AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ತಿಬೆಲೆ ಅಗ್ನಿ ದುರಂತ: ಗಾಯಾಳು ಬಳಿ ಹಣ ಪಡೆದ ಸೇಂಟ್ ಜಾನ್ಸ್ ಆಸ್ಪತ್ರೆ ಮತ್ತು ವೈದ್ಯನ ವಿರುದ್ಧ ಎಫ್​ಐಆರ್​​ ದಾಖಲು

ಅತ್ತಿಬೆಲೆ ಅಗ್ನಿ ದುರಂತದಲ್ಲಿ ಗಾಯಗೊಂಡಿರುವವರಿಗೆ ಸರ್ಕಾರ ಸ್ವತಃ ಉಚಿತ ಚಿಕಿತ್ಸೆ ನೀಡಿ ಎಂದು ಹೇಳಿದ್ದರು ಸಹ ಹಣ ಪಡೆದಿರುವ ನಗರದ ಸೇಂಟ್ ಜಾನ್ಸ್​ ಆಸ್ಪತ್ರೆ ಮತ್ತು ಹಣ ಪಾವತಿಗೆ ಸೂಚಿಸಿದ್ದ ವೈದ್ಯ ಸಾಗರ್​ ವಿರುದ್ಧ ಬೆಂಗಳೂರು ನಗರ ಡಿಸಿ ದಯಾನಂದ ದೂರು ಆಧರಿಸಿ FIR ದಾಖಲು ಮಾಡಲಾಗಿದೆ.

ಅತ್ತಿಬೆಲೆ ಅಗ್ನಿ ದುರಂತ: ಗಾಯಾಳು ಬಳಿ ಹಣ ಪಡೆದ ಸೇಂಟ್ ಜಾನ್ಸ್ ಆಸ್ಪತ್ರೆ ಮತ್ತು ವೈದ್ಯನ ವಿರುದ್ಧ ಎಫ್​ಐಆರ್​​ ದಾಖಲು
ಪ್ರಾತಿನಿಧಿಕ ಚಿತ್ರ
Kiran Surya
| Edited By: |

Updated on:Oct 12, 2023 | 9:19 PM

Share

ಬೆಂಗಳೂರು, ಅಕ್ಟೋಬರ್​​​​​ 12: ಅತ್ತಿಬೆಲೆ ಅಗ್ನಿ ದುರಂತದಲ್ಲಿ ಗಾಯಗೊಂಡಿರುವವರಿಗೆ ಸರ್ಕಾರ ಸ್ವತಃ ಉಚಿತ ಚಿಕಿತ್ಸೆ ನೀಡಿ ಎಂದು ಹೇಳಿದ್ದರು ಸಹ ಹಣ ಪಡೆದಿರುವ ನಗರದ ಸೇಂಟ್ ಜಾನ್ಸ್​ ಆಸ್ಪತ್ರೆ ವಿರುದ್ದ ಬೆಂಗಳೂರು ನಗರ ಡಿಸಿ ದಯಾನಂದ ದೂರು ಆಧರಿಸಿ FIR ದಾಖಲು ಮಾಡಲಾಗಿದೆ. ದುರಂತದಲ್ಲಿ ಗಾಯಗೊಂಡಿದ್ದ ವೆಂಕಟೇಶ್ ಇಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದ. ಆತನ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸುವುದಾಗಿ ಸೂಚನೆ ನೀಡಿದರೂ ಸಹ ಮೊಬೈಲ್ ನಂಬರ್ ಕೊಟ್ಟು ಹಣ ಪಾವತಿಗೆ ಸೂಚಿಸಿದ್ದ ವೈದ್ಯ ಸಾಗರ್​ ವಿರುದ್ಧ ಕೂಡ ಎಫ್​ಐಆರ್​ ಹಾಕಲಾಗಿದೆ.

ಸ್ವತಃ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಅವರು ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಎಂದು ಹೇಳಿದ್ದರೂ ಕೂಡ ಮೃತನ ಕುಟುಂಬಸ್ಥರಿಂದ ಆಸ್ಪತ್ರೆ ಸಿಬ್ಬಂದಿಗಳು ಹಣ ಕಟ್ಟಿಸಿಕೊಂಡಿದ್ದರು. ಸದ್ಯ ಇದಕ್ಕೆ ಸಾಕ್ಷಿ ಎನ್ನುವಂತೆ ಆಸ್ಪತ್ರೆಯಲ್ಲಿ ಕಟ್ಟಿದ ಬಿಲ್ ರಿಸಿಪ್ಟ್ ಲಭ್ಯವಾಗಿವೆ.

