ಧಾರವಾಡ: ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣ ಮತ್ತೆ ಚುರುಕು ಪಡೆದಿದೆ. ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸದ್ಯ ಬೆಳಗಾವಿ ಜೈಲಿನಲ್ಲಿದ್ದಾರೆ. ಈ ಮಧ್ಯೆ, ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಸೋಮು ನ್ಯಾಮಗೌಡ ಎಂಬ ಅಧಿಕಾರಿಯನ್ನು ಬಂಧಿಸಿದ್ದಾರೆ.
ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಪ್ರಕರಣದಲ್ಲಿ (Yogesh Gowda murder case) ಬಂಧಿತನಾದ ಸೋಮು ನ್ಯಾಮಗೌಡ ಕೆಎಎಸ್ ಅಧಿಕಾರಿಯಾಗಿದ್ದು, ವಿನಯ್ ಕುಲಕರ್ಣಿ (Vinay Kulkarni) ಸಚಿವರಾಗಿದ್ದಾಗ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು. ಪ್ರಸ್ತುತ ಕೆಎಎಸ್ ಸೋಮು ನ್ಯಾಮಗೌಡ (Somu Nyamagowda) ಗದಗ ಎಪಿಎಂಸಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.
ಸಿಬಿಐ ಅಧಿಕಾರಿಗಳು ಸೋಮು ನ್ಯಾಮಗೌಡನನ್ನು ಗದಗದಲ್ಲಿ ಬಂಧಿಸಿದ್ದಾರೆ. ಇದೀಗ ಸೋಮು ನ್ಯಾಮಗೌಡನನ್ನು ಗದಗ್‌ನಿಂದ ಧಾರವಾಡ ಉಪನಗರ ಠಾಣೆಗೆ ಸಿಬಿಐ ಅಧಿಕಾರಿಗಳು ಕರೆ ತರುತ್ತಿದ್ದಾರೆ.
ಯೋಗೀಶ್‌ಗೌಡ ಕೊಲೆ ಕೇಸ್‌ನಲ್ಲಿ ವಿನಯ್‌ಗೆ ಜೈಲು: ವಿನಯ್ ಕುಲಕರ್ಣಿ ನಿವಾಸಕ್ಕೆ ನಟ ದರ್ಶನ್ ಭೇಟಿ
(Dharwad ZP member Yogesh Gowda murder case CBI arrests KAS officer Somu Nyamagowda in Gadag)
Published On - 9:15 am, Thu, 8 July 21