ಹಳೇ ಲವರ್​ ಜೊತೆ ಫೊನ್​ನಲ್ಲಿ ಮಾತಾಡಿದ್ದಕ್ಕೆ ಜಗಳ: ಗಂಡನ ಮೇಲಿನ ಕೋಪಕ್ಕೆ ಮಗನನ್ನು ಕೊಂದ ತಾಯಿ

ಗಂಡನ ಮೇಲಿನ ಕೋಪಕ್ಕೆ ಹೆತ್ತ ಮಗುವನ್ನೇ ಕೊಂದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪುಟ್ಟ ಕಂದನನ್ನ ಕೊಂದು ವಿಷಯ ಮುಚ್ಚಿಟ್ಟಿದ್ದ ಪಾಪಿ ತಾಯಿ ಸುಮಾಳನ್ನು (21) ಪೊಲೀಸರು ಬಂಧಿಸಿದ್ದಾರೆ.

ಹಳೇ ಲವರ್​ ಜೊತೆ ಫೊನ್​ನಲ್ಲಿ ಮಾತಾಡಿದ್ದಕ್ಕೆ ಜಗಳ: ಗಂಡನ ಮೇಲಿನ ಕೋಪಕ್ಕೆ ಮಗನನ್ನು ಕೊಂದ ತಾಯಿ
ಗಂಡನ ಮೇಲಿನ ಕೋಪಕ್ಕೆ ಮಗುವನ್ನು ಕೊಂದ ತಾಯಿ ವಶಕ್ಕೆ
KUSHAL V

|

Jan 29, 2021 | 11:23 PM

ಹಾಸನ: ಗಂಡನ ಮೇಲಿನ ಕೋಪಕ್ಕೆ ಹೆತ್ತ ಮಗುವನ್ನೇ ಕೊಂದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪುಟ್ಟ ಕಂದನನ್ನ ಕೊಂದು ವಿಷಯ ಮುಚ್ಚಿಟ್ಟಿದ್ದ ಪಾಪಿ ತಾಯಿ ಸುಮಾಳನ್ನು (21) ಪೊಲೀಸರು ಬಂಧಿಸಿದ್ದಾರೆ. ಕೊಲೆ ನಡೆದ 12 ದಿನಗಳ ಬಳಿಕ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಠಾಣೆ ಪೊಲೀಸರು ಪ್ರಕರಣ ಭೇದಿಸಿದ್ದಾರೆ.

ಗಂಡನ ಮೇಲೆ ಸುಮಾಗೆ ಯಾಕೆ ಅಷ್ಟು ಕೋಪ? ಅಂದ ಹಾಗೆ, ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹುಲ್ಲೇನಹಳ್ಳಿಯ ನಿವಾಸಿಯಾದ ಸುಮಾ ಜನವರಿ 19ರಂದು ತನ್ನ ಹಳೇ ಲವರ್​ ಜೊತೆ ಫೋನ್​ನಲ್ಲಿ ಮಾತಾಡುವಾಗ ತನ್ನ ಗಂಡ ನಂಜಪ್ಪನ ಕೈಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಳು. ಇದೇ ವಿಚಾರಕ್ಕೆ ದಂಪತಿ ನಡುವೆ ಸಿಕ್ಕಾಪಟ್ಟೆ ಜಗಳವಾಗಿತ್ತು.

ಹಾಗಾಗಿ, ಗಂಡ ಮನೆಯಿಂದ ಹೊರ ಹೋಗುತ್ತಲೇ ಸುಮಾ ತನ್ನ 2 ವರ್ಷದ ಮಗ ತನ್ಮಯ್​ ಮೇಲೆ ಪತಿ ಮೇಲಿನ ಸಿಟ್ಟನ್ನು ತೀರಿಸಿಕೊಂಡಿದ್ದಾಳೆ. ಗಂಡನ ಮೇಲಿನ ಕೋಪಕ್ಕೆ ಮಗುವನ್ನ ಬಡಿದು ಕೊಂದಿದ್ದಾಳೆ.

ಬಳಿಕ, ತನ್ಮಯ್​ಗೆ ಅನಾರೋಗ್ಯ ಎಂದು ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಹಾಗೆ ನಾಟಕವಾಡಿದ್ದಳು. ಆದರೆ, ಮಗು ಆಸ್ಪತ್ರೆಗೆ ತೆರಳೋ ಮುನ್ನವೇ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದರು. ಹೀಗಾಗಿ, ತಾನು ಹಲ್ಲೆ ಮಾಡಿದ ವಿಷಯವನ್ನು ಮುಚ್ಚಿಟ್ಟ ಸುಮಾ ಗಂಡನ ಜೊತೆ ಅದೇ ದಿನ ಮಗನ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಳು.

ಆದರೂ, ತನ್ನ ಪತ್ನಿ ಬಗ್ಗೆ ಅನುಮಾನಗೊಂಡ​ ನಂಜಪ್ಪ ಜನವರಿ 23ರಂದು ಪೊಲೀಸರಿಗೆ ದೂರು ನೀಡಿದ್ದನು. ನಂಜಪ್ಪ ನೀಡಿದ ದೂರಿನನ್ವಯ ನುಗ್ಗೆಹಳ್ಳಿ ಪೊಲೀಸರು ಜನವರಿ 25 ರಂದು ಮಗುವಿನ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿಸಿದ್ದರು.

ಮರಣೋತ್ತರ ಪರೀಕ್ಷಾ ವರದಿ ಕೈಸೇರುತ್ತಲೆ ಸುಮಾಳ ದುಷ್ಕೃತ್ಯ ಬಯಲಾಗಿದೆ. ಹಾಗಾಗಿ, ಅರೋಪಿ ತಾಯಿಯನ್ನ ಇಂದು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಕರ್ನಾಟಕದ ಬಸ್​ ಮೇಲೆ ಭಿತ್ತಿ ಪತ್ರ ಅಂಟಿಸಿದ್ದಕ್ಕೆ ಗರಂ: ಮಹಾರಾಷ್ಟ್ರದ ಬಸ್​ಗಳಿಗೆ ಮಸಿ ಬಳಿದ ಕನ್ನಡ ಪರ ಹೋರಾಟಗಾರರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada