ದೂರಿಗೆ ಪ್ರತಿದೂರು: ಅವಳನ್ನು ಟೆಚ್ ಮಾಡಿದ್ರೆ ನನ್ನ ತಾಯಿಯನ್ನ ಟಚ್ ಮಾಡಿದಂತೆ: ಶಾಸಕ ವಿನಯ್ ಕುಲಕರ್ಣಿ

| Updated By: ರಮೇಶ್ ಬಿ. ಜವಳಗೇರಾ

Updated on: Oct 09, 2024 | 4:44 PM

ಧಾರವಾಡ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ರೈತ ನಾಯಕಿ ಎಂದು ಗುರುತಿಸಿಕೊಂಡಿರುವ ಮಹಿಳೆಯೊಬ್ಬಳು ವಿನಯ್ ಕುಲಕರ್ಣಿ ವಿರುದ್ಧ ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ವಿನಯ್​ ಕುಲಕರ್ಣಿ ಸಹ ಮಹಿಳೆ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಅಲ್ಲದೇ ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.

ದೂರಿಗೆ ಪ್ರತಿದೂರು: ಅವಳನ್ನು ಟೆಚ್ ಮಾಡಿದ್ರೆ ನನ್ನ ತಾಯಿಯನ್ನ ಟಚ್ ಮಾಡಿದಂತೆ: ಶಾಸಕ ವಿನಯ್ ಕುಲಕರ್ಣಿ
ಶಾಸಕ ವಿನಯ್ ಕುಲಕರ್ಣಿ
Follow us on

ಬೆಂಗಳೂರು, (ಅಕ್ಟೋಬರ್ 09): ತಮ್ಮ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ಮಹಿಳೆ ವಿರುದ್ಧವೇ ಶಾಸಕ ವಿನಯ್ ಕುಲಕರ್ಣಿ ಪ್ರತಿದೂರು ದಾಖಲಿಸಿದ್ದಾರೆ. ಅಧಿಕಾರಿಗಳು, ರಾಜಕೀಯ ನಾಯಕರಿಗೆ ಬ್ಲ್ಯಾಕ್​ಮೇಲ್​ ಮಾಡಿದ್ದಾರೆ . ಸಂತ್ರಸ್ತೆ ಸಂಚು ರೂಪಿಸಿ ಮಾನಹಾನಿ ಮಾಡಿದ್ದಾರೆಂದು ದೂರು ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ತಮ್ಮ ಮೇಲಿನ ಅತ್ಯಾಚಾರ ಆರೋಪ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ವಿನಯ್ ಕುಲಕರ್ಣಿ, ನಾನು ಅವಳನ್ನು ಟೆಚ್ ಮಾಡಿದರೂ ನನ್ನ ತಾಯಿಯನನ್ನ ಟಚ್ ಮಾಡಿದಂತೆ. ಇಷ್ಟೇ ಹೇಳುತ್ತೇನೆ ಎಂದು ಹೇಳುವ ಮೂಲಕ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.

ತಮ್ಮ ಮೇಲಿನ ಅತ್ಯಾಚಾರ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ವಿನಯ್ ಕುಲಕರ್ಣಿ, ನನ್ನ ವಿರುದ್ಧ ಮಹಿಳೆಯೊಬ್ಬರು ಕಿರುಕುಳ ಆರೋಪ ಹೊರಿಸಿದ್ದಾರೆ. ನಾನು ಅವಳನ್ನು ಟೆಚ್ ಮಾಡಿದರೂ ನನ್ನ ತಾಯಿಯನನ್ನ ಟಚ್ ಮಾಡಿದಂತೆ. ನಿಮಗೆ ಇಷ್ಟೇ ಹೇಳುತ್ತೇನೆ. ಈ ವಿಚಾರ ಏನಂದ್ರೆ ಒಂದು ವಿಡಿಯೋ ಕಾಲ್ ಮಾಡಿದ್ದು, ಆ ವಿಡಿಯೋ ಕಾಲ್ ಇಟ್ಕೊಂಡು ಇಷ್ಟೊಂದು ಆರೋಪ ಮಾಡಿದ್ದಾರೆ. ಅದೆಲ್ಲ ಸತ್ಯಕ್ಕೆ ದೂರವಾಗಿದೆ. ನಾನು ರಾಜಕೀಯದಲ್ಲಿ ಇಷ್ಟು ವರ್ಷಗಳ ಕಾಲ ಇದ್ದೇನೆ. ಕೆಲವು ಮಂದಿ ಹಿಂದೆಯಿಂದ ಮಾಡಿಸುತ್ತಿರಬಹುದು. ಯಾಕಂದ್ರೆ ಹಲವಾರು ಬದಲಾವಣೆ ಆಗುವ ಕಾರಣದಿಂದ. ನನ್ನದೂ ಒಂದು ಕೇಸ್ ನಡೆದಿದೆ. ಸಾಕ್ಷಿಗಳ ಮೇಲೆ ಇಂಪ್ಯಾಕ್ಟ್ ಮಾಡಿಸುವ ಇದು ಷಡ್ಯಂತ್ರ. ನಾನಂತೂ ಈ ವಿಚಾರದಲ್ಲಿ ‌ಸ್ಪಷ್ಟವಾಗಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಸಾಮಾಜಿಕ ಕಾರ್ಯಕರ್ತೆಗೆ ಲೈಂಗಿಕ ದೌರ್ಜನ್ಯ: ವಿನಯ್ ಕುಲಕರ್ಣಿ ವಿರುದ್ಧ ಎಫ್​ಐಆರ್​

ಕೇವಲ ಎರಡು-ಮೂರು ಸಲ ನಡೆದ ವಿಡಿಯೊ ಕಾಲ್ ಸಂಭಾಷಣೆ ಇಟ್ಟುಕೊಂಡು ಹೀಗೆ ಆರೋಪ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು. ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಬದುಕಿದ್ದೇನೆ. ಇದರಲ್ಲಿ ನನ್ನದೇನೂ ಪಾತ್ರ ಇಲ್ಲ. ನಾನೂ ದೂರು ಕೊಟ್ಟಿದ್ದೇನೆ. ಈ ಬಗ್ಗೆ ತನಿಖೆ ಆಗಲಿ, ಸತ್ಯಾಸತ್ಯತೆ ಹೊರಬರಲಿ ಎಂದಿದ್ದಾರೆ.

ದೂರಿಗೆ ಪ್ರತಿದೂರು

ವಿನಯ್ ಕುಲಕರ್ಣಿ ಅವರ ದೂರಿನ ಮೇರೆಗೆ ಬೆಂಗಳೂರಿನ ಸಂಜಯನಗರ ಪೊಲೀಸರು ಖಾಸಗಿ ಕನ್ನಡ ಸುದ್ದಿ ವಾಹಿನಿಯ ಮಾಲೀಕ ಮತ್ತು ರೈತ ನಾಯಕಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 3 (5), 308 (2), 61 (2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಖಾಸಗಿ ಸುದ್ದಿ ವಾಹಿನಿ ಮಾಲೀಕ A1 ಮತ್ತು ಮಹಿಳೆ ಎರಡನೇ ಆರೋಪಿಯಾಗಿದ್ದಾರೆ.

2022ರಲ್ಲಿ ಹಾವೇರಿ ಜಿಲ್ಲೆಯ ಮಹಿಳೆಯ ಪರಿಚಯವಾಗಿತ್ತು ಎಂದು ವಿನಯ್ ಕುಲಕರ್ಣಿ ಹೇಳಿಕೆ ನೀಡಿದ್ದಾರೆ. ತಾನು ರೈತ ಪರ ಕಾರ್ಯಕರ್ತೆ ಎಂದು ಹೇಳಿಕೊಂಡು ಆಕೆ ಕರೆಗಳನ್ನು ಮಾಡಿದ್ದಳು. ಆದರೆ, ಖಾಸಗಿ ವಾಹಿನಿಯೊಂದರಲ್ಲಿ ಸುಲಿಗೆ ಸಂತ್ರಸ್ತರ ಕುರಿತು ಕಾರ್ಯಕ್ರಮವಿದ್ದು, ಆಕೆಯ ವಿರುದ್ಧದ ವಂಚನೆ, ಬ್ಲಾಕ್‌ಮೇಲ್ ಪ್ರಕರಣಗಳ ಬಗ್ಗೆ ತಿಳಿದ ನಂತರ ನಾನು ಅವಳ ಕರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ ಎಂದು ವಿನಯ್ ಕುಲಕರ್ಣಿ ದೂರಿನಲ್ಲಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