ಮುಖ್ಯಮಂತ್ರಿ ಬದಲಾವಣೆ ಊಹಾಪೋಹ ಬೆನ್ನಲ್ಲಿ ಕಾಶಿ ವಿಶ್ವನಾಥನ ದರ್ಶನ ಪಡೆಯಲು ವಾರಣಾಸಿಗೆ ಭೇಟಿ ನೀಡಿದ ಅರವಿಂದ್ ಬೆಲ್ಲದ್

ಕಾಶಿ ವಿಶ್ವನಾಥನ ದರ್ಶನ ಪಡೆಯಲು ದೇಗುಲಕ್ಕೂ ತೆರಳಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಸ್ಥಾನ ಬದಲಾವಣೆ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಅರವಿಂದ್ ಬೆಲ್ಲದ್ ವಾರಾಣಸಿ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

ಮುಖ್ಯಮಂತ್ರಿ ಬದಲಾವಣೆ ಊಹಾಪೋಹ ಬೆನ್ನಲ್ಲಿ ಕಾಶಿ ವಿಶ್ವನಾಥನ ದರ್ಶನ ಪಡೆಯಲು ವಾರಣಾಸಿಗೆ ಭೇಟಿ ನೀಡಿದ ಅರವಿಂದ್ ಬೆಲ್ಲದ್
ಶಾಸಕ ಅರವಿಂದ ಬೆಲ್ಲದ್​

ಬೆಂಗಳೂರು: ಮುರುಗೇಶ್ ನಿರಾಣಿ ಬಳಿಕ ವಾರಣಾಸಿಗೆ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಭೇಟಿ ನೀಡಿದ್ದಾರೆ. ಕಾಶಿ ಜಗದ್ಗುರುಗಳನ್ನು ಭೇಟಿಯಾಗಿದ್ದ ಅರವಿಂದ್ ಬೆಲ್ಲದ್, ಕಾಶಿ ಸ್ವಾಮೀಜಿ ಆಶೀರ್ವಾದ ಪಡೆಯಲು ತೆರಳಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಅರವಿಂದ್ ಬೆಲ್ಲದ್ ಕಾಶಿ ಸ್ವಾಮೀಜಿ ಆಶೀರ್ವಾದ ಪಡೆಯಲು ಭೇಟಿ ನೀಡಿದ್ದಾರೆ. ಕಾಶಿ ವಿಶ್ವನಾಥನ ದರ್ಶನ ಪಡೆಯಲು ದೇಗುಲಕ್ಕೂ ತೆರಳಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಸ್ಥಾನ ಬದಲಾವಣೆ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಅರವಿಂದ್ ಬೆಲ್ಲದ್ ವಾರಾಣಸಿ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ವಿಚಾರ ಬಹಳಷ್ಟು ಬೆಳವಣಿಗೆಗಳಿಗೆ ಕಾರಣವಾಗಿದೆ. ಹಲವು ಮಠಾಧೀಶರು ಹಾಗೂ ರಾಜಕೀಯ ನಾಯಕರು ಸಿಎಂ ಪರ ಮಾತನಾಡಿದ್ದಾರೆ. ಮಲೆನಾಡು ವೀರಶೈವ ಮಠಾಧೀಶರ ಪರಿಷತ್ ಸಭೆ ಇಂದು ನಡೆದಿದೆ. ಶಿವಮೊಗ್ಗ ಜಿಲ್ಲೆಯ 21 ಮಠಾಧೀಶರು ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ‌ ನೇತೃತ್ವದಲ್ಲಿ ಯಡಿಯೂರಪ್ಪ ಪರ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬದಲಾವಣೆ ಚರ್ಚೆ ಸೂಕ್ತ ಅಲ್ಲ. ಸಿಎಂ ಯಡಿಯೂರಪ್ಪಗೆ ಪೂರ್ಣಾವಧಿ ಅಧಿಕಾರ ನೀಡಬೇಕು. ಇದು ಬಿಜೆಪಿಗೂ ಕೂಡ ಒಳ್ಳೆಯದು. ಎಲ್ಲ ಸಮಾಜಕ್ಕೂ ಅಭಿವೃದ್ಧಿ ದೃಷ್ಟಿಯಿಂದ ಕೊಡುಗೆ ನೀಡಿದ್ದಾರೆ ಎಂದು ಸಿಎಂ ಪರ ಶ್ರೀಶೈಲ‌ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ವೀರಶೈವ ಮಹಾಸಭಾ ಅಧ್ಯಕ್ಷ ‌ಶ್ಯಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಸಭೆ
ನಮ್ಮ ಸ್ಟ್ಯಾಂಡ್​ ಈಗಲೂ ಸಿಎಂ ಬಿಎಸ್​ವೈ ಪರ ಇದೆ. ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಪಕ್ಷ ಕಟ್ಟಿದವರು ಎಂದು ಬೆಂಗಳೂರಿನಲ್ಲಿ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ನಾವೇನು ಲಿಂಗಾಯತ ಸಮುದಾಯ ಸೆಳೆಯೋ ಪ್ರಯತ್ನ ಮಾಡುತ್ತಿಲ್ಲ. ಹೆಲಿಕಾಪ್ಟರ್ ಇದಾವೆ, ಬೆಂಜ್ ಕಾರ್ ಇದ್ದಾವೆ. ನನಗೇ ಇನ್ನೇನು ಬೇಕು. ಸಾಕಲ್ಲ ಜೀವನಮಾಡೋಕೆ. ನಾಯಕತ್ವ ಆಮೇಲೆ ನೊಡೋಣ ಅಂತಹ ಸಂದರ್ಭ ಬಂದರೆ ಎಂದು ಶಾಮನೂರು ಶಿವಶಂಕರಪ್ಪ ಅಧಿಕಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ವೀರಶೈವ ಮಹಾಸಭಾ ಅಧ್ಯಕ್ಷ ‌ಶ್ಯಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಮಹಸಭಾ ಸಭೆ ನಡೆಸಲಾಗಿದೆ. ಸಿಎಂ ಬದಲಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾ ಸಭೆಯನ್ನು ಬೆಂಗಳೂರಿನ ಸದಾಶಿವನಗರದಲ್ಲಿ ಕಚೇರಿಯಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಬಿಎಸ್​​ವೈರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸದಂತೆ ಪ್ರತಿಭಟನೆ ನಡೆಸಲಾಗಿದೆ. ತಾಲೂಕು ವೀರಶೈವ ಸಮಾಜದ ವತಿಯಿಂದ ಪ್ರತಿಭಟನೆ ನಡೆದಿದೆ. ಬಸವೇಶ್ವರ ವೃತ್ತದಲ್ಲಿ ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರಿಷ್ಠರ ವಿರುದ್ಧ ತಾಲೂಕು ವೀರಶೈವ ಸಮಾಜ ಆಕ್ರೋಶ ಹೊರಹಾಕಿದೆ.

ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಎಂದು ವಿಜಯೇಂದ್ರ ಹೇಳಿದ್ದಾರೆ
ಯಡಿಯೂರಪ್ಪಗೆ ವಯಸ್ಸಾಗಿದೆ ಎಂಬುದು ಸರಿಯಲ್ಲ. ಚುನಾವಣೆಗೆ ಹೋಗುವಾಗ ಅವರಿಗೆ ವಯಸ್ಸಾಗಿರಲಿಲ್ವೇ? ಆಗ ಸಿಎಂ ಯಡಿಯೂರಪ್ಪನವರನ್ನ ಬಿಡಬಹುದಿತ್ತಲ್ವೇ ಎಂದು ಯಡಿಯೂರಪ್ಪ ಪರ ಶ್ರೀಶೈಲ‌ ಚನ್ನಮಲ್ಲಿಕಾರ್ಜುನ ಶ್ರೀಗಳು ಹೇಳಿದ್ದಾರೆ. ಈಗೇಕೆ ಯಡಿಯೂರಪ್ಪನವರನ್ನ ಕೆಳಗಿಳಿಸಬೇಕು? ಮುಂದೆ ಯಾರು ಅನ್ನೋದು ಚರ್ಚೆ ಮಾಡಿಲ್ಲ. ಬಿಎಸ್​​ವೈರನ್ನ ಎರಡು ವರ್ಷ ಮುಂದುವರಿಸಬೇಕು ಎಂದು ಅವರು ಹೇಳಿದ್ದಾರೆ.

ಪಕ್ಷದ ಹಿತದೃಷ್ಟಿಯಿಂದ ಯಡಿಯೂರಪ್ಪ ಬದಲಾವಣೆ ಒಳ್ಳೆಯದಲ್ಲ. ಧರ್ಮ, ಆಧ್ಯಾತ್ಮಕ್ಕೆ ಅಷ್ಟೇ ಸೀಮಿತವಾಗಿರದೆ, ಜನರ ಹಿತ ಕಾಯೋದು ಕೂಡ ಮಠಾಧೀಶರ ಕರ್ತವ್ಯ ಆಗಿದೆ. ಹೀಗಾಗಿ ಮಠಾಧೀಶರು ಜನರ ಹಿತ ಕಾಯಲು ಬಂದಿದ್ದಾರೆ. ಮಠಾಧೀಶರು ರಾಜಕೀಯ ಮಾಡುವುದಕ್ಕೆ ಬಂದಿಲ್ಲ. ಸನ್ಯಾಸಿಗಳಾಗಿ ಉತ್ತರ ಪ್ರದೇಶದಲ್ಲಿ ಸಿಎಂ ಆಗಿದ್ದಾರೆ. ಮುಖಂಡರು ತಪ್ಪು ಮಾಡಿದಾಗ ತಿದ್ದಿದ ಉದಾಹರಣೆ ಇದೆ. ತಪ್ಪು ಮಾಡಿದಾಗ ಬುದ್ಧಿ ಹೇಳಿದ ಉದಾಹರಣೆಗಳಿವೆ. ತಮ್ಮ ವಿರುದ್ಧದ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಎಂದು ವಿಜಯೇಂದ್ರ ಹೇಳಿದ್ದಾರೆ ಎಂದು ಅಪ್ಪ-ಮಗನ ಪರವಾಗಿ ಸುದ್ದಿಗೋಷ್ಠಿಯಲ್ಲಿ ಶ್ರೀಶೈಲ ಚನ್ನಮಲ್ಲಿಕಾರ್ಜುನಶ್ರೀ ಮಾತನಾಡಿದ್ದಾರೆ.

