AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನಭವಿಷ್ಯ | ಜನವರಿ 30, 2021

ಜನವರಿ 30, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನಭವಿಷ್ಯ.

ದಿನಭವಿಷ್ಯ | ಜನವರಿ 30, 2021
ದಿನ ಭವಿಷ್ಯ
ಆಯೇಷಾ ಬಾನು
|

Updated on: Jan 30, 2021 | 6:27 AM

Share

ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಪುಷ್ಯಮಾಸ, ಹೇಮಂತ ಋತು, ಕೃಷ್ಣಪಕ್ಷ, ಬಿದಿಗೆ ತಿಥಿ, ಶನಿವಾರ, ಜನವರಿ 30, 2021. ಮಖೆ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 9.38 ರಿಂದ ಇಂದು ಬೆಳಿಗ್ಗೆ 11.3. ಬೆಂಗಳೂರು ಸೂರ್ಯೋದ: ಬೆಳಿಗ್ಗೆ 6.48. ಸೂರ್ಯಾಸ್ತ: ಸಂಜೆ 6.9.

ತಾ.30-01-2021 ರ ಶನಿವಾರದ ರಾಶಿಭವಿಷ್ಯ

ಮೇಷ: ಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ. ಅಕಾಲಿಕ ಒತ್ತಡಗಳಿಂದ ಕಾರ್ಯಹಾನಿ. ಉನ್ನತ ಅಧಿಕಾರಿಗಳಿಂದ ತೊಂದರೆ ಉಂಟಾಗುವುದು. ಆತ್ಮವಿಶ್ವಾಸದಿಂದ ಮುಂದುವರೆಯಿರಿ. ಶುಭ ಸಂಖ್ಯೆ: 6

ವೃಷಭ: ವ್ಯಾಪಾರದಲ್ಲಿ ಅಭಿವೃದ್ಧಿಯಾಗುವುದು. ಆರ್ಥಿಕ ಸಂಕಷ್ಟಗಳು ಪರಿಹಾರವಾಗುವವು. ಮಹಿಳೆಯರಿಗೆ ಹೆಚ್ಚಿನ ಉನ್ನತಿ ಕಂಡುಬರುವುದು. ಅನಾವಶ್ಯಕ ಖರ್ಚಿನ ಸಾಧ್ಯತೆ ಇದೆ. ಶುಭ ಸಂಖ್ಯೆ: 8

ಮಿಥುನ: ಆತುರತೆಯ ನಿರ್ಣಯಗಳು ಅಪಾಯ ತರಬಹುದು. ಆತ್ಮೀಯರೊಂದಿಗೆ ಮನಸ್ತಾಪವಾಗುವ ಯೋಗವಿದೆ. ಅರ್ಧಕ್ಕೆನಿಂತ ಕೆಲಸಗಳು ಮುಂದುವರೆಯುವುದು. ಸ್ವಸಾಮಥ್ರ್ಯದಿಂದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಶುಭ ಸಂಖ್ಯೆ: 3

ಕಟಕ: ನಿಶ್ಚಿತ ಆರ್ಥಿಕ ಸ್ಥಿತಿ ಇರುವುದರಿಂದ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಅಲ್ಪ ಹಾನಿಯ ಸಂಭವವಿದೆ. ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಿರಿ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ. ಶುಭ ಸಂಖ್ಯೆ: 1

ಸಿಂಹ: ನೆನೆಗುದಿಗೆ ಬಿದ್ದ ಕೆಲಸಗಳಿಗೆ ಚಾಲನೆ ದೊರೆಯುವುದು. ಮಾನಸಿಕ ಉತ್ಸಾಹ ಕಂಡುಬರುವುದು. ಆತ್ಮೀಯರಿಗೆ ಉನ್ನತ ಅಧಿಕಾರ ದೊರೆಯುವುದು. ಕಾರಣಾಂತರ ಅಧಿಕ ಖರ್ಚುಬರಬಹುದು. ಶುಭ ಸಂಖ್ಯೆ: 9

ಕನ್ಯಾ: ಅತಿಯಾದ ಮಾತು ಅಪಾಯಕ್ಕೆ ಕಾರಣ. ಆಲಸ್ಯದಿಂದ ಕಾರ್ಯಹಾನಿಯಾಗುವ ಸಾಧ್ಯತೆ ಇದೆ. ಆಸ್ತಿ ವ್ಯವಹಾರಗಳಲ್ಲಿ ತಜ್ಞರ ಸಹಾಯ ಪಡೆಯಿರಿ. ನೌಕರರಿಗೆ ಅಪೇಕ್ಷಿತ ಸ್ಥಾನಕ್ಕೆ ವರ್ಗಾವಣೆಯ ಆಗುವ ಯೋಗವಿದೆ. ಶುಭ ಸಂಖ್ಯೆ: 4

