ಅಕ್ರಮ ಪಟಾಕಿ ಗೋದಾಮು ಮೇಲೆ 70 ಅಧಿಕಾರಿಗಳಿಂದ ದಾಳಿ: ಕೋಟ್ಯಂತರ ಮೌಲ್ಯದ ಪಟಾಕಿ ಸಂಗ್ರಹ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 14, 2023 | 7:34 PM

ಅತ್ತಿಬೆಲೆ ದುರಂತದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು ಇಂದು ಹುಬ್ಬಳ್ಳಿಯ 15 ಕಿಲೋ ಮೀಟರ್ ದೂರದಲ್ಲಿರುವ ಶೆರೆವಾಡ ಗ್ರಾಮದಲ್ಲಿ ಪಟಾಕಿ ಗೋಡೌನ್ ಮೇಲೆ ಬರೋಬ್ಬರಿ 70 ಅಧಿಕಾರಿಗಳ ತಂಡ ದಾಳಿ ಮಾಡಿದ್ದಾರೆ. 72 ಟನ್ ಪಟಾಕಿ ಪತ್ತೆಯಾಗಿದ್ದು ವಶಕ್ಕೆ ಪಡೆದಿದ್ದಾರೆ.

ಅಕ್ರಮ ಪಟಾಕಿ ಗೋದಾಮು ಮೇಲೆ 70 ಅಧಿಕಾರಿಗಳಿಂದ ದಾಳಿ: ಕೋಟ್ಯಂತರ ಮೌಲ್ಯದ ಪಟಾಕಿ ಸಂಗ್ರಹ
ಸೀಜ್​ ಮಾಡಲಾದ ಪಟಾಕಿ
Follow us on

ಹುಬ್ಬಳ್ಳಿ, ಅಕ್ಟೋಬರ್​​​ 14: ಹುಬ್ಬಳ್ಳಿಯ 15 ಕಿಲೋ ಮೀಟರ್ ದೂರದಲ್ಲಿರುವ ಶೆರೆವಾಡ ಗ್ರಾಮದಲ್ಲಿ ಪಟಾಕಿ (firecracker) ಗೋಡೌನ್ ಮೇಲೆ ಇಂದು ಬರೋಬ್ಬರಿ 70 ಅಧಿಕಾರಿಗಳ ತಂಡ ದಾಳಿ ಮಾಡಿದ್ದಾರೆ. ಅಕ್ರಮವಾಗಿ ಪಟಾಕಿ ಸಂಗ್ರಹ ಆರೋಪದಡಿ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ವಾಯುಮಾಲಿನ್ಯ, ಅಗ್ನಿ ಶಾಮಕ ದಳದ ಜಂಟಿ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಶೆರೆವಾಡ ಗ್ರಾಮದ ಸರ್ವೇ ನಂಬರ್ 458 ರಲ್ಲಿ ಆರ್ ಆರ್ ಹೆಬಸೂರ ಅವರಿಗೆ ಸೇರಿದ ಗೋಡೌನ್ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, 72 ಟನ್ ಪಟಾಕಿ ಪತ್ತೆ ಆಗಿದೆ.

ಅತ್ತಿಬೆಲೆ ಪಟಾಕಿ‌ ದುರಂತದಿಂದ ಜಿಲ್ಲೆಯ‌ ಕೆಲವು ಕಡೆ ಅಧಿಕಾರಿಗಳು ದಾಳಿ‌ ಮಾಡಿದ್ದಾರೆ. ಆದರೆ ಧಾರವಾಡ ಜಿಲ್ಲೆಯಲ್ಲಿ‌ ಇಂದು ಅತೀ ದೊಡ್ಡ ದಾಳಿಯನ್ನು ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ‌. ಆರ್ ಆರ್ ಹೆಬಸೂರ ಅವರು ಲೈಸೆನ್ಸ್ ‌ಪಡೆದು ಪಟಾಕಿ‌ ಸಂಗ್ರಹ ಮಾಡಿದ್ದರು. ಕೆಲವು ನ್ಯೂನ್ಯತೆ ಕಂಡು‌ ಬಂದಿರೋ‌ ಕಾರಣಕ್ಕೆ ಪಟಾಕಿಯನ್ನ ಬೇರ್ಪಡಿಸಿ ಇಡಲಾಗದೆ. ಕೆಲ‌ ಪಟಾಕಿಗಳ ಮೇಲೆ ಯಾವದೇ ಅಧಿಕೃತ ನಂಬರ್ ಇರದ ಕಾರಣ ಆ ಪಟಾಕಿಯನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಇದನ್ನೂ ಓದಿ: ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಪಟಾಕಿ ದಾಸ್ತಾನು ಮಳಿಗೆಗಳ ಮೇಲೆ ದಾಳಿ; ರೂ. 24 ಲಕ್ಷ ಮೌಲ್ಯದ ಪಟಾಕಿ ಜಪ್ತಿ

