ನಮ್ಮ ಜವಾಬ್ದಾರಿ ಕೇವಲ ಡ್ರಗ್ ಪೆಡ್ಲರ್​ಗಳ ಬಂಧನವಲ್ಲ, ಮಾದಕ ವಸ್ತು ಜಾಲ ನಿರ್ಮೂಲನೆ ಮಾಡಲು ನಾವು ಸಿದ್ಧ; ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್

| Updated By: sandhya thejappa

Updated on: Jun 26, 2021 | 12:25 PM

ಶಾಲಾ, ಕಾಲೇಜುಗಳಲ್ಲಿ ಡ್ರಗ್ಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಗಳನ್ನು ಪೊಲೀಸರು ಮಾಡಲಿದ್ದಾರೆ. ಮುಂದಿನ ವರ್ಷಗಳಲ್ಲಿಯೂ ಇದೇ ರೀತಿ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಮುಂದುವರಿಸುತ್ತೇವೆ ಎಂದು ಪ್ರವೀಣ್ ಸೂದ್ ತಿಳಿಸಿದರು.

ನಮ್ಮ ಜವಾಬ್ದಾರಿ ಕೇವಲ ಡ್ರಗ್ ಪೆಡ್ಲರ್​ಗಳ ಬಂಧನವಲ್ಲ, ಮಾದಕ ವಸ್ತು ಜಾಲ ನಿರ್ಮೂಲನೆ ಮಾಡಲು ನಾವು ಸಿದ್ಧ; ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್
ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್
Follow us on

ಬೆಂಗಳೂರು: ಲಾಕ್​ಡೌನ್​ನಲ್ಲಿ ಮಾತ್ರ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಡೆದಿಲ್ಲ. ಪ್ರತಿ ಬಾರಿಯೂ ಡ್ರಗ್ಸ್ ವಿರುದ್ಧ ಸಮರ ಮಾಡುತ್ತಿದ್ದೇವೆ ಎಂದು ಹೇಳಿಕೆ ನೀಡಿದ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್, ನಮ್ಮ ಜವಾಬ್ದಾರಿ ಕೇವಲ ಡ್ರಗ್ ಪೆಡ್ಲರ್​ಗಳ ಬಂಧನವಲ್ಲ. ಮಾದಕ ವಸ್ತು ಜಾಲ ನಿರ್ಮೂಲನೆ ಮಾಡಲು ನಾವು ಸಿದ್ಧರಿದ್ದೇವೆ ಎಂದು ಅಭಿಪ್ರಾಯಪಟ್ಟರು. ಇಡೀ ಡ್ರಗ್ಸ್ ಸಪ್ಲೈ ಚೈನ್ ಬಯಲಿಗೆ ಎಳೆಯುವ ಕೆಲಸ ಮಾಡಬೇಕಿದೆ ಮತ್ತು ಮಾಡಲಾಗುತ್ತಿದೆ. ಜೊತೆಗೆ ಜಪ್ತಿಯಾಗುವ ಮಾದಕ ವಸ್ತು, ಆರೋಪಿಗಳ ಬಗ್ಗೆ ವಿಶೇಷ ಗಮನ ಹರಿಸಲಾಗುವುದು ಎಂದು ತಿಳಿಸಿದ್ದಾರೆ.

ಶಾಲಾ, ಕಾಲೇಜುಗಳಲ್ಲಿ ಡ್ರಗ್ಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಗಳನ್ನು ಪೊಲೀಸರು ಮಾಡಲಿದ್ದಾರೆ. ಮುಂದಿನ ವರ್ಷಗಳಲ್ಲಿಯೂ ಇದೇ ರೀತಿ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಮುಂದುವರಿಸುತ್ತೇವೆ ಎಂದು ಪ್ರವೀಣ್ ಸೂದ್ ತಿಳಿಸಿದರು.

ಮಾದಕ ವಸ್ತು ನಾಶ
ಇಂದು (ಜೂನ್ 26) ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಹಿನ್ನೆಲೆ ರಾಯಚೂರು ಜಿಲ್ಲೆಯಲ್ಲಿ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ. ಡಿಜಿ ಮತ್ತು ಐಜಿಪಿ ಸೂಚನೆಯ ಮೇರೆಗೆ ಸುಮಾರು 281 ಕೆ.ಜಿ ಗಾಂಜಾ ಸೇರಿ ಇತರೆ ಮಾದಕ ವಸ್ತುವನ್ನು ನಾಶ ಮಾಡಲಾಗಿದೆ. ಲಿಂಗಸುಗೂರು, ದೇವದುರ್ಗ ಹಾಗೂ ಸಿಂಧನೂರು ಭಾಗದಲ್ಲಿ ಹೆಚ್ಚು ಗಾಂಜಾ ಬೆಳೆಯಲಾಗುತ್ತಿದೆ. ನಾಲ್ಕು ವರ್ಷದ ಹಳೆಯ ಸ್ಟಾಕ್ ಸದ್ಯ ಡಿಸ್ಪೋಸಲ್ ಮಾಡಲಾಗಿದೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕಂ ತಿಳಿಸಿದ್ದಾರೆ.

ಬೆಂಗಳೂರು ಸಿಟಿ ಸೇರಿದಂತೆ ಐದು ಜಿಲ್ಲೆಯ ವಿವಿಧ ಪ್ರಕರಣಗಳಲ್ಲಿ ಸಂಗ್ರಹವಾಗಿದ್ದ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ. 7 ಟನ್ ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳು ಸುಟ್ಟು ಭಸ್ಮಗೊಳಿಸಲಾಗಿದೆ. ಬೆಂಗಳೂರಿನ ಡಿಸಿಪಿಗಳು ಸೇರಿದಂತೆ ಐದು ಜಿಲ್ಲೆಯ ಎಸ್​ಪಿಗಳು ಹಾಗೂ ಡ್ರಗ್ ಕಮಿಟಿ ಪೊಲೀಸ್ ಅಧಿಕಾರಿಗಳು ಡ್ರಗ್ ನಾಶದ ವೇಳೆ ಭಾಗಿಯಾಗಿದ್ದರು. ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಡ್ರಗ್ ನಾಶ ಮಾಡಲಾಗಿದೆ. ಕಂಪ್ಲೀಟ್ ಯಾಂತ್ರಿಕ ವ್ಯವಸ್ಥೆಯಲ್ಲಿ ರಾಮ್ಕಿ ಸಿಬ್ಬಂದಿ ಸಹಾಯದಿಂದ ನಾಶಪಡಿಸಲಾಗಿದೆ. 2020-21ನೇ ಸಾಲಿನಲ್ಲಿ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಒಟ್ಟು 4,066 ಪ್ರಕರಣಗಳಲ್ಲಿ 5,291 ಜನರನ್ನು ಬಂಧಿಸಲಾಗಿದೆ.

ನಾಶಪಡಿಸಲು ಇಟ್ಟಿರುವ ಡ್ರಗ್ಸ್

ಇದನ್ನೂ ಓದಿ

ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳು ಹೆಚ್ಚಳ; ಕಲಬುರಗಿಗೆ ಬರುವವರಿಗೆ ಆರ್​ಟಿ​ಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ

ಗುಜರಾತ್​ನ ನರ್ಮದಾ ನದಿಯಲ್ಲಿ ಮೊಸಳೆಗಳಿಗೆ ಆಹಾರವಾದ ವ್ಯಕ್ತಿಯ ಶವ: ವಿಡಿಯೋ ವೈರಲ್

(DG and IGP Praveen Sood says Our responsibility is not simply the arrest of drug peddlers)