ತುಲಾ: ಜವಾಬ್ದಾರಿಯ ನಿಮಿತ್ತ ದೂರ ಪ್ರಯಾಣದ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ ಇರುವದು. ಅಹಂಭಾವದಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಪ್ರಸಂಗವಿದೆ ಎಚ್ಚರಿಕೆ ವಹಿಸಿರಿ. ನಮೃತೆಗೆ ಯೋಗ್ಯ ಸಮ್ಮಾನ ದೊರೆಯುವದು. ಶುಭ ಸಂಖ್ಯೆ: 2

ವೃಶ್ಚಿಕ: ಹಣಕಾಸಿನ ವಿಷಯದಲ್ಲಿ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಸಹಾನುಭೂತಿಗೆ ಮಣಿಯದೆ ಇರುವದು ಒಳಿತು. ಉನ್ನತ ಅಧಿಕಾರಿಗಳಿಂದ ತೊಂದರೆ ಉಂಟಾಗುವದು. ಆತ್ಮವಿಶ್ವಾಸದಿಂದ ಮುಂದುವರೆಯಿರಿ. ಶುಭ ಸಂಖ್ಯೆ: 7

ಧನು: ದಿನೇ ದಿನೇ ಅಭಿವೃದ್ಧಿ ತೋರಿ ವ್ಯವಹಾರಗಳೆಲ್ಲಾ ಇಷ್ಟದಂತೆ ನಡೆಯುತ್ತದೆ. ಹಲವು ರೀತಿಯಿಂದ ಧನಾಗಮನ ತೋರಿಬರುತ್ತದೆ. ಐಶ್ವರ್ಯ, ಮುಟ್ಟಿದ್ದು ಚಿನ್ನವಾಗುವ ಕಾಲ. ಸ್ಥಿರಾಸ್ತಿ ಪ್ರಾಪ್ತಿ. ಅಲ್ಪ ಅನಾರೋಗ್ಯ ತೋರಿದರೂ ಕ್ಷಣಿಕವೆನ್ನಬಹುದು. ಶುಭ ಸಂಖ್ಯೆ: 5

ಮಕರ: ಮನೆ, ನಿವೇಶನ, ಆಸ್ತಿ ಖರೀದಿ ಯೋಗವಿದೆ. ವ್ಯವಹಾರದಲ್ಲಿ ಜಾಗ್ರತೆ ಇರಲಿ. ವ್ಯಾಪಾರ ಉತ್ತಮವಾಗಿರುವದು. ಉತ್ಸಾಹ ಮೂಡುವದು. ದೋಷ ಪರಿಹಾರಕ್ಕೆ ಜಲದಾನ ಮಾಡಿರಿ. ಶುಭ ಸಂಖ್ಯೆ: 9

ಕುಂಭ: ಮಹತ್ತರ ಯೋಜನೆಗಳು ಕಾರ್ಯಗತವಾಗಲು ಪ್ರಾಜ್ಞರ ಮಾರ್ಗದರ್ಶನ. ಜೀವನದ ಏಳಿಗೆಗೆ ಚಿಂತನೆ. ಕೆಲಸದ ನಡುವೆ ಮತ್ತೊಂದು ಕಾರ್ಯ ವಹಿಸಿಕೊಳ್ಳಲು ಚೈತನ್ಯ. ಮಹಿಳೆಯರು ಪಶ್ಚಾತಾಪಕ್ಕೆ ಅವಕಾವಿಲ್ಲದಂತೆ ನಡೆದುಕೊಳ್ಳುವುದು ಒಳಿತು. ಶುಭ ಸಂಖ್ಯೆ: 4

ಮೀನ: ಯುವಕರಿಗೆ ನವಿರಾದ ಮಾತುಗಳಿಂದ ಸಂಗಾತಿಗಳನ್ನು ಗೆಲ್ಲುವ ಛಾತಿ. ಆಕರ್ಷಕ ನಿರ್ಧಾರಗಳಿಂದ ಮನ್ನಣೆ. ಯಜಮಾನನಿಗೆ ಬಲವಂತದಲ್ಲಿ ಜವಾಬ್ದಾರಿ ನಿರ್ವಹಣೆ. ವೈಯಕ್ತಿಕ ಬದುಕಿನತ್ತ ಗಮನಹರಿಸಲು ವ್ಯವಧಾನ. ಶುಭ ಸಂಖ್ಯೆ: 8

ಬಸವರಾಜ ಗುರೂಜಿ

(ಡಾ.ಬಸವರಾಜ ಗುರೂಜಿ ಸಂಪರ್ಕ ಸಂಖ್ಯೆ: 9972848937)

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