ದೆಹಲಿಯಲ್ಲೇ ಇದ್ದು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸುವಂತೆ ಬಿಜೆಪಿ ನಾಯಕರಲ್ಲಿ ಮನವಿ ಮಾಡುತ್ತಿರುವ ಶಾಸಕ ಅರವಿಂದ ಬೆಲ್ಲದ್

| Updated By: ಸಾಧು ಶ್ರೀನಾಥ್​

Updated on: Jul 23, 2021 | 11:19 AM

Dharwad MLA Arvind Bellad: ಇಂದು ದೆಹಲಿಯ ಖಾಸಗಿ ಹೊಟೇಲ್ ನಲ್ಲಿ ವಾಸ್ತವ್ಯವಿರುವ ಬೆಲ್ಲದ್ ವರಿಷ್ಠರನ್ನು ಭೇಟಿ ಮಾಡಲು ಪ್ರಯತ್ನ ಮುಂದುವರೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್ ಭೇಟಿಗೆ ಪ್ರಯತ್ನ ಮುಂದುವರೆಸಿದ್ದಾರೆ.

ದೆಹಲಿಯಲ್ಲೇ ಇದ್ದು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸುವಂತೆ ಬಿಜೆಪಿ ನಾಯಕರಲ್ಲಿ ಮನವಿ ಮಾಡುತ್ತಿರುವ ಶಾಸಕ ಅರವಿಂದ ಬೆಲ್ಲದ್
ಅರವಿಂದ ಬೆಲ್ಲದ್
Follow us on

ನವದೆಹಲಿ: ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸೂಚನೆ ಸಿಗುತ್ತಿದ್ದಂತೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳು ಅಲರ್ಟ್ ಆಗಿದ್ದಾರೆ. ಸಿಎಂ ಹುದ್ದೆ ಆಕಾಂಕ್ಷಿ ಲಿಂಗಾಯತ ನಾಯಕ ಅರವಿಂದ ಬೆಲ್ಲದ್ ಹೆಸರು ಮತ್ತೆ ಮುಖ್ಯವಾಹಿನಿಗೆ ಬಂದಿದೆ. ನಿನ್ನೆಯಿಂದ ದೆಹಲಿಯಲ್ಲಿರುವ ಶಾಸಕ ಅರವಿಂದ ಬೆಲ್ಲದ್ ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತಿದ್ದಾರೆ.‌ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸುವಂತೆ ಹೈಕಮಾಂಡ್ ನಾಯಕರಲ್ಲಿ ಮನವಿ ಮಾಡುತ್ತಿದ್ದಾರೆ.

ಗುರುವಾರ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅರವಿಂದ ಬೆಲ್ಲದ್ ಅವರು ಸಿ‌.ಟಿ. ರವಿಯವರನ್ನು ಭೇಟಿಯಾಗಿರುವ ಬಗ್ಗೆ ಮೂಲಗಳು ತಿಳಿಸಿವೆ. ಬೆಂಗಳೂರಿನಿಂದ ನಿನ್ನೆ ವಾರಾಣಾಸಿಗೆ ತೆರಳಿದ್ದ ಶಾಸಕ ಅರವಿಂದ ಬೆಲ್ಲದ್ ವಿಶ್ವನಾಥನ ದರ್ಶನ ಪಡೆದು ಬಂದಿದ್ದಾರೆ. ಜತೆಗೆ ವಾರಾಣಾಸಿಯ ಜಂಗಮವಾಡಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಬೆಲ್ಲದ್ ವಾರಾಣಾಸಿಗೆ ಭೇಟಿ ನೀಡುವ ಒಂದು ದಿನ ಮೊದಲು ಮುರುಗೇಶ್ ನಿರಾಣಿ ಕೂಡ ಭೇಟಿ ನೀಡಿದ್ರು ವಿಶ್ವನಾಥನ ದರ್ಶನ ಪಡೆದಿದ್ದಾರೆ.

ಇಂದು ದೆಹಲಿಯ ಖಾಸಗಿ ಹೊಟೇಲ್ ನಲ್ಲಿ ವಾಸ್ತವ್ಯವಿರುವ ಬೆಲ್ಲದ್ ವರಿಷ್ಠರನ್ನು ಭೇಟಿ ಮಾಡಲು ಪ್ರಯತ್ನ ಮುಂದುವರೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್ ಭೇಟಿಗೆ ಪ್ರಯತ್ನ ಮುಂದುವರೆಸಿದ್ದಾರೆ. ಈ ಮಧ್ಯೆ, ಬಿಜೆಪಿ ನಾಯಕ, ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರನ್ನು ಅರವಿಂದ ಬೆಲ್ಲದ್ ಭೇಟಿಯಾಗಿದ್ದಾರೆ.

– ಹರೀಶ್‌, ಟಿವಿ ನೈನ್, ನವದೆಹಲಿ

ಮುಖ್ಯಮಂತ್ರಿ ಬದಲಾವಣೆ ಊಹಾಪೋಹ ಬೆನ್ನಲ್ಲಿ ಕಾಶಿ ವಿಶ್ವನಾಥನ ದರ್ಶನ ಪಡೆಯಲು ವಾರಣಾಸಿಗೆ ಭೇಟಿ ನೀಡಿದ ಅರವಿಂದ್ ಬೆಲ್ಲದ್

(Dharwad MLA Arvind Bellad perseus next cm of karnataka for himself in delhi)

Published On - 10:00 am, Fri, 23 July 21