ಹೆಬಸೂರ ಅವರು ಸಂಗ್ರಹ ಮಾಡಿದ್ದು ಬರೋಬ್ಬರಿ 72 ಟನ್ ಪಟಾಕಿ. 200 ಟನ್ ಸಂಗ್ರಹ ಮಾಡಲು ಮಾಲೀಕರು ಲೈಸೆನ್ಸ್ ಪಡೆದಿದ್ದಾರಂತೆ. ಆದರೆ ಇಲ್ಲಿರುವ ಕೆಲ ಪಟಾಕಿಗಳ ಮೇಲೆ ಗ್ರೀನ್ ಪಟಾಕಿ ಎಂದು‌ ನಮೂದಿಸಿದ್ದರು ಅದಕ್ಕೆ ಯಾವದೇ ಅಧಿಕೃತ ನಂಬರ್ ಇಲ್ಲ. ಇದು ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿದೆ. ಅದೇ ಕಾರಣಕ್ಕೆ 72 ಟನ್ ಪಟಾಕಿಯಲ್ಲಿ ಯಾವ ಪಟಾಕಿ‌ ಬಾಕ್ಸ್ ಮೇಲೆ ನಂಬರ್ ಇಲ್ಲವೋ ಅಂತಹ ಸುಮಾರು 20 ಟನ್ ಪಟಾಕಿಯನ್ನು ಸೀಜ್ ಮಾಡಲಾಗಿದೆ.

ಇದನ್ನೂ ಓದಿ: ಪಟಾಕಿ ಅಂಗಡಿ ಮಾಲೀಕರ ಕಳ್ಳಾಟ: 1 ಲಾರಿ, 3 ಕ್ಯಾಂಟರ್​ಗಳಲ್ಲಿದ್ದ ಪಟಾಕಿ ಜಪ್ತಿ ಮಾಡಿದ ಪೊಲೀಸ್​

ಹೆಬಸೂರ ಅವರ ಗೋಡೌನ್ ನಿಂದಲೇ ಬಹುತೇಕ ಉತ್ತರ ಕರ್ನಾಟಕಕ್ಕೆ ಪಟಾಕಿ‌ ಸರಬರಾಜು ಆಗುತ್ತಿದೆ ಎನ್ನಲಾಗಿದೆ. ಅಂದಾಜು ಕೋಟಿ ಮೌಲ್ಯದ ಪಟಾಕಿ ಅಕ್ರಮವಾಗಿ ಸಂಗ್ರಹ ಮಾಡಿರೋ ಬಗ್ಗೆ ಗೋಡೌನ್ ಮಾಲೀಕರು ಹೇಳೋದೆ ಬೇರೆ. ನಾವು ಅನುಮತಿ ಪಡೆದು ಪಟಾಕಿ‌ ಸಂಗ್ರಹ ಮಾಡಿದ್ದೇವೆ, ಆದರೆ ನಮಗೆ ಕೊಡೋರು ನಮಗೆ ಅಧಿಕೃತ ನಂಬರ್ ಬಗ್ಗೆ ಮಾಹಿತಿ ನೀಡಿಲ್ಲ, ಅವರ ಮೇಲೂ ಕೇಸ್ ದಾಖಲಿಸಬೇಕು ಅಂತಾರೆ.

ಅತ್ತಿಬೆಲೆ ದುರಂತದ ಬಳಿಕ ಅಧಿಕಾರಿಗಳು ಎಚ್ಚೆತ್ತು ಅಕ್ರಮ ಪಟಾಕಿ ಸಂಗ್ರಹ ಗೋಡೌನ್ ಮೇಲೆ ದಾಳಿ ಮಾಡಿದ್ದಾರೆ‌. ಮಾಲೀಕರು ನಾವು ತಪ್ಪು ಮಾಡಿಲ್ಲ ಅಂತಿದ್ರೆ, ಇತ್ತ ಅಧಿಕಾರಿಗಳು ಪೊಲೀಸರು ಮುಂದಿನ‌ ಕ್ರಮ ಕೈಗೊಳ್ತಾರೆ ಎಂದು ಹೇಳುತ್ತಿದ್ದಾರೆ. ಪಟಾಕಿ‌ ಸಂಗ್ರಹ ನೋಡಿದ್ರೆ, ಮತ್ತೊಂದು ದೊಡ್ಡ ದುರಂತ ತಪ್ಪಿದಂತಾಗಿದೆ ಅಂತಾ ಹೇಳಬಹುದು. ಇದೀಗ ಮಾಲೀಕರ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರ ತನಿಖೆಯ ನಂತರ ಪಟಾಕಿ ಅಕ್ರಮವೋ, ಸಕ್ರಮವೋ ಅನ್ನೋದು ಬಯಲಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.