ಪಕ್ಷ ಕಟ್ಟುವುದಕ್ಕೆ ಬಿ.ಎಸ್​.ಯಡಿಯೂರಪ್ಪ ಬೇಕು. ಆದರೆ ಅವರು ಸಿಎಂ ಆಗಿ ಮುಂದುವರಿಯೋದು ಬೇಡವಾ?
ಚುನಾವಣೆ ವೇಳೆ ಬಿ.ವೈ. ವಿಜಯೇಂದ್ರ ಬೇಕು. ಪಕ್ಷ ಗೆಲ್ಲಿಸುವಾಗ ಬಿ.ವೈ.ವಿಜಯೇಂದ್ರ ಬೇಕು. ವಿಜಯೇಂದ್ರ ಹಸ್ತಕ್ಷೇಪ ಸತ್ಯಕ್ಕೆ ದೂರವಾದ ಮಾತು ಎಂದು ಅಖಿಲ ವೀರಶೈವ ಯುವ ಘಟಕದ ಅಧ್ಯಕ್ಷ ಮಹಾಂತೇಶ್ ಎಂ. ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಕ್ಷ ಕಟ್ಟುವುದಕ್ಕೆ ಬಿ.ಎಸ್​.ಯಡಿಯೂರಪ್ಪ ಬೇಕು. ಆದರೆ ಅವರು ಸಿಎಂ ಆಗಿ ಮುಂದುವರಿಯೋದು ಬೇಡವಾ? ಮುಂದಿನ ಚುನಾವಣೆ ಕೂಡ ಯಡಿಯೂರಪ್ಪ ನೇತೃತ್ವದಲ್ಲೇ ಆಗಬೇಕು. ಆಗ ಮಾತ್ರ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಬೆಂಗಳೂರಲ್ಲಿ ಮಹಾಂತೇಶ್ ಎಂ. ಪಾಟೀಲ್ ಹೇಳಿದ್ದಾರೆ.

ಯಾವ ಕಾರಣಕ್ಕೂ ಸಿಎಂ ಬಿಎಸ್​ವೈ ಬದಲಾಯಿಸಬಾರದು. ನಾನು ಕೂಡ ಹೈಕಮಾಂಡ್ ನಾಯಕರನ್ನು ಭೇಟಿಯಾಗುವೆ. ಬಿಎಸ್​​​ವೈ ಬದಲಿಸದಂತೆ ವರಿಷ್ಠರ ಬಳಿ ಮನವಿ ಮಾಡುವೆ ಎಂದು ಬಿ.ಎಸ್. ಯಡಿಯೂರಪ್ಪ ಭೇಟಿ ಬಳಿಕ ಸಂಸದ ಜಿ.ಎಂ.ಸಿದ್ದೇಶ್ವರ್​ ತಿಳಿಸಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ನನಗೆ ಮಾಹಿತಿಯಿಲ್ಲ. ಸಿಎಂ ಬಿಎಸ್​ವೈ ಬದಲಾಯಿಸುವುದು ನಮಗೆ ಇಷ್ಟವಿಲ್ಲ. ಈ ವಿಚಾರದಲ್ಲಿ ಪಕ್ಷದ ವರಿಷ್ಠರ ನಿರ್ಧಾರವೇ ಅಂತಿಮ ಎಂದು ಕೆಐಎಬಿಯಲ್ಲಿ ಬಿಜೆಪಿ ಶಾಸಕ ರಘುಪತಿ ಭಟ್ ಹೇಳಿಕೆ ನೀಡಿದ್ದಾರೆ. ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್​ಪೋರ್ಟ್​​​ನಲ್ಲಿ ಅವರು ಮಾತನಾಡಿದ್ದಾರೆ.

ಇದನ್ನೂ ಓದಿ: BS Yediyurappa: ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಮುಂದುವರಿಕೆ; ಸಿಎಂ ಬದಲಾವಣೆ ಚರ್ಚೆ ಅನಗತ್ಯ: ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬದಲಾವಣೆ ವಿಚಾರ: ಕರ್ನಾಟಕ ರಾಜಕೀಯ ವಿಪ್ಲವದ ಬಗ್ಗೆ ಕೋಡಿಮಠದ ಶ್ರೀ ಭವಿಷ್ಯ

(BJP Leader Aravind Bellad visits Varanasi Kashi Vishwanatha Temple amid BJP Karnataka CM issue)

Click on your DTH Provider to Add TV9 Kannada