ಮೈಸೂರು: ಅವರವರ ಚಿಂತೆ ಅವರವರಿಗೆ, ಅಲ್ವಾ…!? ಪೆರೋಲ್ ಸಿಕ್ಕಿದ್ದರೂ 9 ಮಂದಿ ಕೈದಿಗಳು ಜೈಲಿನಲ್ಲೇ ಉಳಿದಿದ್ದಾರಂತೆ! ಯಾಕೆ ಗೊತ್ತಾ? ಮುಂದೆ ಸ್ಟೋರಿ ಓದಿ.. ಇಂಟರೆಸ್ಟಿಂಗ್ ಆಗಿದೆ. ವಿವಿಧ ಕೇಸ್‌ಗಳಲ್ಲಿ ಮೈಸೂರಿನ ಕೇಂದ್ರ ಕಾರಾಗೃಹ ಸೇರಿದ್ದ ಕೈದಿಗಳಿಗೆ ಪೆರೋಲ್ ನೀಡಲಾಗಿತ್ತು. ಪೆರೋಲ್ ಸಿಕ್ಕ 63 ಕೈದಿಗಳ ಪೈಕಿ 9 ಮಂದಿ ನಾವು ಹೊರಗೆ ಹೋಗುವುದಿಲ್ಲ ಎಂದು ಜೈಲಿನಲ್ಲಿಯೇ ಉಳಿದುಕೊಂಡಿದ್ದಾರೆ! ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಯಾಕೆ ನೀವು ಹೊರಗೆ ಹೋಗೊಲ್ವಾ? ಎಂದು ಕೇಳಿದ್ದಕ್ಕೆ ಹೊರಗೆ ಕೊರೊನಾ ಇದೆ. ಈ ಭೀತಿಯ ಹಿನ್ನೆಲೆ ಜೈಲಿನಿಂದ ಹೋಗಲ್ಲವೆಂದ ಕೈದಿಗಳು ಮುಂದಾಲೋಚನೆಯಿಂದ ಹೇಳಿದ್ದಾರೆ.
ಹೊರಗೆ ಕೊರೊನಾ ಭಯ, ಅದರ ಜೊತೆಗೆ ಕೊರೊನಾ ಸಂದರ್ಭದಲ್ಲಿ ಏನು ಮಾಡೋದು? ಅಂತಾನೂ ಚಿಂತೆ ಪೆರೋಲ್ ದಯಪಾಲಿಸಿದ್ದರೂ ಜೈಲೇ ಸೇಫ್ ಎಂಬುದು ಖೈದಿಗಳ ಎಣಿಕೆಯಾಗಿದೆ! ಕೊರೊನಾ ಕಾಲದಲ್ಲಿ ಪೆರೋಲ್ ನೀಡಿ, ಹೊರಗೆ ಕಳಿಸುವ ಏರ್ಪಾಡು ಮಾಡಲಾಗಿತ್ತು. ವಿವಿಧ ಪ್ರಕರಣಗಳಲ್ಲಿ 63 ಮಂದಿ ಜೈಲು ಸೇರಿದ್ದರು.
ಇದೀಗ ಅಷ್ಟೂ ಮಂದಿ ಖೈದಿಗಳಿಗೆ ಮುಕ್ತರಾಗುವ ಅವಕಾಶ ಸಿಕ್ಕಿತ್ತು. ಅದರಲ್ಲಿ 9 ಖೈದಿಗಳು ಪೆರೋಲ್ ಬೇಡ ಎಂದು ಜೈಲಲ್ಲೆ ಉಳಿದಿದ್ದಾರೆ. ಅವರಿಗೆ ಹೊರಗೆ ಕೊರೊನಾ ಭಯದ ಜೊತೆಗೆ ಕೊರೊನಾ ಸಂದರ್ಭದಲ್ಲಿ ಏನು ಮಾಡೋದು? ಅಂತಾನೂ ಆಲೋಚಿಸಿ ಜೈಲಲ್ಲೆ ಸೇಫ್ ಆಗಿ ಉಳಿದುಕೊಂಡಿದ್ದಾರೆ ಆ ನವ ಕೈದಿಗಳು! ಸದ್ಯ 54 ಮಂದಿ ಪೆರೋಲ್ ನಲ್ಲಿ ಜೈಲಿನಿಂದ ಹೊರಹೋಗಿದ್ದಾರೆ ಎಂದು ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ದಿವ್ಯಶ್ರೀ ಟಿವಿ9 ಗೆ ಮಾಹಿತಿ ನೀಡಿದ್ದಾರೆ. ಸದ್ಯ ಕೈದಿಗಳನ್ನು ಜೈಲಿನಿಂದ ಹೊರಗೆ ಕಳುಹಿಸಿ, ಸೇಫ್ ಆದ್ರೆ ಸಾಕಪ್ಪಾ ಅಂತಿದ್ದ ಕಾರಾಗೃಹದ ಸಿಬ್ಬಂದಿಗೆ ಇದೀಗ ಆತಂಕ ಮುಂದುವರಿದಿದೆ.
(despite getting parole 9 prisoners decided to stay back in mysore jail)
ಕಾರಾಗೃಹದಲ್ಲಿನ ಕೈದಿಗಳಿಗೆ ಕೊರೊನಾ ಸೊಂಕು; ಚಿಕ್ಕಬಳ್ಳಾಪುರ ಜೈಲು ಅಧಿಕಾರಿಗಳಲ್ಲಿ ಹೆಚ್ಚಿದ ಆತಂಕ
Published On - 11:43 am, Thu, 10 June 21