ಚಿಕಿತ್ಸೆ ಉಚಿತವೆಂದಿದ್ರೂ ಕುಟುಂಬಸ್ಥರಿಂದ ಹಣ ವಸೂಲಿ: ಸಿಎಂ ಮಾತಿಗೆ ಕ್ಯಾರೇ ಎನ್ನದ ಸೇಂಟ್ ಜಾನ್ಸ್ ಆಸ್ಪತ್ರೆ

ಅತ್ತಿಬೆಲೆ ಪಟಾಕಿ‌ ಗೋಡೌನ್‌ನಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಅವರು ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಎಂದು ಹೇಳಿದ್ದರೂ ಕೂಡ ಮೃತನ ಕುಟುಂಬಸ್ಥರಿಂದ ಆಸ್ಪತ್ರೆ ಸಿಬ್ಬಂದಿಗಳು ಹಣ ಕಟ್ಟಿಸಿಕೊಂಡಿದ್ದಾರೆ. ಸದ್ಯ ಇದಕ್ಕೆ ಸಾಕ್ಷಿ ಎನ್ನುವಂತೆ ಬಿಲ್ ರಿಸಿಪ್ಟ್ ಲಭ್ಯ ಆಗಿವೆ. 

ಚಿಕಿತ್ಸೆ ಉಚಿತವೆಂದಿದ್ರೂ ಕುಟುಂಬಸ್ಥರಿಂದ ಹಣ ವಸೂಲಿ: ಸಿಎಂ ಮಾತಿಗೆ ಕ್ಯಾರೇ ಎನ್ನದ ಸೇಂಟ್ ಜಾನ್ಸ್ ಆಸ್ಪತ್ರೆ
ಅತ್ತಿಬೆಲೆ ಪಟಾಕಿ ದುರಂತ
Follow us
Kiran Surya
| Updated By: ಗಂಗಾಧರ​ ಬ. ಸಾಬೋಜಿ

Updated on: Oct 12, 2023 | 3:59 PM

ಬೆಂಗಳೂರು, ಅಕ್ಟೋಬರ್​​ 12: ಅತ್ತಿಬೆಲೆ ಪಟಾಕಿ ಅಗ್ನಿ ದುರಂತದಲ್ಲಿ (Attibele Fire Crackers Tragedy) ಇದುವರೆಗೂ 16 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಅವರು ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ಎಂದು ಹೇಳಿದ್ದರೂ ಕೂಡ ಮೃತನ ಕುಟುಂಬಸ್ಥರಿಂದ ಆಸ್ಪತ್ರೆ ಸಿಬ್ಬಂದಿಗಳು ಹಣ ಕಟ್ಟಿಸಿಕೊಂಡಿದ್ದಾರೆ. ಸದ್ಯ ಇದಕ್ಕೆ ಸಾಕ್ಷಿ ಎನ್ನುವಂತೆ ಆಸ್ಪತ್ರೆಯಲ್ಲಿ ಕಟ್ಟಿದ ಬಿಲ್ ರಿಸಿಪ್ಟ್ ಲಭ್ಯ ಆಗಿವೆ.

ಶನಿವಾರ ಸಂಜೆ ಸೇಂಟ್ ಜಾನ್ಸ್ ಆಸ್ಪತ್ರೆಗೆ ಗಾಯಾಳು ವೆಂಕಟೇಶ್​ ದಾಖಲಾಗಿದ್ದ. ಈ ವೇಳೆ ಎಟಿಎಂ ಕಾರ್ಡ್ ಬಳಸಿ 40 ಸಾವಿರ ರೂ. ಕಟ್ಟಿದ್ದಾರೆ. ಸಂಜೆ 500 ರೂ. ಪಾವತಿಸಿದ್ದಾರೆ. ನಂತರ ಶನಿವಾರ ರಾತ್ರಿ ಪೋಷಕರು 4000 ರೂ. ಕಟ್ಟಿದ್ದಾರೆ. ಭಾನುವಾರದಂದು ಮತ್ತೆ ಫೋನ್ ಪೇ ಮೂಲಕ 15 ಸಾವಿರ ರೂ. ಕಟ್ಟಿದ್ದಾರೆ. ಆ ಮೂಲಕ ಸೇಂಟ್ ಜಾನ್ಸ್ ಆಸ್ಪತ್ರೆ ವಸೂಲಿಗೆ ಇಳಿದಿದೆ.

ಇದನ್ನೂ ಓದಿ: ಅತ್ತಿಬೆಲೆ ಅಗ್ನಿ ದುರಂತ: ಸಾವಿನ ಸಂಖ್ಯೆ 16ಕ್ಕೆ ಏರಿಕೆ, ಪಟಾಕಿ ಖರೀದಿಸಲು ಹೋಗಿ ದುರಂತ ಅಂತ್ಯಕಂಡ

