‘ನೋ ವ್ಯಾಕ್ಸಿನ್ ನೋ ಶಾಪ್ ಓಪನ್’ ಬಾಗಲಕೋಟೆ ಡಿಸಿಯಿಂದ ವಿನೂತನ ಪ್ಲ್ಯಾನ್
ಅನ್‌ಲಾಕ್ ಬಳಿಕವೂ ಕೊವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದು ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಅಂಗಡಿ ತೆರೆಯಲು ಅವಕಾಶ ನೀಡಲಾಗುತ್ತೆ ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ. ದಿನಸಿ ಅಂಗಡಿ, ಹೋಟೆಲ್, ಬಾರ್, ರೆಸ್ಟೊರೆಂಟ್, ಎಲೆಕ್ಟ್ರಿಕ್ ಅಂಗಡಿ, ಸಲೂನ್, ಬೇಕರಿ, ಬಟ್ಟೆ ಅಂಗಡಿ ಸೇರಿದಂತೆ ಎಲ್ಲ ಅಂಗಡಿಗಳ ಮಾಲೀಕರಿಗೆ ಈ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಬಾಗಲಕೋಟೆ: ಕೊರೊನಾ ನಿಯಂತ್ರಣಕ್ಕೆ ಬಾಗಲಕೋಟೆ ಡಿಸಿ ಹೊಸ ಪ್ಲ್ಯಾನ್ ಮಾಡಿದ್ದಾರೆ. ‘ನೋ ವ್ಯಾಕ್ಸಿನ್ ನೋ ಶಾಪ್ ಓಪನ್’ ಎಂಬ ನಿಯಮವನ್ನು ಬಾಗಲಕೋಟೆ ಡಿಸಿ ಕ್ಯಾಪ್ಟನ್ ರಾಜೇಂದ್ರ ಕೈಗೊಂಡಿದ್ದಾರೆ. ಈ ಮೂಲಕ ಜನರಿಗೆ ಲಸಿಕೆ ಹಾಕಿಸುವ ಗುರಿಯನ್ನು ಹೊಂದಿದ್ದಾರೆ.
ಅನ್‌ಲಾಕ್ ಬಳಿಕವೂ ಕೊವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದು ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಅಂಗಡಿ ತೆರೆಯಲು ಅವಕಾಶ ನೀಡಲಾಗುತ್ತೆ ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ. ದಿನಸಿ ಅಂಗಡಿ, ಹೋಟೆಲ್, ಬಾರ್, ರೆಸ್ಟೊರೆಂಟ್, ಎಲೆಕ್ಟ್ರಿಕ್ ಅಂಗಡಿ, ಸಲೂನ್, ಬೇಕರಿ, ಬಟ್ಟೆ ಅಂಗಡಿ ಸೇರಿದಂತೆ ಎಲ್ಲ ಅಂಗಡಿಗಳ ಮಾಲೀಕರಿಗೆ ಈ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಅಂಗಡಿ ಮಾಲೀಕರು, ಅಲ್ಲಿ ಕೆಲಸ ಮಾಡುವವರು ಎಲ್ಲರೂ ಕೊವಿಡ್ ಲಸಿಕೆಯನ್ನು ಹಾಕಿಸಿಕೊಂಡಿರಬೇಕು. ಲಸಿಕೆ ಹಾಕಿಸಿಕೊಳ್ಳದಿದ್ದರೆ ಅಂಗಡಿ ತೆರೆಯಲು ಅವಕಾಶವಿಲ್ಲ.
ಒಂದು ವೇಳೆ ಲಸಿಕೆ ಪಡೆಯದೆ ಅಂಗಡಿ ತೆರೆದರೆ ಅಂಗಡಿ ಬಂದ್ ಮಾಡಿಸಲಾಗುವುದು. ಲಸಿಕೆ ಪಡೆದಿರುವ ಬಗ್ಗೆ ಮಾಲೀಕರು ದಾಖಲೆ ತೋರಿಸಬೇಕು. ಅನ್ಲಾಕ್ಗೂ ಮುನ್ನ ಆಧ್ಯತೆ ಮೇರೆಗೆ ಇಂತಹ ವರ್ಗದವರಿಗೆ ಲಸಿಕೆ ಪಡೆಯಲು ಅನುಕೂಲ ಕಲ್ಪಿಸುತ್ತೇವೆ. ಅಂಗಡಿ ಮಾಲೀಕರು ಜನರೊಂದಿಗೆ ನಿಕಟ ಸಂಪರ್ಕ ಹಿನ್ನೆಲೆಯಲ್ಲಿ ಲಸಿಕೆ ಪಡೆದರೆ ಮಾತ್ರ ಅವರಿಗೆ ಅನುಮತಿ ನೀಡಲಾಗುತ್ತೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಸೂಚಿಸಿದ್ದಾರೆ.
ಇದನ್ನೂ ಓದಿ: Coronavirus Cases in India: ಸತತ ಮೂರನೇ ದಿನ 1 ಲಕ್ಷಕ್ಕಿಂತ ಕಡಿಮೆ ಹೊಸ ಕೊವಿಡ್ ಪ್ರಕರಣ, 6148 ಮಂದಿ ಸಾವು