Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲ್ಡೀವ್ಸ್ ಅಧ್ಯಕ್ಷ ಮೊಹ್ಮದ್ ಮೊಯಿಝು ಗೌರವಾರ್ಥ ಔತಣಕೂಟಕ್ಕೆ ಸಿಎಂರನ್ನು ಆಹ್ವಾನಿಸಿದ ರಾಜ್ಯಪಾಲರು

ಮಾಲ್ಡೀವ್ಸ್ ಅಧ್ಯಕ್ಷ ಮೊಹ್ಮದ್ ಮೊಯಿಝು ಗೌರವಾರ್ಥ ಔತಣಕೂಟಕ್ಕೆ ಸಿಎಂರನ್ನು ಆಹ್ವಾನಿಸಿದ ರಾಜ್ಯಪಾಲರು

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 09, 2024 | 4:54 PM

ಅಧ್ಯಕ್ಷ ಮೊಹ್ಮದ್ ಮೊಯಿಝು ಅವರನ್ನು ಬೀಳ್ಕೊಟ್ಟ ನಂತರ ಸಿದ್ದರಾಮಯ್ಯರನ್ನು ಕಳಿಸಲು ಮುಖ್ಯಮಂತ್ರಿಯವರ ಕಾರಿನವರೆಗೆ ಬಂದ ರಾಜ್ಯಪಾಲರು ಬಹಳ ಆತ್ಮೀಯ ಮತ್ತು ಅಹ್ಲಾದಕರ ರೀತಿಯಲ್ಲಿ ಮಾತಾಡಿದರು. ಮುಖ್ಯಮಂತ್ರಿಯವರೊಂದಿಗೆ ಸಚಿವ ಡಾ ಎಂಸಿ ಸುಧಾಕರ್ ನಿಂತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಬೆಂಗಳೂರು: ನಗರಕ್ಕೆ ಬೇಟಿ ನೀಡಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹ್ಮದ್ ಮೊಯಿಝು ಅವರ ಗೌರವಾರ್ಥ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ ಏರ್ಪಡಿಸಿದ್ದ ಔತಣಕೂಟದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಆಹ್ವಾನಿತರಾಗಿದ್ದರು. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವಿನ ಸಂಬಂಧ ಎಂದಿನಂತಿಲ್ಲದಿದ್ದರೂ ಇಬ್ಬರು ಗಣ್ಯರು ಎಲ್ಲವನ್ನು ಮರೆತು ಆತ್ಮೀಯತೆಯಿಂದ ವ್ಯವಹರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಒತ್ತಡ ಹಾಕಿದ್ದ ಕಾಂಗ್ರೆಸ್ ನಾಯಕರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿರುಗೇಟು