯುವ ವೇಳೆ ACB ದಾಳಿ ನಡೆಸಿತ್ತು. ಇನ್ನು ಈ ಬಗ್ಗೆ ಸಂಶಯಗೊಂಡು ಎಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದರು.

ತನಿಖೆ ವೇಳೆ 70 ರೈತರಿಗೆ ಸೇರಿದ್ದ ಭೂಪರಿಹಾರದ ಚೆಕ್ ಪತ್ತೆಯಾಗಿದೆ. ಎಲ್ಲರಿಂದಲೂ ಲಂಚ ಪಡೆದು ವಿತರಿಸುವ ಉದ್ದೇಶದಿಂದ ಚೆಕ್ ನೀಡಿರಲಿಲ್ಲ ಎಂಬುವುದು ತಿಳಿದು ಬಂದಿದೆ. ದಾಳಿ ಬಳಿಕ ಲೆಕ್ಕಾಧಿಕಾರಿಗಳಿಗೆ ಭೂಪರಿಹಾರ ಜಮಾ ಮಾಡಲು ಸೂಚನೆ ನೀಡಲಾಗಿದೆ. ಇನ್ನು ರೈತರ ಖಾತೆಗೆ ಪರಿಹಾರದ ಹಣ ಜಮಾ ಮಾಡಲಾಗಿದ್ದು ಮತ್ತೆ ಲಂಚ ಕೇಳಿದ್ರೆ ಎಸಿಬಿ ಕಚೇರಿಗೆ ತಿಳಿಸುವಂತೆ ಸಂತ್ರಸ್ತರಿಗೆ ತಿಳಿಸಲಾಗಿದೆ.

ಎಸಿಬಿ ಉತ್ತರ ವಲಯ ಎಸ್​ಪಿ, ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಬಾಗಲಕೋಟೆ ಎಸಿಬಿ ಡಿವೈಎಸ್ ಎಮ್.ಕೆ. ಗಂಗಲ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಕೇವಲ ದಾಳಿ ನಡೆಸದೆ ಎಸಿಬಿ ತಂಡ ಪರಿಹಾರ ಕೂಡ ಕೊಡಿಸಿದೆ.

ಎಲ್ರೂ ಭ್ರಷ್ಟಾಚಾರ ಮುಕ್ತ ಮಾಡುತ್ತೇವೆಂದು ಹೊಸ ಪಕ್ಷ ಕಟ್ಟುತ್ತಾರೆ -ರಜನಿ ರಂಗಪ್ರವೇಶಕ್ಕೆ ಸಿದ್ದರಾಮಯ್ಯ ರಿಯಾಕ್ಷನ್​