ಪಟಾಕಿ ಅಂಗಡಿ ಮಾಲೀಕರ ಕಳ್ಳಾಟ: 1 ಲಾರಿ, 3 ಕ್ಯಾಂಟರ್ಗಳಲ್ಲಿದ್ದ ಪಟಾಕಿ ಜಪ್ತಿ ಮಾಡಿದ ಪೊಲೀಸ್
ಅಕ್ರಮವಾಗಿ ವಾಹನಗಳಲ್ಲಿ ಲೋಡ್ ಗಟ್ಟಲೇ ಪಟಾಕಿಯನ್ನ ತುಂಬಿ ಖಾಸಗಿ ಜಾಗದಲ್ಲಿ ನಿಲ್ಲಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಹಾಗೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆ ಮೂಲಕ ಸೂರ್ಯನಗರ ವ್ಯಾಪ್ತಿಯಲ್ಲಿ ಪಟಾಕಿ ಅಂಗಡಿ ಮಾಲೀಕರು ಕಳ್ಳಾಟ ನಡೆಸಿದ್ದರು. 1 ಲಾರಿ, 3 ಕ್ಯಾಂಟರ್ಗಳಲ್ಲಿದ್ದ ಪಟಾಕಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆನೇಕಲ್, ಅಕ್ಟೋಬರ್ 12: ಅಕ್ರಮವಾಗಿ ವಾಹನಗಳಲ್ಲಿ ಲೋಡ್ ಗಟ್ಟಲೇ ಪಟಾಕಿ (firecrackers) ಯನ್ನ ತುಂಬಿ ಖಾಸಗಿ ಜಾಗದಲ್ಲಿ ನಿಲ್ಲಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಹಾಗೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆನೇಕಲ್ ತಾಲ್ಲೂಕಿನ ರಾಮಸಾಗರದ ಖಾಸಗಿ ಜಾಗವೊಂದರಲ್ಲಿ ಒಂದು ಲಾರಿ ಹಾಗೂ ನಾಲ್ಕು ಕ್ಯಾಂಟರ್ ವಾಹನಗಳಲ್ಲಿ ಅಕ್ರಮವಾಗಿ ಪಟಾಕಿಯನ್ನ ಲೋಡ್ ಮಾಡಿ ಇಡಲಾಗಿತ್ತು. ಆ ಮೂಲಕ ಸೂರ್ಯನಗರ ವ್ಯಾಪ್ತಿಯಲ್ಲಿ ಪಟಾಕಿ ಅಂಗಡಿ ಮಾಲೀಕರು ಕಳ್ಳಾಟ ನಡೆಸಿದ್ದರು. 1 ಲಾರಿ, 3 ಕ್ಯಾಂಟರ್ಗಳಲ್ಲಿದ್ದ ಪಟಾಕಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಅತ್ತಿಬೆಲೆಯಲ್ಲಿ ನಡೆದ ಅಗ್ನಿದುರಂತ ಸಂಭವಿಸಿದ ಬಳಿಕ ತಾಲ್ಲೂಕಿನಲ್ಲಿದ್ದ ಹಲವು ಪಟಾಕಿ ಮಳಿಗೆಗಳ ಮಾಲೀಕರು ಅಂಗಡಿಗಳಲ್ಲಿದ್ದ ಪಟಾಕಿ ಹಾಗೂ ತಮಿಳುನಾಡಿನಿಂದ ಬಂದಿದ್ದ ಪಟಾಕಿಯನ್ನ ವಾಹನಗಳಲ್ಲಿ ಲೋಡ್ ಮಾಡಿ ಅಕ್ರಮವಾಗಿ ಇಡಲಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಚಿಕಿತ್ಸೆ ಉಚಿತವೆಂದಿದ್ರೂ ಕುಟುಂಬಸ್ಥರಿಂದ ಹಣ ವಸೂಲಿ: ಸಿಎಂ ಮಾತಿಗೆ ಕ್ಯಾರೇ ಎನ್ನದ ಸೇಂಟ್ ಜಾನ್ಸ್ ಆಸ್ಪತ್ರೆ
ಈ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದ ಸೂರ್ಯನಗರ ಪೊಲೀಸರು ಪುರಸಭೆ ಹಾಗೂ ಕಂದಾಯ ಅಧಿಕಾರಿಗಳ ತಂಡದೊಂದಿಗೆ ದಾಳಿ ನಡೆಸಿ ಪಟಾಕಿ ಲೋಡ್ ತುಂಬಿದ್ದ ವಾಹನಗಳನ್ನ ವಶಕ್ಕೆ ಪಡೆದು ಕ್ರಮಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಅತ್ತಿಬೆಲೆ ಅಗ್ನಿ ದುರಂತ: ಗಾಯಾಳು ಬಳಿ ಹಣ ಪಡೆದ ಸೇಂಟ್ ಜಾನ್ಸ್ ಆಸ್ಪತ್ರೆ ಮತ್ತು ವೈದ್ಯನ ವಿರುದ್ಧ ಎಫ್ಐಆರ್ ದಾಖಲು
ಅತ್ತಿಬೆಲೆ ಪಟಾಕಿ ಅಗ್ನಿದುರಂತಕ್ಕೆ ಲೋಕಾಯುಕ್ತ ಎಂಟ್ರಿ ಕೊಟ್ಟಿದ್ದು, ಪ್ರಕರಣದ ಗಂಭೀರತೆ ಹೆಚ್ಚಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ರವರು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದು, ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ನಡುವೆ ಅಗ್ನಿದುರಂತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಮತ್ತೋರ್ವ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಕೋಲಾರ ಜಿಲ್ಲೆಯಾದ್ಯಂತ ಅಕ್ರಮ ಪಟಾಕಿ ಗೋದಾಮು ಮೇಲೆ ದಾಳಿ
ಕೋಲಾರ ಜಿಲ್ಲೆಯಾದ್ಯಂತ ಅಕ್ರಮ ಪಟಾಕಿ ಗೋದಾಮು ಮೇಲೆ ತಹಶೀಲ್ದಾರ್‌ಗಳ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಕೋಲಾರ, ಶ್ರೀನಿವಾಸಪುರ, ಮಾಲೂರು, ಬಂಗಾರಪೇಟೆ, ಕೆಜಿಎಫ್, ಮುಳಬಾಗಿಲು ತಾಲೂಕುಗಳಲ್ಲಿ ದಾಳಿ ಮಾಡಿ ಲಕ್ಷಾಂತರ ರೂ. ಮೌಲ್ಯದ ಪಟಾಕಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.