ವಿನಯ್ ಕುಲಕರ್ಣಿ ಆಪ್ತ, ಕೆಎಎಸ್​ ಸೋಮು ನ್ಯಾಮಗೌಡ ಬಂಧನದ ಹಿಂದಿದೆ ಸಿಬಿಐ ಮಾಸ್ಟರ್​​ ಪ್ಲಾನ್; ಕೇಸು ಮತ್ತಷ್ಟು ಬಿಗಿ

Yogesh Gowda Murder Case: ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದು ಕೋರಿ ಮಾಜಿ ಸಚಿವ ವಿನಯ್​ ಕುಲಕರ್ಣಿ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದಾರೆ. ಇಂದು ಆ ಅರ್ಜಿ ವಿಚಾರಣೆಗೆ ಬರಲಿದೆ. 

ವಿನಯ್ ಕುಲಕರ್ಣಿ ಆಪ್ತ, ಕೆಎಎಸ್​  ಸೋಮು ನ್ಯಾಮಗೌಡ ಬಂಧನದ ಹಿಂದಿದೆ ಸಿಬಿಐ ಮಾಸ್ಟರ್​​ ಪ್ಲಾನ್; ಕೇಸು ಮತ್ತಷ್ಟು ಬಿಗಿ
ವಿನಯ್ ಕುಲಕರ್ಣಿ ಆಪ್ತ, ಕೆಎಎಸ್​ ಸೋಮು ನ್ಯಾಮಗೌಡ ಬಂಧನದ ಹಿಂದಿದೆ ಸಿಬಿಐ ಮಾಸ್ಟರ್​​ ಪ್ಲಾನ್; ಕೇಸು ಮತ್ತಷ್ಟು ಬಿಗಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jul 08, 2021 | 9:48 AM

ಧಾರವಾಡ: ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತ ಕಾರ್ಯದರ್ಶಿ, ಕೆಎಎಸ್​ ಅಧಿಕಾರಿ ಸೋಮು ನ್ಯಾಮಗೌಡನನ್ನು ಸಿಬಿಐ ಅಧಿಕಾರಿಗಳು ರಾತ್ರಿಯೇ ಗದಗಕ್ಕೆ ತೆರಳಿ, ಇಂದು ಬೆಳಗಿನ ಜಾವ ಆತನನ್ನು ಅರೆಸ್ಟ್​ ಮಾಡಿ ಧಾರವಾಡ ಉಪನಗರ ಠಾಣೆಗೆ ಕರೆತಂದುಬಿಟ್ಟಿದ್ದಾರೆ. ಆದರೆ ಈ  ಬಂಧನದ ಹಿಂದೆ ಕುತೂಹಲಕಾರಿ ಸಂಗತಿಯಿದೆ. ಸಿಬಿಐ ಅಧಿಕಾರಿಗಳ ಮಾಸ್ಟರ್​​ ಪ್ಲಾನ್​ ಕೆಲಸ ಮಾಡಿದೆ. 

ಯೋಗೀಶಗೌಡ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರೋ ಸಿಬಿಐ  ಅಧಿಕಾರಿಗಳು ಪ್ರಕರಣವನ್ನು ಮತ್ತಷ್ಟು ಬಿಗಿಗೊಳಿಸಲು ಮತ್ತೊಂದು ತಂತ್ರ ಹೂಡಿದ್ದಾರೆ. ಸೋಮು ಬಂಧನದ ಹಿಂದಿದೆ ಸಿಬಿಐನ ಆ ಹೊಸ ತಂತ್ರ.

ವಿನಯ್​ ಕುಲಕರ್ಣಿಗೆ ಸಿಬಿಐ ಕಡೆಯಿಂದ ಮುಳುಗುನೀರು: ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದು ಕೋರಿ ಮಾಜಿ ಸಚಿವ ವಿನಯ್​ ಕುಲಕರ್ಣಿ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದಾರೆ. ಇಂದು ಆ ಅರ್ಜಿ ವಿಚಾರಣೆಗೆ ಬರಲಿದೆ.  ಈ ಹಿನ್ನೆಲೆಯಲ್ಲಿ ವಿನಯ್​ ಕುಲಕರ್ಣಿ ಆಪ್ತ ಸೋಮು ನ್ಯಾಮಗೌಡನನ್ನು ಇಂದೇ ಬಂಧಿಸಿ, ಹೊಸ ತಂತ್ರ ಹೂಡಿದೆ ಸಿಬಿಐ ಎಂದು ಪ್ರಕರಣ ತನಿಖೆಯನ್ನು ವಿಶ್ಲೇಷಿಸಲಾಗಿದೆ.

ಪ್ರಕರಣ ತೀವ್ರತೆಯನ್ನು ಕೋರ್ಟ್ ಗಮನಕ್ಕೆ ತರಲು ಸಿಬಿಐ ಈ ತಂತ್ರ ಮಾಡಿದ್ದು, ಆ ಮೂಲಕ  ಪ್ರಕರಣವನ್ನು  ಗಟ್ಟಿಗೊಳಿಸೋ  ಪ್ರಯತ್ನದಲ್ಲಿದೆ ಸಿಬಿಐ.

ಮತ್ತೆ ಚುರುಕು ಪಡೆದ ಯೋಗೀಶ್ ಗೌಡ ಹತ್ಯೆ ಪ್ರಕರಣ ತನಿಖೆ: ಗದಗದಲ್ಲಿ ಕೆಎಎಸ್ ಅಧಿಕಾರಿ ಅರೆಸ್ಟ್

(Yogesh Gowda murder case CBI arrests KAS officer Somu Nyamagowda Vinay Kulkarni hearing in Supreme Court today)

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್