ನಕಲಿ ದಾಖಲೆ ತೋರಿಸಿ ಹಿಂದೂ ಯುವತಿಯೊಂದಿಗೆ ಮುಕಳೆಪ್ಪ ಮದ್ವೆ: ಈ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್ಪಿ
ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಎಂಬ ಯೂಟ್ಯೂಬರ್ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿ ಬರುತ್ತಿದೆ. ಯೂಟ್ಯೂಬ್ನಲ್ಲಿ 20 ಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು ಹೊಂದಿರುವ ಮುಕಳೆಪ್ಪ ಹಿಂದೂ ಯುವತಿಯೊಬ್ಬರನ್ನು ರೆಜಿಸ್ಟಾರ್ ಮದುವೆಯಾಗರುವ ದಾಖಲೆಗಳಿವೆ. ಗಾಯತ್ರಿ ಎಂಬ ಹುಡುಗಿಯನ್ನು ಈತ ಮದುವೆಯಾಗಿರುವ ಖ್ವಾಜಾನಾ ವಿರುದ್ಧ ದೂರು ದಾಖಲಾಗಿದೆಯೇ ? ಈ ವೀಡಿಯೋ ನೋಡಿ.
ಧಾರವಾಡ, ಸೆಪ್ಟೆಂಬರ್ 21: ನಕಲಿ ದಾಖಲೆ ತೋರಿಸಿ ಹಿಂದೂ ಯುವತಿಯನ್ನು ಮದುವೆಯಾಗಿದ್ದಾರೆಂದು ಕನ್ನಡದ ಖ್ಯಾತ ಯೂಟ್ಯೂಬರ್ ಕ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ (Youtuber Mukaleppa) ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಯುವತಿಯ ಹೆತ್ತವರು ಹಿಂದೂಪರ ಸಂಘಟನೆಗಳ ಜೊತೆಗೆ ಠಾಣೆಗೆ ಆಗಮಿಸಿ ಮುಕಳೆಪ್ಪ ವಿರುದ್ಧ ಜೀವ ಬೆದರಿಕೆ ಮತ್ತು ಅಪಹರಣ ಪ್ರಕರಣ ದಾಖಲಿಸಿದ್ದಾರೆ. ಇನ್ನು ಪ್ರಕರಣ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಕ್ರಿಯಿಸಿ ಗಾಯತ್ರಿ ಎಂಬ ಹಿಂದೂ ಯುವತಿಯನ್ನು ರೆಜಿಸ್ಟಾರ್ ಮದುವೆಯಾಗಿರುವ ಬಗ್ಗೆ ದಾಖಲೆಗಳಿವೆಯೆಂದು ಮಾಹಿತಿ ಬಿಚ್ಚಿಟ್ಟಿದ್ದಾರೆ.
