
ಧಾರವಾಡ, (ಜನವರಿ 21): ಯುವತಿಯೋರ್ವಳು ಕೆಲಸ ಹುಡುಕಲು ಮನೆಯಿಂದ ಹೋಗಿದ್ದವಳು ಶವವಾಗಿ ಪತ್ತೆಯಾಗಿದ್ದಾಳೆ. ಪ್ಯಾರಾಮೆಡಿಕಲ್ ಪೂರ್ಣಗೊಳಸಿದ್ದ ಧಾರವಾಡದ (Dharwad) ಗಾಂಧಿ ಚೌಕ್ನ ನಿವಾಸಿ 21 ವರ್ಷ ಝಕಿಲಾ ಮುಲ್ಲಾ, ಕೆಲಸ ಹುಡುಕಲೆಂದು ನಿನ್ನೆ(ಜನವರಿ 20) ಮನೆಯಿಂದ ಹೋಗಿದ್ದವಳು. ಆದ್ರೆ, ಇಂದು (ಜನವರಿ 21) ಧಾರವಾಡದ ಮನಸೂರು ಗ್ರಾಮದ ರಸ್ತೆ ಪಕ್ಕ ಝಕಿಲಾ ಮುಲ್ಲಾ ಮೃತದೇಹ ಪತ್ತೆಯಾಗಿದೆ. ಯುವತಿ ಬಾಯಲ್ಲಿ ರಕ್ತ ಬಂದಿದ್ದು, ಆಕೆಯ ವೇಲ್ನಿಂದಲೇ ಕುತ್ತಿಗೆ ಬಿಗಿದು ಕೊಂದಿರುವ ಸಂಶಯ ಹುಟ್ಟುಕೊಂಡಿದೆ. ಇನ್ನು ಈ ಘಟನೆಯಿಂದ ಧಾರವಾಡ ಜನರೆಲ್ಲ ಬೆಚ್ಚಿ ಬಿದ್ದಿದ್ದಾರೆ.
ಧಾರವಾಡದ ಮನಸೂರು ಗ್ರಾಮದ ರಸ್ತೆ ಪಕ್ಕ ಶವವಾಗಿ ಬಿದ್ದಿರುವ ಈ ಚೆಲುವೆ ಝಕಿಲಾ ಮುಲ್ಲಾ.. 21 ವರ್ಷ ವಯಸ್ಸು.. ಧಾರವಾಡದ ಗಾಂಧಿ ಚೌಕ್ನ ನಿವಾಸಿ ಆಗಿದ್ದ ಯುವತಿ, ಪ್ಯಾರಾಮೆಡಿಕಲ್ ಪೂರೈಸಿದ್ಳು. ನಿನ್ನೆ ಸಂಜೆ ಲ್ಯಾಬ್ಗಳಲ್ಲಿ ಕೆಲಸ ಹುಡುಕಲೆಂದು ಮನೆಯಿಂದ ಹೊರಟಿದ್ಳು. ಆದ್ರೆ ರಾತ್ರಿಯಾದ್ರೂ ಮನೆಗೆ ಬಂದಿರಲಿಲ್ಲ.. ಮನೆಯವ್ರು ಧಾರವಾಡ ಟೌನ್ ಪೊಲೀಸರಿಗೆ ದೂರು ನೀಡಿದ್ರು. ಇಂದು ಬೆಳಗ್ಗೆ ಝಕಿಯಾ ಶವ ಪತ್ತೆ ಆಗಿದೆ. ಯುವತಿ ಬಾಯಲ್ಲಿ ರಕ್ತ ಬಂದಿದ್ದು, ಆಕೆಯ ವೇಲ್ನಿಂದಲೇ ಕುತ್ತಿಗೆ ಬಿಗಿದು ಕೊಂದಿರುವ ಸಂಶಯ ಎದ್ದಿದೆ.
ಇನ್ನು ಈ ಬಗ್ಗೆ ಧಾರವಾಡ ಎಸ್ಪಿ ಗುಂಜನ್ ಆರ್ಯ ಪ್ರತಿಕ್ರಿಯಿಸಿದ್ದು, ಝಕಿಯಾ ಎನ್ನುವ ಯುವತಿಯ ಶವ ಪತ್ತೆಯಾಗಿದೆ. ನಿನ್ನೆ ಮಧ್ಯಾಹ್ನ ಊಟ ಮಾಡಿ ಮನೆಯಿಂದ ಹೊರಹೋಗಿದ್ದಳು. ನಮಗೆ ಇಂದು ಮುಂಜಾನೆ ಶವ ಬಿದ್ದಿರುವ ಬಗ್ಗೆ ಮಾಹಿತಿ ಬಂದಿತ್ತು. ಕತ್ತು ಹಿಸುಕಿ ಸಾವಾಗಿದೆ ಎಂದು ಸದ್ಯ ನಮಗೆ ಮಾಹಿತಿ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಿದ್ದೇವೆ. ಸುಕೋ ಟೀಂ ಪರಿಶೀಲನೆ ನಡೆಸಿದ್ದು, ಮೆಡಿಕಲ್ ಪರೀಕ್ಷೆ ನಂತರ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ. ಕುಟುಂಬದವರಿಗೆ ನಿನ್ನೆ ರಾತ್ರಿ ಮೆಸೆಜ್ ಕೂಡಾ ಮಾಡಿದ್ದಾಳೆ. ಅದರ ಬಗ್ಗೆ ಕೂಡಾ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಧಾರವಾಡದ ಸಾಧನಕೇರಿಯ ಯುವಕನನ್ನ ಝಕಿಯಾ ಇಷ್ಟಪಟ್ಟಿದ್ದು, ಮದ್ವೆಗೂ ಮನೆಯವರು ಒಪ್ಪಿದ್ದರು. ಹೀಗಾಗಿ ಮುಂದಿನ ತಿಂಗಳು ನಿಶ್ಚಿತಾರ್ಥಕ್ಕೆ ಮಾಡಲು ತೀರ್ಮಾನಿಸಿದ್ದರು. ಆದ್ರೆ, ಇದೀಗ ಚೆಲುವೆಯ ಹತ್ಯೆಯಾಗಿದ್ದು, ಹತ್ತಾರು ಪ್ರಶ್ನೆ ಹುಟ್ಟುಹಾಕಿದೆ. ಪೊಲೀಸರು ಸದ್ಯ ಕೊಲೆಗಾರರ ಪತ್ತೆಗೆ ಮುಂದಾಗಿದ್ದಾರೆ. ಟೆಕ್ನಿಕಲ್ ಎವಿಡೆನ್ಸ್ಗಳ ಹಿಂದೆ ಬಿದ್ದಿದ್ದಾರೆ.
Published On - 7:00 pm, Wed, 21 January 26