ಕೈಗಾರಿಕೆಗಳನ್ನು ಆರಂಭಿಸಲು ಈಗ ಆಕ್ಸಿಜನ್ ಕೊರತೆ.. ಕೈಗಾರಿಕೆ ಮುಚ್ಚುವ ಆತಂಕ ವ್ಯಕ್ತಪಡಿಸಿದ ಅಧ್ಯಕ್ಷ ಪ್ರಕಾಶ್

TV9kannada Web Team

TV9kannada Web Team | Edited By: sandhya thejappa

Updated on: Jun 10, 2021 | 11:20 AM

ಲಾಕ್ಡೌನ್ಗೂ ಮುನ್ನ ಕೈಗಾರಿಕೆಗಳಿಗೆ ಪೂರೈಕೆಯಾಗುತ್ತಿದ್ದ ಆಕ್ಸಿಜನ್ಗಳನ್ನ ಕೊರೊನಾ ಸೋಂಕಿತರ ಅವಶ್ಯಕತೆಗೆ ಸರ್ಕಾರ ನೀಡಿತ್ತು. ಈ ಪರಿಸ್ಥಿತಿ ಸುಧಾರಿಸುವ ತನಕ ಕೈಗಾರಿಕೆಗಳಿಗೆ ಆಕ್ಸಿನ್ ಪೂರೈಕೆ ಮಾಡದಂತೆ ಸರ್ಕಾರ ತಾಕೀತು ಮಾಡಿತ್ತು. ಪೀಣ್ಯ ಕೈಗಾರಿಕಾ ಕ್ಷೇತ್ರದಲ್ಲಿನ 2000ಕ್ಕೂ ಅಧಿಕ ಕೈಗಾರಿಕೆಗಳು ಆಕ್ಸಿಜನ್ ಇಲ್ಲದೆ ಕಾರ್ಯ ನಿರ್ವಹಿಸುವುದಿಲ್ಲ.

ಕೈಗಾರಿಕೆಗಳನ್ನು ಆರಂಭಿಸಲು ಈಗ ಆಕ್ಸಿಜನ್ ಕೊರತೆ.. ಕೈಗಾರಿಕೆ ಮುಚ್ಚುವ ಆತಂಕ ವ್ಯಕ್ತಪಡಿಸಿದ ಅಧ್ಯಕ್ಷ ಪ್ರಕಾಶ್
ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಕಾಶ್

ಬೆಂಗಳೂರು: ಮಹಾಮಾರಿ ಕೊರೊನಾ ಸಮಯದಲ್ಲಿ ಜೀವದ ಉಳಿವಿಗಾಗಿ ಆಕ್ಸಿಜನ್ ನೀಡಿತ್ತಿದ್ದವವರಿಗೆ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಅಂದರೆ ಕೊವಿಡ್ ಸಂದರ್ಭದಲ್ಲಿ ಸೋಂಕಿತರ ಚಿಕಿತ್ಸೆಗೆಂದು ಕೈಗಾರಿಕೆಗಳು ಆಮ್ಲಜನಕ ಒದಗಿಸಿದ್ದವು. ಆದರೆ ಇದೀಗ ಕೈಗಾರಿಕೆ ಓಪನ್ ಆದ್ರು ಸಹ ಆಮ್ಲಜನಕದ ಕೊರತೆ ತಲೆದೂರಿದೆ. ಕೈಗಾರಿಕೆಗಳನ್ನು ಆರಂಭಿಸಲು ಈಗ ಆಕ್ಸಿಜನ್ ಕೊರತೆ ಉಂಟಾಗಿದೆ.

