ದಕ್ಷಿಣ ಕಾಶಿ ನಂಜನಗೂಡು ದೇಗುಲದ ಕಾಣಿಕೆ ಎಣಿಕೆ ಕಾರ್ಯ ಮುಕ್ತಾಯ.. 1 ತಿಂಗಳಿನಲ್ಲಿ ಸಂಗ್ರಹವಾದ ಮೊತ್ತ ಎಷ್ಟು ಗೊತ್ತಾ?
ಕೇವಲ ಒಂದು ತಿಂಗಳಲ್ಲಿ ಒಂದು ಕೋಟಿಗೂ ಅಧಿಕ ಹಣ ನಂಜುಂಡೇಶ್ವರ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗಿದ್ದು 70 ಗ್ರಾಂ ಚಿನ್ನ, 3 ಕೆಜಿ 50 ಗ್ರಾಂನಷ್ಟು ಬೆಳ್ಳಿ ಸಂಗ್ರಹವಾಗಿದೆ. ಜೊತೆಗೆ 13 ನಿಷೇಧಿತ ನೋಟುಗಳು, 2 ವಿದೇಶಿ ಕರೆನ್ಸಿ ಪತ್ತೆಯಾಗಿವೆ.
ಮೈಸೂರು: ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಹುಂಡಿಗಳ ಕಾಣಿಕೆ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ದೇವಾಲಯದ ಹುಂಡಿಯಲ್ಲಿ 1 ಕೋಟಿ 1 ಲಕ್ಷ 71 ಸಾವಿರದ 910 ರೂಪಾಯಿ ಕಾಣಿಕೆ ಹಣ ಸಂಗ್ರಹವಾಗಿದೆ.
ಕೇವಲ ಒಂದು ತಿಂಗಳಲ್ಲಿ ಒಂದು ಕೋಟಿಗೂ ಅಧಿಕ ಹಣ ನಂಜುಂಡೇಶ್ವರ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗಿದ್ದು 70 ಗ್ರಾಂ ಚಿನ್ನ, 3 ಕೆಜಿ 50 ಗ್ರಾಂನಷ್ಟು ಬೆಳ್ಳಿ ಸಂಗ್ರಹವಾಗಿದೆ. ಜೊತೆಗೆ 13 ನಿಷೇಧಿತ ನೋಟುಗಳು, 2 ವಿದೇಶಿ ಕರೆನ್ಸಿ ಪತ್ತೆಯಾಗಿವೆ.
ಮುಂದುವರಿದ ನಿಷೇಧಿತ ನೋಟುಗಳ ಕಾರುಬಾರು 7,500 ರೂ ಮೌಲ್ಯದ ನಿಷೇಧಿತ ನೋಟುಗಳು ಪತ್ತೆಯಾಗಿದ್ದು ಅದರಲ್ಲಿ 1,000 ರೂ ಮೌಲ್ಯದ 2 ನೋಟುಗಳು ಹಾಗೂ 500 ರೂ ಮೌಲ್ಯದ 11 ನಿಷೇಧಿತ ನೋಟುಗಳು ಪತ್ತೆಯಾಗಿವೆ. ಜೊತೆಗೆ 2 ವಿದೇಶಿ ಕರೆನ್ಸಿಗಳು ಪತ್ತೆಯಾಗಿವೆ. ದೇವಾಲಯದ 20 ಕ್ಕೂ ಹೆಚ್ಚು ಹುಂಡಿಗಳ ಕಾಣಿಕೆ ಎಣಿಕೆ ಕಾರ್ಯ ಮುಗಿದಿದ್ದು ಸುಮಾರು 50 ಕ್ಕೂ ಹೆಚ್ಚು ಸಿಬ್ಬಂದಿಗಳು ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ಕೊರೊನಾ ಅಟ್ಟಹಾಸ ಕಡಿಮೆಯಾಗಿದ್ದು ಈಗ ಭಕ್ತರ ಸಂಖ್ಯೆ ಹೆಚ್ಚಾಗಿದೆ.