ಮೃತ ವೆಂಕಟೇಶ್ ತಂದೆ ರಮಣ್ಣಪ್ಪ ಮಾತನಾಡಿ, ಮೊದಲ ದಿನ ನಾನು 40 ಸಾವಿರ ಹಣ್ಣ ಕಟ್ಟಿದೆ. ಎರಡನೇ ದಿನ 30 ಸಾವಿರ, ಭಾನುವಾರದ ನಂತರ 40 ಸಾವಿರ ಕೇಳಿದ್ದಾರೆ. ನಾನೊಬ್ಬ ಬಡವ ಆದರೂ, ನನ್ನ ಮಗನಿಗಾಗಿ ನಾನು ಹಣ ಹೊಂದಿಸಿ ಕಟ್ಟಿದೆ. ನಂತರ ಸಿಎಂ, ಡಿಸಿಎಂ ಬಂದ್ದು, ಉಚಿತವಾಗಿ ಚಿಕಿತ್ಸೆ ನೀಡಿ ಎಂದು ಹೇಳಿದ್ದಾರೆ. ಆ ಬಗ್ಗೆ ನಮಗೆ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ಆದರೂ ನನ್ನ ಮಗನಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಒಬ್ಬನೆ ಮಗ. ಆತನನ್ನು ಬಿಟ್ಟು ಯಾರು ಇಲ್ಲ. ಆಟೋ ಓಡಿಸಿ ನನ್ನ ಮಗನ ಸಾಕಿದ್ದೀನಿ, ಬಾಡಿ ಬಿಲ್ಡರ್ ಮಾಡಿಸಿದ್ದೆ. ನನ್ನ ಮಗ ಗಟ್ಟಿಮುಟ್ಟಾಗಿದ್ದ. 20% ಸುಟ್ಟಿದೆ ಅಂದರು. ಅಷ್ಟು ಸಹ ಸುಟ್ಟಿರಲಿಲ್ಲ, ಕೇವಲ ಬ್ಯಾಕ್ ಸೈಡ್ ಮಾತ್ರ ಸುಟ್ಟಿತ್ತು. ಮುಂದೆ ಏನು ಆಗಿರಲಿಲ್ಲ. ನನ್ನ ಮಗನ ಸಾಯುವ ವ್ಯಕ್ತಿ ಅಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅತ್ತಿಬೆಲೆ ಅಗ್ನಿ ದುರಂತ: ತನಿಖೆ ವೇಳೆ ಬಯಲಾಯ್ತು ಆರೋಪಿಗಳ ತಪ್ಪು

ಡಾ.‌ ಸಾಗರ್ ವಿರುದ್ಧ ಮೃತ ವೆಂಕಟೇಶ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕುಟುಂಬಸ್ಥರ ಬಳಿ 70 ಸಾವಿರ ರೂ. ಹಣ ಕೇಳಿದ್ದಾರೆ. ಹಣ ನೀಡಿಲ್ಲ ಅಂತ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಮೃತ ವೆಂಕಟೇಶ್ ಸಾವಿಗೆ ಸೇಂಟ್ ಜಾನ್ಸ್ ಆಸ್ಪತ್ರೆಯೇ ಕಾರಣ ಎಂದು ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರಿಂದ ಪ್ರತಿಭಟನೆ ಮಾಡಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಭೇಟಿ ನೀಡಿ ಮಾತನಾಡಿದ್ದು, ಶನಿವಾರ ಹಾಗೂ ಭಾನುವಾರ ಬೆಳಗ್ಗೆ ಕುಟುಂಬದವರು ಆಸ್ಪತ್ರೆಗೆ ಪೇಮೆಂಟ್ ಮಾಡಿದ್ದಾರೆ. ಸರ್ಕಾರದಲ್ಲಿ ನಿರ್ಧಾರ ಆದ ತಕ್ಷಣ ಭಾನುವಾರ ಮಧ್ಯಾಹ್ನದ ನಂತರ ನಮ್ಮ ಅಧಿಕಾರಿಗಳು ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದಾರೆ. ನಾವು ಸತತವಾಗಿ ಸಂಪರ್ಕದಲ್ಲಿದ್ದೇವೆ ಎಂದರು.

ನಮ್ಮ ಡಿಹೆಚ್​ಓ ಹಾಗೂ ಆರೋಗ್ಯಧಿಕಾರಿಗಳು ಸ್ಥಳದಲ್ಲಿದ್ದು ಕರ್ತವ್ಯ ನಿರ್ವಹಿಸಿದ್ದಾರೆ. ಬೌರಿಂಗ್ ಆಸ್ಪತ್ರೆ ಹಾಗೂ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ನಮ್ಮ ಆರೋಗ್ಯಧಿಕಾರಿಗಳಿದ್ದಾರೆ. ಮೂರು ನಾಲ್ಕು ದಿನದಲ್ಲಿ ಐದು ಲಕ್ಷ ಪರಿಹಾರ ಮನೆಯವರ ಕೈಸೇರಲಿದೆ. ಅನಧಿಕೃತವಾಗಿ ಆಸ್ಪತ್ರೆ ಕಟ್ಟಿಸಿಕೊಂಡಿರುವ ಹಣವನ್ನು ಸಹ ವಾಪಸ್ ಮಾಡಲಾಗುತ್ತೆ. ಆಸ್ಪತ್ರೆ ನಿರ್ಲಕ್ಷ್ಯದ ವಿಚಾರವಾಗಿ ತನಿಖೆ ನಡೆಸಲಾಗುತ್ತೆ. ಸ್ಕಿನ್​ಗಾಗಿ ಹಣ ಪಡೆದ ವ್ಯಕ್ತಿಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.