10,000ಕ್ಕೂ ಹೆಚ್ಚು ಕೈಗಾರಿಕೆಗಳಿರುವ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳನ್ನು ಆಮ್ಲಜನಕ ಕೊರತೆಯಿಂದ ಮುಚ್ಚುವ ಆತಂಕ ಎದುರಾಗಿದೆ. ಈ ಬಗ್ಗೆ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಕಾಶ್ ಆತಂಕ ವ್ಯಕ್ತಪಡಿಸಿದ್ದಾರೆ. ಕೈಗಾರಿಕೆಗಳಿಗೆ ಪೂರೈಸಲಾಗುತ್ತಿದ್ದ ಆಕ್ಸಿಜನ್ನನ್ನು ಸೋಂಕಿತರಿಗೆ ನೀಡಲಾಗಿದೆ. ಕೊರೊನಾ ಹಿನ್ನೆಲೆ ಸರ್ಕಾರ ಆಸ್ಪತ್ರೆಗಳಿಗೆ ಆಕ್ಸಿಜನ್ ನೀಡಿತ್ತು. ಈಗ ಆಸ್ಪತ್ರೆಗಳಿಗೆ ಸಾಕಾಗುವಷ್ಟು ಆಕ್ಸಿಜನ್ ಪೂರೈಕೆಯಾಗ್ತಿದೆ. ಆದರೆ ಕೈಗಾರಿಕೆಗಳಿಗೆ ಆಕ್ಸಿಜನ್ ನೀಡಲಾಗಿಲ್ಲ. ಆಕ್ಸಿಜನ್ ಇಲ್ಲದಿದ್ದರೆ 2000ಕ್ಕೂ ಹೆಚ್ಚು ಕೈಗಾರಿಕೆಗಳು ಸ್ಥಗಿತವಾಗಲಿವೆ. ಹೀಗಾಗಿ ಕೈಗಾರಿಕೆಗಳಿಗೆ ಆಕ್ಸಿಜನ್ ನೀಡುವಂತೆ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಕಾಶ್ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿ

ನಾವೆಲ್ಲರೂ ಜೀವ ಮತ್ತೆ ಜೀವನದ ನಡುವೆ ಹೋರಾಡ್ತಿದ್ದೀವಿ. ಲಾಕ್ಡೌನ್ಗೂ ಮುನ್ನ ಕೈಗಾರಿಕೆಗಳಿಗೆ ಪೂರೈಕೆಯಾಗುತ್ತಿದ್ದ ಆಕ್ಸಿಜನ್ಗಳನ್ನ ಕೊರೊನಾ ಸೋಂಕಿತರ ಅವಶ್ಯಕತೆಗೆ ಸರ್ಕಾರ ನೀಡಿತ್ತು. ಈ ಪರಿಸ್ಥಿತಿ ಸುಧಾರಿಸುವ ತನಕ ಕೈಗಾರಿಕೆಗಳಿಗೆ ಆಕ್ಸಿನ್ ಪೂರೈಕೆ ಮಾಡದಂತೆ ಸರ್ಕಾರ ತಾಕೀತು ಮಾಡಿತ್ತು. ಪೀಣ್ಯ ಕೈಗಾರಿಕಾ ಕ್ಷೇತ್ರದಲ್ಲಿನ 2000ಕ್ಕೂ ಅಧಿಕ ಕೈಗಾರಿಕೆಗಳು ಆಕ್ಸಿಜನ್ ಇಲ್ಲದೆ ಕಾರ್ಯ ನಿರ್ವಹಿಸುವುದಿಲ್ಲ. ಸದ್ಯ ಆಸ್ಪತ್ರೆಗಳಿಗೆ ಸಾಕಾಗುವಷ್ಟು ಆಮ್ಲಜನಕ ಪೂರೈಕೆಯಾಗುತ್ತಿದ್ದು ಕೈಗಾರಿಕೆಗಳಿಗೆ ಆಕ್ಸಿಜನ್ ನೀಡಿ ಎಂದು ಪ್ರಕಾಶ್ ಮನವಿ ಮಾಡಿಕೊಂಡಿದ್ದಾರೆ.

ಕೈಗಾರಿಕೆಗಳು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬಲ್ಲದು. ಆದರೆ ಇದೀಗ ಒಂದು ವೇಳೆ ಲಾಕ್ಡೌನ್ ತೆರವುಗೊಂಡರು ಸಹ ಆಕ್ಸಿಜನ್ ಇಲ್ಲದೆ ಕೈಗಾರಿಕೆಗಳು ಕೆಲಸ ನಿರ್ವಹಿಸಲು ಸಾಧ್ಯವಿಲ್ಲದಂತಾಗಿದೆ ಎಂದು ಈ ಬಗ್ಗೆ ಟಿವಿ9 ಗೆ ಸಿ.ಪ್ರಕಾಶ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೊರೊನಾ ಲಸಿಕೆ ಪಡೆಯಲು ಹೋದಾಗ ಸೂಜಿಗೆ ಹೆದರಿ ನೆಲಕ್ಕುರುಳಿದ ವ್ಯಕ್ತಿ: ವಿಡಿಯೋ ವೈರಲ್

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada