ನಮ್ಮ ಮೆಟ್ರೋದಲ್ಲಿ ಬುಧವಾರ ಒಂದೇ ದಿನ 7 ಲಕ್ಷ ಜನ ಪ್ರಯಾಣ

ಕರ್ನಾಟಕ ಸಾರಿಗೆ ಇಲಾಖೆಯು ಕೆಆರ್​ಪುರಂ ಮೆಟ್ರೋ ನಿಲ್ದಾಣದಿಂದ 37 ಫೀಡರ್ ಬಸ್ ಸೇವೆಗಳನ್ನು ಪ್ರಾರಂಭಿಸಿದೆ. ಈ ಫೀಡರ್ ಬಸ್‌ಗಳು ಕೆಆರ್​ಪುರಂ ಮೆಟ್ರೋ ನಿಲ್ದಾಣದಿಂದ ಹೊರ ವರ್ತುಲ ರಸ್ತೆಯ ಕಡೆಗೆ ಅನೇಕ ಐಟಿ ಪಾರ್ಕ್‌ಗಳನ್ನು ಹೊಂದಿರುವ ಸಿಲ್ಕ್​​ಬೋರ್ಡ್​ವರೆಗೆ ಕಾರ್ಯನಿರ್ವಹಿಸುತ್ತವೆ.

ನಮ್ಮ ಮೆಟ್ರೋದಲ್ಲಿ ಬುಧವಾರ ಒಂದೇ ದಿನ 7 ಲಕ್ಷ ಜನ ಪ್ರಯಾಣ
ನಮ್ಮ ಮೆಟ್ರೋ
Follow us
ವಿವೇಕ ಬಿರಾದಾರ
|

Updated on:Oct 13, 2023 | 7:16 AM

ಬೆಂಗಳೂರು ಅ.13: ಸೋಮವಾರದಿಂದ ಸಂಪೂರ್ಣ ನೇರಳೆ ಮಾರ್ಗ (Purple Line) ಆರಂಭವಾಗಿದ್ದು, ಚಲ್ಲಘಟ್ಟದಿಂದ-ವೈಟ್​ಫಿಲ್ಡ್​​ವರೆಗೆ 42 ಕಿಮೀ ಅನ್ನು ಕೇವಲ ಒಂದು ಗಂಟೆಯಲ್ಲಿ ಪ್ರಯಾಣ ಮಾಡಬಹುದಾಗಿದೆ. ಈ ಮಾರ್ಗ ಪ್ರಾರಂಭವಾದ ದಿನದಿಂದ ಮೆಟ್ರೋ (Metro) ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಈ ಬಗ್ಗೆ ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ (PC Mohan) ಎಕ್ಸ್​​ (ಟ್ವಿಟರ್​​​) ಟ್ವೀಟ್​ ಮಾಡಿ “ನಮ್ಮ ಮೆಟ್ರೋದಲ್ಲಿ ಬುಧವಾರ ಒಂದೇ ದಿನ 7,01,455 ಜನ ಪ್ರಯಾಣಿಸಿದ್ದಾರೆ ಎಂದು ತಿಳಿಸಿದ್ದಾರೆ”.

ಏತನ್ಮಧ್ಯೆ, ಪೀಕ್ ಅವರ್‌ಗಳಲ್ಲಿ ಮೆಟ್ರೋ ರೈಲುಗಳಲ್ಲಿ ಜನದಟ್ಟಣೆ ಹೆಚ್ಚಿರುತ್ತದೆ. ಹೀಗಾಗಿ ಜನದಟ್ಟಣೆ ಕಡೆಮೆ ಮಾಡಲು ಮೆಟ್ರೋ ರೈಲುಗಳ ಸಂಚಾರ ಏರಿಕೆ ಮಾಡುವಂತೆ ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ. ನೇರಳೆ ಮಾರ್ಗವು ಪೂರ್ವ ಬೆಂಗಳೂರನ್ನು ನಗರದ ಇತರ ಭಾಗಗಳಿಗೆ ಸಂಪರ್ಕಿಸುವುದರಿಂದ, ಅನೇಕ ಐಟಿ ಉದ್ಯೋಗಿಗಳು ದೈನಂದಿನ ಪ್ರಯಾಣಕ್ಕಾಗಿ ಮೆಟ್ರೋವನ್ನು ಬಳಸಲು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: ನೇರಳೆ ಮಾರ್ಗದಲ್ಲಿ ಒಂದೇ ದಿನ 3.35ಲಕ್ಷ ಜನ ಸಂಚಾರ; ಜನಸಂದಣಿಯಿಂದ ರೋಸಿಹೋದ ಟೆಕ್ಕಿ

ಕರ್ನಾಟಕ ಸಾರಿಗೆ ಇಲಾಖೆಯು ಕೆಆರ್​ಪುರಂ ಮೆಟ್ರೋ ನಿಲ್ದಾಣದಿಂದ 37 ಫೀಡರ್ ಬಸ್ ಸೇವೆಗಳನ್ನು ಪ್ರಾರಂಭಿಸಿದೆ. ಈ ಫೀಡರ್ ಬಸ್‌ಗಳು ಕೆಆರ್​ಪುರಂ ಮೆಟ್ರೋ ನಿಲ್ದಾಣದಿಂದ ಹೊರ ವರ್ತುಲ ರಸ್ತೆಯ (Outer Ring Road) ಕಡೆಗೆ ಅನೇಕ ಐಟಿ ಪಾರ್ಕ್‌ಗಳನ್ನು ಹೊಂದಿರುವ ಸಿಲ್ಕ್​​ಬೋರ್ಡ್​ವರೆಗೆ ಕಾರ್ಯನಿರ್ವಹಿಸುತ್ತವೆ ಮತ್ತು ಆಗಾಗ್ಗೆ ತೀವ್ರ ಟ್ರಾಫಿಕ್​​ನಿಂದ ತೊಂದರೆ ಉಂಟಾಗುತ್ತದೆ. ಈ ಫೀಡರ್ ಬಸ್‌ಗಳು ಬೆಳಿಗ್ಗೆ ಮತ್ತು ಸಂಜೆಯ ಪೀಕ್ ​ಅವರ್‌ ಅನುಗುಣವಾಗಿ ಕಾರ್ಯನಿವರ್ಹಿಸುತ್ತವೆ. ಪೀಕ್​ ಅವರ್‌ಗಳಲ್ಲಿ, ಫೀಡರ್ ಬಸ್‌ಗಳು ಪ್ರತಿ ಐದು ನಿಮಿಷಕ್ಕೊಮ್ಮೆ ಸಂಚರಿಸುತ್ತವೆ. ಜನದಟ್ಟಣೆ ಇಲ್ಲದ ಸಮಯದಲ್ಲಿ, ಪ್ರತಿ ಎಂಟು ನಿಮಿಷಗಳಿಗೆ ಬಸ್‌ಗಳು ಲಭ್ಯವಿರುತ್ತವೆ.

ಬೆಂಗಳೂರಿನ ಹೊರ ವರ್ತುಲ ರಸ್ತೆ ಪ್ರದೇಶದಲ್ಲಿ ಜನದಟ್ಟಣೆ ಕಡಿಮೆ ಮಾಡುವುದು ಸರ್ಕಾರದ ಧ್ಯೇಯವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಮುಂದಿನ ಆರು ತಿಂಗಳಲ್ಲಿ, ಬಿಎಂಟಿಸಿಯಲ್ಲಿ ಅನೇಕ ನಿರ್ಣಾಯಕ ಮತ್ತು ಅಭೂತಪೂರ್ವ ಬದಲಾವಣೆಗಳನ್ನು ತರಲಾಗುವುದು. ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸಲು ಹೆಚ್ಚುವರಿ 2,000 ಬಸ್‌ಗಳನ್ನು ಖರೀದಿಸಲು ಸರ್ಕಾರ ಯೋಜಿಸುತ್ತಿದೆ. ಪೂರ್ವ ಬೆಂಗಳೂರಿನಲ್ಲಿ ಕೆಲಸ ಮಾಡುವ ಜನರು ಕೆಲಸಕ್ಕೆ ಪ್ರಯಾಣಿಸಲು ಸಾರ್ವಜನಿಕ ಸಾರಿಗೆಯನ್ನು ಬಳಸಲು ಆದ್ಯತೆ ನೀಡುವಂತೆ ವಿನಂತಿಸಲಾಗಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:15 am, Fri, 13 October 23