ಇದನ್ನೂ ಓದಿ: ಚಿಕಿತ್ಸೆ ಉಚಿತವೆಂದಿದ್ರೂ ಕುಟುಂಬಸ್ಥರಿಂದ ಹಣ ವಸೂಲಿ: ಸಿಎಂ ಮಾತಿಗೆ ಕ್ಯಾರೇ ಎನ್ನದ ಸೇಂಟ್ ಜಾನ್ಸ್ ಆಸ್ಪತ್ರೆ

ಶನಿವಾರ ಸಂಜೆ ಸೇಂಟ್ ಜಾನ್ಸ್ ಆಸ್ಪತ್ರೆಗೆ ಗಾಯಾಳು ವೆಂಕಟೇಶ್​ ದಾಖಲಾಗಿದ್ದ. ಈ ವೇಳೆ ಎಟಿಎಂ ಕಾರ್ಡ್ ಬಳಸಿ 40 ಸಾವಿರ ರೂ. ಕಟ್ಟಿದ್ದಾರೆ. ಸಂಜೆ 500 ರೂ. ಪಾವತಿಸಿದ್ದಾರೆ. ನಂತರ ಶನಿವಾರ ರಾತ್ರಿ ಪೋಷಕರು 4000 ರೂ. ಕಟ್ಟಿದ್ದಾರೆ. ಭಾನುವಾರದಂದು ಮತ್ತೆ ಫೋನ್ ಪೇ ಮೂಲಕ 15 ಸಾವಿರ ರೂ. ಕಟ್ಟಿದ್ದಾರೆ. ಆ ಮೂಲಕ ಸೇಂಟ್ ಜಾನ್ಸ್ ಆಸ್ಪತ್ರೆ ವಸೂಲಿಗೆ ಇಳಿದಿತ್ತು.

ಇದನ್ನೂ ಓದಿ: ಅತ್ತಿಬೆಲೆ ಅಗ್ನಿ ದುರಂತ: ಸಾವಿನ ಸಂಖ್ಯೆ 16ಕ್ಕೆ ಏರಿಕೆ, ಪಟಾಕಿ ಖರೀದಿಸಲು ಹೋಗಿ ದುರಂತ ಅಂತ್ಯಕಂಡ

ಸೂಕ್ತ ಚಿಕಿತ್ಸೆ ನೀಡದಿದ್ದಕ್ಕೆ ಗಾಯಾಳು ವೆಂಕಟೇಶ್​ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿ ಸೇಂಟ್​ ಜಾನ್ಸ್​ ಆಸ್ಪತ್ರೆ ಬಳಿ ಪ್ರತಿಭಟನೆ ಮಾಡಿದ್ದರು. ಪ್ರತಿಭಟನಾ ಸ್ಥಳಕ್ಕೆ ಬೆಂಗಳೂರು ನಗರ ಡಿಸಿ ದಯಾನಂದ ಭೇಟಿ ನೀಡಿ ಮನವಿ ಆಲಿಸಿದ್ದರು. ಬಳಿಕ ಮಾತನಾಡಿದ ಅವರು, ಶನಿವಾರ ಹಾಗೂ ಭಾನುವಾರ ಬೆಳಗ್ಗೆ ಕುಟುಂಬದವರು ಆಸ್ಪತ್ರೆಗೆ ಪೇಮೆಂಟ್ ಮಾಡಿದ್ದಾರೆ. ಸರ್ಕಾರದಲ್ಲಿ ನಿರ್ಧಾರ ಆದ ತಕ್ಷಣ ಭಾನುವಾರ ಮಧ್ಯಾಹ್ನದ ನಂತರ ನಮ್ಮ ಅಧಿಕಾರಿಗಳು ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದಾರೆ ಎಂದರು.

ನಾವು ಸತತವಾಗಿ ಸಂಪರ್ಕದಲ್ಲಿದ್ದೇವೆ. ನಮ್ಮ ಡಿಹೆಚ್​ಓ ಹಾಗೂ ಆರೋಗ್ಯಧಿಕಾರಿಗಳು ಸ್ಥಳದಲ್ಲಿದ್ದು ಕರ್ತವ್ಯ ನಿರ್ವಹಿಸಿದ್ದಾರೆ. ಬೌರಿಂಗ್ ಆಸ್ಪತ್ರೆ ಹಾಗೂ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ನಮ್ಮ ಆರೋಗ್ಯಧಿಕಾರಿಗಳಿದ್ದಾರೆ. ಮೂರು ನಾಲ್ಕು ದಿನದಲ್ಲಿ ಐದು ಲಕ್ಷ ರೂ. ಪರಿಹಾರ ಮನೆಯವರ ಕೈಸೇರಲಿದೆ. ಅನಧಿಕೃತವಾಗಿ ಆಸ್ಪತ್ರೆ ಕಟ್ಟಿಸಿಕೊಂಡಿರುವ ಹಣವನ್ನು ಸಹ ವಾಪಸ್ ಮಾಡಲಾಗುತ್ತೆ. ಆಸ್ಪತ್ರೆ ನಿರ್ಲಕ್ಷ್ಯದ ವಿಚಾರವಾಗಿ ತನಿಖೆ ನಡೆಸಲಾಗುತ್ತೆ. ಸ್ಕಿನ್​ಗಾಗಿ ಹಣ ಪಡೆದ ವ್ಯಕ್ತಿಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 9:15 pm, Thu, 12 October 23